New Posts
ಕಥೆ

ಬುದ್ಧನಾಗಲು ಹೊರಟವನು..!

              ಪುಟ್ಟಾರಾಧ್ಯ. ಎಸ್    ಮುನ್ನುಡಿ: ಕಾರಂತಜ್ಜಾರ ಬೆಟ್ಟದ ಜೀವ ಓದಿ ಮೂರ್ನಾಲ್ಕು ದಿನ ಬೆಟ್ಟದ ಜೀವವನ್ನು ನೆನೆಯುತ್ತಾ, ನಂತರ ಮರಳಿ ಮಣ್ಣಿಗೆ ಓದಿ ಅಜ್ಜಾರ ಬರಹದ ಸವಿಯನ್ನುಂಡಿದ್ದೆ. ಇಂತಹ ಕಡಲ ಜೀವಗಳು, ಬೆಟ್ಟದ ಜೀವಗಳು ನೂರಾರು ಇವೆ ಎಂದು ಅನಿಸಿದ್ದು ೨೦೧೦ ರ ಅಸುಪಾಸಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಬೈಫ್ ಸಂಸ್ಥೆಯ ವಾಲಂಟೀರ್ ಆಗಿ ಸೇರಿದ್ದಾಗ. ಸುವರ್ಣ ಸಂಕಲ್ಪ ಯೋಜನೆಯ ಕುಟುಂಬಗಳನ್ನು ಭೇಟಿ ಮಾಡಿ ವರದಿ ಮಾಡುವ ಅವಕಾಶ […]

Read More
New Posts
ಬಾ ಕವಿತಾ

ಪ್ರತ್ಯಕ್ಷಳಾದಳು ಪರಮೇಶ್ವರಿ..

ಡಾ. ಅಜಿತ್ ಹರೀಶಿ   ಆರಾಧಿಸಲು ದೇವಿಯೇ ಯಾಕೆಂದು ಕೇಳಬೇಡಿ ಹಿಂದೆ ಆರಾಧಿಸಿದವರಿದ್ದಾರೆ ಇರಬಹುದು ಮುಂದೆಯೂ ಪುಷ್ಪಾರ್ಚನೆ ಹೊಗಳಿಕೆ ಕಾವ್ಯಮಯ ಮಂತ್ರ ಇವೂ ಒಂದು ತಂತ್ರವೋ ಪ್ರಾಮಾಣಿಕವಾಗಿ ಗೊತ್ತಿಲ್ಲ ಓಲೈಕೆ ಏಕೆ ಇಷ್ಟಾರ್ಥ ಸಿದ್ಧಿಗಾಗಿ? ಏನೊಂದೂ ಪಡೆಯದೆಯೂ ದೇವಸ್ಥಾನ ಸುತ್ತುವ ಭಕ್ತನನ್ನೂ ತೋರಿಸಬಹುದು ನಿನ್ನ ತಪಸ್ಸನ್ನು ಮೆಚ್ಚಿದೆ ಹೇಳಲೊಂದು ದಿನ ಪ್ರತ್ಯಕ್ಷಳಾದಳು ಪರಮೇಶ್ವರಿ ಮೂಡಿಸದಳು ಎಂಥ ಅಚ್ಚರಿ ನಂತರದ್ದು ಯಾಂತ್ರಿಕ ಹೂವೇರಿಸುವುದು, ಬಣ್ಣಿಸುವುದು ಕೊನೆಯಾಗುತ್ತಿದೆ. ಆರಾಧನೆಯ ಆವಾಹನೆಯ ಭ್ರಮೆ ಕಳಚಿ ಬೀಳುತ್ತಿದೆ ಅವಳದ್ದೀಗ ಭಗ್ನದರ್ಶನ!

Read More
New Posts
ಬಾ ಕವಿತಾ

ಪ್ರೀತಿಯಲ್ಲಿ ನನಗೂ ಪಾಲು ಕೊಡು..

  ಭವ್ಯ ಕಬ್ಬಳಿ   ಬದುಕನ್ನು ಹೆಚ್ಚು ಬಿಗಿದಪ್ಪಬಾರದು, ಒಮ್ಮೊಮ್ಮೆ ಕೊಂಚ ವಿರಾಮವನ್ನೂ ಕೊಡದೆ ಇಂಚಿಂಚು ಕೊಲ್ಲುತ್ತಾ ಬಾಚಿತಬ್ಬಿದ ಕೈಗಳಿಂದ ಸದ್ದಿಲ್ಲದೆಯೇ ಜಾರಿಬಿಡುತ್ತದೆ ಎಲ್ಲ ಸೋಲುಗಳೂ ಒಂದೇ ಪ್ರೀತಿಯದು ಕೊಂಚ ದುಬಾರಿಯಷ್ಟೆ, ದುಬಾರಿಯೆನಿಸಿದರೂ ಎಲ್ಲವನ್ನೂ ಸುಲಭವಾಗಿ ಧಕ್ಕಿಸಿಕೊಡುವ ಪ್ರೀತಿಯಲ್ಲಿ,‌ ನನಗೂ ಸ್ವಲ್ಪ ಪಾಲು ಕೊಡು     ಬೊಗಸೆ ಮಾತ್ರ ಹೃದಯದಲಿ ಆಗಸದಷ್ಟು ಆಸೆಯನ್ನು, ಆಗಸದಷ್ಟಿದ್ದರೂ ಅದರೊಳಗೂ ಖಾಲಿತನವನ್ನು ಪರಿಚಯಿಸುವ ಪ್ರೀತಿ, ನನಗೂ ಸ್ವಲ್ಪ ಇರಲಿ ಬಿಡು ಹೊಕ್ಕುಳಿನೊಳಗೆ ಜಾರಿದ ನೋವೊಂದು ಕಣ್ಣಲ್ಲಿ ಅರಳಿ ಕೆನ್ನೆ ಮೇಲೆ […]

Read More
New Posts
ನೆನಪು

ರಂಗ ಗಾರುಡಿಗ ಕಾರಂತರ ನೆನೆದು…

ಸಂಪಿಗೆ ತೋಂಟದಾರ್ಯ   ಕಾರಂತರರಿಗೆ ರಂಗ ನಮನ ಅವರು ಎನ್.ಎಸ್.ಡಿ. ಪದವಿ ಪಡೆದ ಮೇಲೆ ಕರ್ನಾಟಕದಲ್ಲಿ ‌ ಮೊದಲು ನಡೆಸಿದ ಶಿಬಿರ ನನಗೆ ಗೊತ್ತಿರುವ ಹಾಗೆ ನಮ್ಮ ಕರ್ನಾಟಕ ವಿ.ವಿ.ದಲ್ಲಿ‌ ೧೯೭೦-೭೧ ರ ಅವಧಿಯಲ್ಲಿ. ಶ್ರೀರಂಗರ ‘ಕತ್ತಲೆ‌ ಬೆಳಕು”, ಚಂಪಾ ಅವರ ‘ಗುರ್ತಿನವರು’, ನ.ರತ್ನ‌ ಅವರ ‘ಎಲ್ಲಿಗೆ’ , ಪಿ .ಲಂಕೇಶ್ ಅವರ ‘ಸಿದ್ಧತೆ’ ನಾಟಕಗಳನ್ನು ಕಲಿಸಿದ್ದರು. ವಿ.ವಿ.ದ‌ ಗಾಂಧಿ ಭವನದಲ್ಲಿ ಇವನ್ನು ಮೂರು ದಿನಗಳ ಕಾಲ ಪ್ರದರ್ಶಿಸಲಾಯಿತು. ಕತ್ತಲೆ ಬೆಳಕು ನಾಟಕದಲ್ಲಿ ನಾನು ಮುಖ್ಯ ಪಾತ್ರವೊಂದಾದ […]

Read More
New Posts
ಫ್ರೆಂಡ್ಸ್ ಕಾಲೊನಿ

ಮಾತು ಜ್ಯೋತಿರ್ಲಿಂಗವಾದಾಗ ಕಿವಿ ಹಣತೆಯಲ್ಲದೆ ಮತ್ತೇನು?

ರಾಜಕುಮಾರ ಮಡಿವಾಳರ   ಗೋ.ವಾ ನಮನ.. ಮುಂದ ಮುಂದ ಹೋದ ಹಿಂದ ನೋಡದ.. ಹಾಡು ಹಾಡಿನಿಂದ ಹೋಗಿ ಹಾಳಾಗಿ ನೀ! ಈಗಲೂ ಅವ್ವ ದಿನಕ್ಕೊಮ್ಮೆ ನನ್ನ ಬೈಯ್ಯುವ ಪರಿ ಇದು. ‘ಹಾಡಿಲ್ಲದವನ ಎದೆ ಸುಡುಗಾಡು’ ಕಣವಿಯರ ಮಾತನ್ನ ಪ್ರಾಮಾಣಿಕವಾಗಿ ಎದೆಗಿಳಿಸಿಕೊಂಡವನು ನಾನು. ಈ ಹಾಡುಗಳು ಕೆಣಕ್ತಾವು, ಕುಣಿತಾವು, ಕುಣಸ್ತಾವು, ನಗಸ್ತಾವು, ನಗ್ತಾವು, ಸಿಕ್ಕಂಗ ಮಾಡಿ ಓಡಿ ಹೊಕ್ಕಾವು, ಹೊದ್ವಲ್ಲಾ ಅಂದ್ರ ಹೊಳ್ಳಿಬಂದ ಮತ್ತ ಎದ್ಯಾಗ ಹೊಕ್ಕೊತಾವು, ಕಾಡ್ತಾವು, ಹಾಡ್ತಾವು! ಈ ಹಾಡುಗಳ ಲೆಕ್ಕ ಇಟ್ಟವರ್ಯಾ ರು? ಅದು […]

Read More
New Posts
ಹೊಸ ಓದು

ಕನ್ನಡದ ಸಶಕ್ತ ಅಭಿವ್ಯಕ್ತಿ ‘ಮೂರನೇ ಕಣ್ಣು’

            ವಸುಂಧರಾ ಕೆ.ಎಂ.   ಓದುವುದು ಏತಕ್ಕಾಗಿ..? ಮಕ್ಕಳು,ವಿದ್ಯಾರ್ಥಿ, ಪರೀಕ್ಷಾರ್ಥಿಗಳು ಓದುವುದು ಜ್ಞಾನಾರ್ಜನೆಗಾಗಿ, ಪರೀಕ್ಷೆಗಾಗಿ, ಉದ್ಯೋಗಕ್ಕಾಗಿ ಎಂದು ಸುಲಭವಾಗಿ ಹೇಳಿಬಿಡಬಹುದು. ಆದರೆ ಮೇಲಿನ ಉದ್ದೇಶ ಹೊರತುಪಡಿಸಿ, ಆ ಮೂರೂ ವರ್ಗಕ್ಕೆ ಸೇರದೇ ಇರುವವರು ಓದುವುದು ಏಕೆ? ತಮ್ಮ ಬುದ್ಧಿಮತ್ತೆಯನ್ನು ಮತ್ತೂ  ಹರಿತಗೊಳಿಸಲು, ಆನಂದಿಸಲು, ನೆಮ್ಮದಿಗಾಗಿ, ಹವ್ಯಾಸಕ್ಕೆ   ಓದುಬಹುದು. ಹೀಗೆ ಓದುವ ಎರಡನೇ ಗುಂಪಿನಲ್ಲಿ ವಿಭಿನ್ನ ಅಭಿರುಚಿಯುಳ್ಳ ಓದುಗರಿರುತ್ತಾರೆ. ಅವರು ಆಯ್ದುಕೊಳ್ಳುವ ಪುಸ್ತಕವೂ ಅವರ ಅಭಿರುಚಿಗೆ ಪೂರಕವಾಗಿರುತ್ತವೆ. ನನ್ನ ಓದೂ […]

Read More
New Posts
ಅಂಕಣ

ಶಿಲೆಯಲ್ಲಿ ಅರಳಿದ ಪ್ರೇಮ ಕಾವ್ಯ

ಗಿರಿಜಾ ಶಾಸ್ತ್ರಿ   ಹಳೆಯ ಕಾಲದ ಹಾಡುಗಳು ದೂರದ ಎಲ್ಲಿಂದಲೋ ಗಾಳಿಯಲ್ಲಿ ತೇಲಿಬರುತ್ತಿದ್ದರೆ ಅದರ ವಿಶಿಷ್ಟವಾದ ಮಾಧುರ್ಯದಲ್ಲಿ ಒಂದು ರೀತಿಯ ನೋವು ಬೆರೆತಿರುತ್ತದೆ. ಯಾಕೆಂದರೆ ಕೇವಲ ರೇಡಿಯೋ ಅಥವಾ ಟ್ರಾನ್ಸಿಸ್ಟರ್‌ಗಳು ಮಾತ್ರ ಇದ್ದಂತಹ ನಮ್ಮ ಶಾಲಾ-ಕಾಲೇಜಿನ ದಿನಗಳಿಗೆ ಸೇರಿದಂತಹ ಹಾಡುಗಳವು, ವಿಲಿಯಮ್ ಬ್ಲೇಕ್ ಹೇಳುವ (ಸಾಂಗ್ಸ್ ಆಫ್ ಇನೋಸೆನ್ಸ್) ಸ್ವಚ್ಛಂದ ಛಂದದ ಹಕ್ಕಿಗಳ ಲೋಕದೊಳಗೆ ಹಾಸು ಹೊಕ್ಕಾಗಿ ಸೇರಿಬಿಟ್ಟ ಹಾಡುಗಳ ಕಾಲವದು. ಈಗ ಇಳಿವಯಸ್ಸು ಸಮೀಪಿಸುತ್ತಿರುವ ಕಾಲದಲ್ಲಿ ಅವು ‘ಗಾಳಿ ಹೆಜ್ಜೆ ಹಿಡಿದು’ ಬಂದು ನಮ್ಮ ಕಿವಿತಾಗಿತೆಂದರೆ […]

Read More