ಕಥೆಗಾರ ವ್ಯಾಸರನ್ನು ಬ್ಲಾಗ್ ಮಂಡಲಕ್ಕೆ ಪರಿಚಯಿಸುವ ಮಹತ್ವದ ಕೆಲಸ ಆರಂಭವಾಗಿದೆ. ವ್ಯಾಸರಿದ್ದ ಕಾಲದಲ್ಲೇ ಆಗಬೇಕು ಎಂಬ ಕನಸು ವ್ಯಾಸರು ನಿರ್ಗಮಿಸಿದ ನಂತರವಾದರೂ ಆಗುತ್ತಿದೆ. ಹರೀಶ್ ಕೆ ಆದೂರು ಈ ವ್ಯಾಸಪಥದಲ್ಲಿರುವ ಉತ್ಸಾಹಿ. ಅಂದಹಾಗೆ ಬ್ಲಾಗ್ ಹೆಸರು ‘ವ್ಯಾಸಪಥ’ ಆ ಎರಡಕ್ಷರದ ಸಾಹಿತಿಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಇದೊಂದು ಕಾಲುದಾರಿ.

ಅವರಲ್ಲೊಂದು ಕ್ಷಮೆ ಕೇಳಿ…

ರಡಕ್ಷರದ ಕಥೆಗಾರ ಎಂದೇ ಖ್ಯಾತಿ ಪಡೆದ ಎಂ.ವ್ಯಾಸ ನಮ್ಮೆಲ್ಲನ್ನು ಬಿಟ್ಟು ದೂರ ಹೋಗಿದ್ದಾರೆ…
ಒಂದೂವರೆ ತಿಂಗಳ ಹಿಂದೆ ಅವರ ಮನೆಗೆ ಹೋಗಿದ್ದೆ… ಅದು ಅಚಾನಕ್. ಹಾಗೇ ಊರಿಗೆ ಹೋದಾಗ ಅವರನ್ನು ಮಾತನಾಡಿಸುವ ಮನಸ್ಸಾಯಿತು. ಸಂಜೆ 5.30ರ ಹೊತ್ತಿಗೆ ಹೋಗಿದ್ದೆ…ಅವರು ಒಬ್ಬರೇ ಇದ್ದರು. ಒಂದಷ್ಟು ಹೊತ್ತು ಕುಳಿತು ಹರಟಿದೆವು. ಅವರ ಮೊಮ್ಮಗ ದೊಡ್ಡ ಲೋಟದಲ್ಲಿ ಚಹಾ ತಂದಿಟ್ಟ. `ಸರ್…ನಿಮ್ಮ ಬರಹಗಳನ್ನು ಒಂದು ಬ್ಲಾಗ್ನಲ್ಲಿ ಹಾಕಿದರೆ ಹೇಗೆ…’ ಎಂದು ಹೇಳಿದ್ದೆ. `ಅದನ್ನು ಪುನಾ ನೀವು ಕುಟ್ಟಬೇಕಲ್ವಾ…ಯಾಕೆ ಅದೆಲ್ಲಾ…ಇನ್ನು…ಮಾಡೋದಾದ್ರೆ ಮಾಡಿ…’ ಎಂದು ಹೇಳಿದ್ದರು… ಅದೇ ಮಾಮೂಲು ಗಡಿಬಿಡಿಯಲ್ಲಿ ಅದನ್ನು ಪೂರೈಸಲಾಗಲಿಲ್ಲ. ಇದ್ದಕ್ಕಿದ್ದಂತೆ ಆ ಮಹಾಚೇತನ ಮರೆಯಾದಾಗ ನೋವು ತಡಕೊಳ್ಳಲಾಗಿಲ್ಲ… ಇದೀಗ ಅವರು ದೂರ ಹೋಗಿದ್ದಾರೆ…ಅವರ ಅಗಾಧವಾದ ಸಾಹಿತ್ಯವನ್ನು ನಮ್ಮೆಲ್ಲರ ಮುಂದಿರಿಸಿ… ವ್ಯಾಸರು ದೂರ ಹೋಗಿದ್ದಾರೆ…ಅವರ ನೆನಪು ಎಂದೆಂದಿಗೂ ಹಚ್ಚ ಹಸಿರು… ಇದೀಗ ಅವರ ಬಗೆಗಿನ ಲೇಖನಗಳನ್ನು , ಮಾಹಿತಿಯನ್ನು ಕ್ರೋಢೀಕರಿಸುವುದು ನನ್ನ ಉದ್ದೇಶ, ಎಂ.ವ್ಯಾಸರ ಅಭಿಮಾನಿಗಳು ಇದಕ್ಕೆ ಸಹಕರಿಸುವ ಪೂರ್ಣ ಭರವಸೆ ನನ್ನದು..ಇಂತು ನಿಮ್ಮ ಪ್ರೀತಿಯ…

ಹರೀಶ್ ಕೆ.ಆದೂರು.

6 Comments

Leave a Reply

Your email address will not be published.

Sharing Buttons by LinkskuBombax Theme designed by itx