Quantcast

ಕನ್ನಡ ಲಿನಕ್ಸ್ ತಂತ್ರಾಂಶ ಬಿಡುಗಡೆಗೆ ಬನ್ನಿ

ಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಲನ (ಎಫ್.ಎಸ್.ಎಮ್.ಕೆ.) ಲಿನಕ್ಸ್ (ಡೆಬಿಯಾನ್
ಗ್ನು) ತಂತ್ರಾಂಶದ ಕನ್ನಡ ಅವತರಣಿಕೆಯನ್ನು ಬಿಡುಗಡೆ ಮಾಡಲಿದೆ. ಇದು
ಎಫ್.ಎಸ್.ಎಮ್.ಕೆ. ನ ಮತ್ತು ಇತರ ಉತ್ಸಾಹಿ ಸ್ವತಂತ್ರ ತಂತ್ರಾಂಶ ಸ್ವಯಂಸೇವಕರ ಶ್ರಮದ
ಫಲ. ಕಂಪ್ಯೂಟರಿನಲ್ಲಿ ಕನ್ನಡದ ಬಳಕೆಗೆ ಅಗ್ಗದ ಪರಿಣಾಮಕಾರಿ ಸ್ವತಂತ್ರ ತಂತ್ರಾಂಶ
ಬದಲಿ ಒದಗಿಸುವ ಮೂಲಕ, ಇ-ಆಡಳಿತ, ಶಿಕ್ಷಣ, ಕಚೇರಿ ಮತ್ತು ಮನೆಗಳಲ್ಲಿ ಕನ್ನಡದ
ಬಳಕೆಗೆ ಮತ್ತು ಭಾಷೆಯ ಆಧುನಿಕೀಕರಣಕ್ಕೆ ಉತ್ತೇಜನ ನೀಡಲಿದೆ.

ಹೆಚ್ಚಿನ ವಿವರಗಳಿಗೆ ‌http://www.fsmk.org ನೋಡಿ

ಮಾರ್ಚ್ ೨೦/೨೧ ರಂದು ಬೆಂಗಳೂರಲ್ಲಿ ಮೊದಲ ಬಾರಿಗೆ ನಾವು ಸಂಘಟಿಸುತ್ತಿರುವ ಮೂರನೇಯ
ರಾಷ್ಟ್ರೀಯ ಸ್ವತಂತ್ರ ತಂತ್ರಾಂಶ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ನಡೆಯಲಿರುವ ಈ
ಸಮಾರಂಭದ ಬಗ್ಗೆ ತಿಳಿಸುವುದು ನಮಗೆ ಸಂತೋಷ ಮತ್ತು ಹೆಮ್ಮೆಯ ವಿಷಯ.

ಲಿನಕ್ಸ್ (ಡೆಬಿಯಾನ್ ಗ್ನು) ಸಾಫ್ಟ್ ವೇರಿನ ಕನ್ನಡ ಅವತರಣಿಕೆಯ ಬಿಡುಗಡೆ  ಒಂದು
ಸ್ಲಂನಲ್ಲಿ ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಗಿದೆ. ಕರ್ನಾಟಕ ಸ್ವತಂತ್ರ ತಂತ್ರಾಂಶ
ಆಂದೋಲನ ಸಮಾಜದ ದಟ್ಟ ದರಿದ್ರರ ಸಬಲೀಕರಣ ಮತ್ತು ಶಿಕ್ಷಣಗಳ ಮೂಲಕ ಐಟಿ ನಮ್ಮ
ಸಮಾಜದಲ್ಲಿ ತರುತ್ತಿರುವ ಹೊಸ ಡಿಜಿಟಲ್ ಕಂದಕಗಳ ಮುಚ್ಚುವ ಮಂಚೂಣಿ ಕಾಯಕದಲ್ಲಿ
ತೊಡಗಿದೆ. ಸ್ಲಂ ನಿವಾಸಿಗಳಿಗೆ ಉತ್ತಮ ಗುಣಮಟ್ಟದ ಕಂಪ್ಯೂಟರ‍್ ತರಬೇತಿ
ನೀಡಲಾಗಿದ್ದು, ಇದು ಈ ಸ್ಲಂ ನಿವಾಸಿಗಳ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು
ಅನುವಾಗಿದೆ. ಸ್ವತಂತ್ರ ತಂತ್ರಾಂಶದ ಮೂಲಕ ಲಭ್ಯವಾದ ಜಿಂಪ್ (GIMP) ಎಂಬ ಪೈಂಟಿಂಗ್
ಸಾಫ್ಟ್ ವೇರಿನಲ್ಲಿ ನಿಪುಣತೆ ಪಡೆದ ೧೭ ವರ್ಷದ ಮಣಿ ಇದಕ್ಕೆ ಒಂದು ಉದಾಹರಣೆ.

ವಿಕಲಾಂಗನಾಗಿರುವ ಮಣಿ ಇದರಿಂದ ಕಲಾವಿದನಾಗಿ ತನ್ನ ಕಾಲ ಮೇಲೆ ನಿಲ್ಲುವುದು
ಸಾಧ್ಯವಾಗಿದೆ. ಮುಣಿಯ ಕಲಾಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಸ್ಲಂ ಮಕ್ಕಳ ವಿವಿಧ
ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ. ಇದಲ್ಲದೆ ದೃಷ್ಟಿಮಾಂದ್ಯದಿಂದ
ಬಳಲುತ್ತಿರವವರ ಕಂಪ್ಯೂಟರು ಬಳಕೆಯ ಸವಾಲುಗಳನ್ನು ಎದುರಿಸುವಲ್ಲಿ ಸ್ವತಂತ್ರ
ತಂತ್ರಾಂಶ ಏನು ಮಾಡಬಲ್ಲುದು ಎಂಬ ಬಗ್ಗೆ ಪ್ರದರ್ಶನ ಸಹ ಇರುತ್ತದೆ.

ಸಮಯ             ಮಾರ್ಚ್ ೧೪, ೨೦೧೦  ಸಂಜೆ  ೬.೦೦ – ೮.೦೦

ಸ್ಥಳ                  ಅಂಬೇಡ್ಕರ ಸಮುದಾಯ ಕಂಪ್ಯೂಟರ ಕೇಂದ್ರ, ಸುದರ್ಶನ್ ಲೇ ಔಟ್,  ಹೊಸ ಗುರುಪನಪಾಳ್ಯ,
(ಬನ್ನೇರುಘಟ್ಟ    ರಸ್ತೆಯಲ್ಲಿರುವ ಜಲಭವನದ ಕಚೇರಿಯ ಎದುರು
ಇರುವ ಐ.ಬಿ.ಎಂ. ಆಫೀಸಿನ ಹಿಂದೆ)

ಅತಿಥಿಗಳು

ಡಾ.  ಜಿ.  ರಾಮಕ್ರಷ್ಣ,  ಸಂಪಾದಕರು, ಹೊಸತು

ಎನ್ ಇಸ್ಮಾಯಿಲ್, ಪ್ರಜಾವಾಣಿ


ಜೈಕುಮಾರ್
ಪ್ರಧಾನ ಸಂಚಾಲಕರು

ಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಲನ (ಎಫ್.ಎಸ್.ಎಮ್.ಕೆ ) ಸ್ವತಂತ್ರ ತಂತ್ರಾಂಶದ
ಮೌಲ್ಯಗಳು, ಬಳಕೆ ಮತ್ತು ಸಾಧನಗಳ ಪ್ರಚಾರಕ್ಕೆ ಬದ್ಧವಾದ ಸ್ವಯಂಸೇವಾ ಸಂಘಟನೆ.
ಎಫ್.ಎಸ್.ಎಮ್.ಕೆ. ಸ್ವತಂತ್ರ ತಂತ್ರಾಂಶಕ್ಕೆ ಬಧ್ಧರಾದ ಐಟಿ ಉದ್ಯೋಗಿಗಳು,
ಸಂಶೋಧಕರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಇತರ ಸಾರ್ವಜನಿಕ ಸೇವೆಯಲ್ಲಿ
ತೊಡಗಿರುವವರ ಒಂದು ಗುಂಪು.

One Response

Add Comment

Leave a Reply