Quantcast

ಮೌನ-ಆರ್ಭಟಗಳ ನಡುವೆ ನರ್ಮದಾ ಕಣಿವೆಯ ಪಯಣ…

-ನಾ ದಿವಾಕರ

ಅಕ್ಟೋಬರ್ ಮಾಸದ ಹುಣ್ಣಿಮೆಯ ದಿನ, ಭಾರತದ ಮೂಲೆ ಮೂಲೆಗಳಿಂದ ಆಗಮಿಸಿದ್ದ ನೂರಾರು ಜನ ಮಹಾರಾಷ್ಟ್ರದ ನಂದೂರ್ಬರ್ ಜಿಲ್ಲೆಯ ಭಿಲಗಾಂವ್ ಗ್ರಾಮದಲ್ಲಿ ನೆರೆದಿದ್ದರು. ಸಾತ್ಪುರ ಬೆಟ್ಟದ ಸಾಲುಗಳ ನಡುವೆ ಇರುವ ಈ ಪುಟ್ಟ ಹಳ್ಳಿಯಲ್ಲಿ ಎಲ್ಲಿಲ್ಲದ ಸಂಭ್ರಮ. ಕ್ರಾಂತಿಯ ಹಾಡುಗಳು, ಜನಪದ ಗೀತೆಗಳು, ಸಂಗೀತ ವಾದ್ಯಗಳ ಸಂಭ್ರಮ. ದೇಶದೆಲ್ಲೆಡೆಯಿಂದ ಬಂದಿದ್ದ ಜನರಲ್ಲಿ ಏನೋ ಆತ್ಮ ವಿಶ್ವಾಸ.

ತಾವು ಗೆದ್ದಿದ್ದೇವೆ, ಗೆಲುವಿನ ಹಾದಿಯಲ್ಲಿ ಮುನ್ನಡೆದಿದ್ದೇವೆ ಎಂಬ ಹೆಮ್ಮೆ ಈ ಹಾಡುಗಳಲ್ಲಿ, ಸಂಗೀತದಲ್ಲಿ ವ್ಯಕ್ತವಾಗುತ್ತಿತ್ತು. ಬೆಟ್ಟದ ಕಣಿವೆಗಳಿಂದ ಮಾರ್ದನಿಸುತ್ತಿದ್ದ ಜನಸಾಮಾನ್ಯರ ದನಿಗಳು ದೂರದ ಮಧ್ಯಪ್ರದೇಶದಲ್ಲಿ, ಗುಜರಾತಿನಲ್ಲಿ, ಕರ್ನಾಟಕದಲ್ಲಿ, ಹರ್ಯಾಣಾದಲ್ಲಿಯೂ ಪ್ರತಿಧ್ವನಿಸುತ್ತಿದ್ದವು.

ಈ ದನಿಗಳ ಹಿಂದೆ ಅಡಗಿದ್ದ ನೋವು-ಹತಾಶೆ-ಅಸಮಧಾನಗಳು ಉತ್ಸಾಹಭರಿತ ಹೋರಾಟಗಾರರ ಆತ್ಮವಿಶ್ವಾಸದ ಮುಂದೆ ಕ್ಷೀಣಿಸಿದ್ದವು. ಬೆಟ್ಟಗಳಂಚನು ದಾಟಿ ದಿಗಂತವನು ಮುಟ್ಟಿದ್ದ ಜನದನಿಯಲಿ ಕೇಳಿಬಂದ ಒಂದೇ ರಾಗ ನರ್ಮದಾ, ನರ್ಮದಾ, ನರ್ಮದಾ. ಹೌದು, ಈ ಪುಟ್ಟ ಗ್ರಾಮದಲ್ಲಿ ನೆರೆದು ಹಬ್ಬದ ವಾತಾವರಣವನ್ನು ಸವಿಯುತ್ತಿದ್ದ ಜನಸಾಮಾನ್ಯರ ಗುಂಪು ಬಾದಲ್ ಎಂಬ ಗ್ರಾಮಕ್ಕೆ ಪಯಣ ಬೆಳೆಸಿತ್ತು.

ಬಾದಲ್ ಒಂದು ಕಾಲದಲ್ಲಿ ಸುಭಿಕ್ಷವಾಗಿದ್ದು ಆಳ್ವಿಕರ ಪ್ರಗತಿಯ ಮಾರ್ಗದಲ್ಲಿ ಕಣ್ಮರೆಯಾದ ಒಂದು ಪುಟ್ಟ ಗ್ರಾಮ. ಇದು ಭೂಪಟದಿಂದ ಕಣ್ಮರೆಯಾದದ್ದು ಭೂಕಂಪದಿಂದಲ್ಲ, ಪ್ರವಾಹದಿಂದಲ್ಲ, ಸುನಾಮಿಯಿಂದಲೂ ಅಲ್ಲ. ಪ್ರಭುತ್ವದ ಅಭಿವೃದ್ಧಿ ಪಥದ ಸಂಕೇತವಾದ ಭಾರಿ ಅಣೆಕಟ್ಟುಗಳ ನಿರ್ಮಾಣದಿಂದ.ಮಧ್ಯಪ್ರದೇಶದಲ್ಲಿ ಹರಿಯುವ ನರ್ಮದಾ ನದಿಯ ನೀರನ್ನುಆರ್ಥಿಕ ಅಭಿವೃದ್ಧಿಯ ಪರಿಕರವನ್ನಾಗಿ ಉಪಯೋಗಿಸುವ ಆಳ್ವಿಕರ ಕಲ್ಪನೆಯನ್ನು ಸಾಕಾರಗೊಳಿಸುವಂತೆ ನಿರ್ಮಾಣಗೊಂಡ ಸದರ್ಾರ್ ಸರೋವರ ಅಣೆಕಟ್ಟು ಬಾದಲ್ ಮತ್ತಿತರ ಗ್ರಾಮಗಳನ್ನು ಭೂಪಟದಿಂದಲೇ ಅಳಿಸಿಹಾಕಿತ್ತು.

ಅನ್ಯರ ಆಕ್ರಮಣಗಳಿಗೆ ತುತ್ತಾಗಿ ನಿಶ್ಯೇಷವಾದ ಸಣ್ಣ ಪುಟ್ಟ ಪ್ರಾಂತ್ಯಗಳನ್ನು, ಸಾಮ್ರಾಜ್ಯಗಳನ್ನು ನೆನೆನೆನೆದು ಕಂಬನಿ ಮಿಡಿಯುವ ಭಾರತದ ಭವ್ಯ ಪರಂಪರೆಯ ಪರಿಚಾರಕರ ಗಮನಕ್ಕೇ ಬಾರದಂತೆ ಈ ಪುಟ್ಟ ಸಾಮ್ರಾಜ್ಯಗಳು ಅಳಿಸಿಹೋಗಿದ್ದವು. ದಟ್ಟ ಅರಣ್ಯ-ಗಂಭೀರವಾಗಿ ಹರಿಯುವ ನದಿ-ಸುತ್ತುವರೆದ ಬೆಟ್ಟದ ಕಣಿವೆಗಳಿಂದ ಕೇಳಿಬಂದ ಆಕ್ರಂದನಕ್ಕೆ ದನಿ ನೀಡಿದ್ದು ನರ್ಮದಾ ಬಚಾವೋ ಅಂದೋಲನ. ಇಲ್ಲಿ ನೆರೆದಿದ್ದ ಜನರ ಸಂಭ್ರಮಕ್ಕೆ ಕಾರಣ ಅಂದೋಲನದ 25ನೆಯ ಹುಟ್ಟುಹಬ್ಬ.

 

ನರ್ಮದಾ ಆಂದೋಲನದ ಉದಯಆಧುನಿಕ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಭಾರಿ ಅಣೆಕಟ್ಟುಗಳು ಆಧುನಿಕ ಸಮಾಜದ ಅಭ್ಯುದಯದ ದೇವಾಲಯಗಳು. ನೆಹರೂ ಪರಿಕಲ್ಪನೆಯ ನವ ಭಾರತ ನಿಮರ್ಾಣಕ್ಕೆ ಬೃಹತ್ ಅಣೆಕಟ್ಟುಗಳು ಅಡಿಪಾಯಗಳಿದ್ದಂತೆ. ಬೃಹತ್ ಬಂಡವಾಳ, ಶ್ರೀಮಂತ ರೈತರಿಗೆ ನೆರವಾಗುವ ನೀರಾವರಿ ಸೌಲಭ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಇವು ಅಭಿವೃದ್ಧಿಯ ಪರಿಕರಗಳಾಗಿಬಿಡುತ್ತವೆ.

ಈ ಅಭಿವೃದ್ಧಿ ಪಥದಲ್ಲಿ ತಮ್ಮ ಮೂಲ ನೆಲೆಗಳನ್ನೇ ಕಳೆದುಕೊಳ್ಳುವ ಕೆಳಸ್ತರದ ಜನಸಮುದಾಯಗಳ ಹಿತಾಸಕ್ತಿಗಳು ಇಲ್ಲಿ ನಗಣ್ಯ. ಈ ಅಭಿವೃದ್ಧಿ ಧೋರಣೆಯ ಸಂಕೇತ ನರ್ಮದಾ ಅಣೆಕಟ್ಟು. ಮೂರು ರಾಜ್ಯಗಳ ದಾಹ ಇಂಗಿಸುವ ಈ ಬೃಹತ್ ಯೋಜನೆ ಗರ್ಭ ಧರಿಸಿದ್ದು 1969ರಲ್ಲಿ. ನರ್ಮದಾ ನದಿಯುದ್ದಕ್ಕೂ 30 ದೊಡ್ಡ, 135 ಮಧ್ಯಮ ಮತ್ತು 3000 ಸಣ್ಣ ಅಣೆಕಟ್ಟುಗಳ ನಿಮರ್ಾಣಕ್ಕೆ ಅನುಮತಿ ನೀಡಲಾಗಿ ಆರಂಭಗೊಂಡ ನರ್ಮದಾ ಯೋಜನೆಯನ್ನು ಸದರ್ಾರ್ ಸರೋವರ್ ಅಣೆಕಟ್ಟು ಎಂದೇ ಗುರುತಿಸಲಾಗುತ್ತದೆ.

ಮಧ್ಯಪ್ರದೇಶದ ನವಗಾಂವ್ನಲ್ಲಿ ನಿಮರ್ಿಸಲಾಗಿರುವ 455 ಟಡಿ ಎತ್ತರದ ಅಣೆಕಟ್ಟಿನಿಂದ ರಾಜಸ್ಥಾನಕ್ಕೆ ನೀರು ಸಾಗಿಸಲು ನಿಮರ್ಿಸಲಾಗಿರುವ ಕಾಲುವೆ 532 ಕಿ.ಮೀ. ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರಗಳ 5 ಕೋಟಿ ಜನತೆಗೆ ಕುಡಿಯುವ ನೀರು ಒದಗಿಸುವ ಈ ಡ್ಯಾಂ 60 ಲಕ್ಷ ಹೆಕ್ಟೆರ್ ಭೂಮಿಗೆ ನೀರಾವರಿ ಒದಗಿಸುತ್ತದೆ. ಜೊತೆಗೆ ಮಧ್ಯಭಾರತದ ಪ್ರದೇಶಗಳಿಗೆ ವಿದ್ಯುತ್ ಒದಗಿಸುತ್ತದೆ. ಇದು ಆಧುನಿಕ ಅಭಿವೃದ್ಧಿ ಪಥದ ಒಂದು ಮಾದರಿ.

ಈ ಅಭಿವೃದ್ಧಿ ಪಥದಲ್ಲಿ ತಮ್ಮ ಮೂಲ ಸೆಲೆ-ನೆಲೆ ಎರಡನ್ನೂ ಕಳೆದುಕೊಳ್ಳುವ ಜನಸಮುದಾಯಗಳ ಬಗ್ಗೆ ಪ್ರಭುತ್ವಕ್ಕೆ ಕಾಳಜಿ ಖಂಡಿತವಾಗಿಯೂ ಇರುವುದಿಲ್ಲ. ಏಕೆಂದರೆ ದೇಶದ ಅಭ್ಯುದಯಕ್ಕಾಗಿ ಜನತೆಯ ತ್ಯಾಗ ಅನಿವಾರ್ಯ. ಆದರೆ ಪರಿಸರ ಮತ್ತು ನೈಸಗರ್ಿಕ ಸಂಪನ್ಮೂಲಗಳ ರಕ್ಷಣೆಯೂ ಜನತೆಗೆ ಅನಿವಾರ್ಯವೇ. ಸದರ್ಾರ್ ಸರೋವರ್ ಡ್ಯಾಂನಿಂದ ನಿರ್ಗತಿಕರಾದ ಕುಟುಂಬಗಳ ಸಂಖ್ಯೆ 51 ಸಾವಿರ. ತಮ್ಮ ಮೂಲ ನೆಲೆಯನ್ನು ಕಳೆದುಕೊಳ್ಳುವ ಜನರ ಸಂಖ್ಯೆ 3 ಲಕ್ಷಕ್ಕೂ ಹೆಚ್ಚು. ಮುಳುಗಡೆಯಾಗುವ ಗ್ರಾಮಗಳ ಸಂಖ್ಯೆ 252. ಇಷ್ಟೆಲ್ಲಾ ತ್ಯಾಗ ಬಲಿದಾನಗಳ ಫಲಶೃತಿ ಪಡೆಯುವವರು ಕೆಲವೇ ಶ್ರೀಮಂತ ರೈತರು, ಉದ್ಯಮಿಗಳು ಮತ್ತು ಮಧ್ಯಮವರ್ಗದ ನಗರೀಕೃತ ಜನಸಮುದಾಯಗಳು.

ಗುಜರಾತಿನ ಕಚ್ ಪ್ರದೇಶಕ್ಕೆ ನಿರಂತರ ನೀರು ಸರಬರಾಜು ಮಾಡುವ ಡ್ಯಾಂ ವಕ್ತಾರರ ಆಶ್ವಾಸನೆ ಹಸಿ ಸುಳ್ಳು. ಶೇ.10ರಷ್ಟು ಜನರನ್ನೂ ತಲುಪುವುದಿಲ್ಲ. ಇನ್ನು ನೂರಾರು ಕಿಲೋಮೀಟರ್ ಹರಿವ ನೀರು ರಾಜಸ್ಥಾನದ ಜನತೆಗೆ ಲಭಿಸುವುದು ಕನಸಿನ ಮಾತು. ಪರಿಸರ, ಅರಣ್ಯ ಸಂಪತ್ತು ಮತ್ತು ನಿಸರ್ಗದತ್ತ ಸಂಪನ್ಮೂಲಗಳ ಶೋಷಣೆಯ ಮೂಲಕ ಬಂಡವಾಳ ವ್ಯವಸ್ಥೆಗೆ ಭದ್ರ ಬುನಾದಿ ಒದಗಿಸುವ ಅಭಿವೃದ್ಧಿಯ ಆಧುನಿಕ ಪರಿಕಲ್ಪನೆಗಳು ಮಾನವನ ಬದುಕುವ ಹಕ್ಕನ್ನೇ ಕಸಿದುಕೊಳ್ಳುವ ಸಂದರ್ಭದಲ್ಲಿ ಜನಸಾಮಾನ್ಯರ ಪ್ರತಿರೋಧದ ದನಿ ಎಚ್ಚೆತ್ತುಕೊಳ್ಳದೆ ಹೋದಲ್ಲಿ ಮುಳುಗಡೆಯಾಗುವುದು ಕೇವಲ ಗ್ರಾಮಗಳಲ್ಲ, ಮನುಕುಲವೇ ನಿನರ್ಾಮವಾಗುತ್ತದೆ.

ಈ ಹಿನ್ನೆಲೆಯಲ್ಲೇ ನರ್ಮದಾ ಬಚಾವ್ ಆಂದೋಲನವೂ ಹುಟ್ಟಿಕೊಂಡಿದ್ದು, 1985ರಲ್ಲಿ. ನರ್ಮದಾ ಆಂದೋಲನ ಕೇವಲ ನರ್ಮದಾ ಕಣಿವೆಗೆ ಸೀಮಿತಗೊಳ್ಳಲಿಲ್ಲ. ಭಾರತದಲ್ಲಿ ಪರಿಸರ ಚಳುವಳಿಗೆ, ಆಧುನಿಕ ಅಭಿವೃದ್ಧಿ ಮಂತ್ರವನ್ನು ಪ್ರತಿರೋಧಿಸುವ ಚಳುವಳಿಗಳಿಗೆ ಸ್ಪೂತರ್ಿ ನೀಡಿದ್ದೇ ನರ್ಮದಾ ಚಳುವಳಿ, ಇದಕ್ಕೂ ಮುನ್ನ ಕೇವಲ ಎಡಪಂಥೀಯ ಚಳುವಳಿಗಳು ಮಾತ್ರ ಈ ನಿಟ್ಟಿನಲ್ಲಿ ಸಕ್ರಿಯವಾಗಿದ್ದವು. ಕೇವಲ ಡ್ಯಾಂಗಳನ್ನು ವಿರೋಧಿಸುವುದೇ ಅಲ್ಲದೆ, ಸ್ಥಳಾಂತರಗೊಂಡ ನಿರ್ವಸಿತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲೂ ಈ ಚಳುವಳಿ ಒಂದು ವೇದಿಕೆ ಒದಗಿಸಿತ್ತು.

ಗಾಂಧಿ ಮಾರ್ಗದ ಸ್ವರೂಪ ನಮ್ಮ ಚಳುವಳಿಯೇ ನಮ್ಮ ಅಸ್ತ್ರ, ಶಸ್ತ್ರಾಸ್ತ್ರಗಳ ಅಗತ್ಯವಿಲ್ಲ ಎಂದು ಹೇಳುವ ಮೇದಾ ಪಾಟ್ಕರ್ ಇಂದಿಗೂ ಶಾಂತಿಯುತ ಚಳುವಳಿಯನ್ನೇ ಅಪೇಕ್ಷಿಸುತ್ತಾರೆ. ವಿನಾಶದ ವಿರುದ್ಧ ವಿಕಾಸದ ಪರ ಎಂಬ ಘೋಷಣೆಯೊಂದಿಗೆ ಆರಂಭವಾದ ನರ್ಮದಾ ಆಂದೋಲನದ ಮೂಲ ಸ್ವರೂಪ ಶಾಂತಿಯುತವಾಗಿದ್ದರಿಂದಲೇ ಸಮಾಜದ ಎಲ್ಲ ವರ್ಗಗಳೂ ಚಳುವಳಿಯನ್ನು ಬೆಂಬಲಿಸಿದ್ದವು.

ಗಾಂಧಿ ಮಾರ್ಗವನ್ನು ಕುರಿತ ಆಧುನಿಕೋತ್ತರ ಚಿಂತನೆಯ ಆಕರ್ಷಣೆಯ ಪರಿಣಾಮವಾಗಿ ಆದಿವಾಸಿಗಳು, ಎನ್ಜಿಒಗಳು, ಚಿಂತಕರು, ಬುದ್ಧಿಜೀವಿಗಳು, ವಿದ್ಯಾಥರ್ಿ ಯುವಜನರು ಒಕ್ಕೊರಲಿನಿಂದ ಆಂದೋಲನಕ್ಕೆ ಬೆಂಬಲ ಸೂಚಿಸಿದ್ದರು. 1990ರಲ್ಲಿ ಪ್ರಧಾನಿ ವಿ.ಪಿ.ಸಿಂಗ್ ನಿವಾಸದ ಮುಂದೆ ಧರಣಿ, 1991ರಲ್ಲಿ ಬಾಬ ಅಮ್ಟೆ ನೇತೃತ್ವದ ಉಪವಾಸ ಸತ್ಯಾಗ್ರಹ, ಕರನಿರಾಕರಣೆ ಮತ್ತು ಅಸಹಕಾರ ಚಳುವಳಿ, ಜಲಸಮರ್ಪಣಾ ಆಂದೋಲನ ಇನ್ನೂ ಹತ್ತು ಹಲವು ಅಹಿಂಸಾತ್ಮಕ ಹೋರಾಟದ ಫಲಶೃತಿ ಎಂದರೆ ವಿಶ್ವಬ್ಯಾಂಕ್ ಯೋಜನೆಗೆ ನೀಡಿದ್ದ 450 ಮಿಲಿಯನ್ ಡಾಲರ್ ಸಹಾಯಧನದ ರದ್ದತಿ ಮತ್ತು ಅಣೆಕಟ್ಟಿನ ಎತ್ತರವನ್ನು 122.5 ಮೀಟರಿಗೆ ಸೀಮಿತಗೊಳಿಸಿರುವುದು.

ಅನ್ಯಥಾ ಯೋಜನೆ ಅವ್ಯಾಹತವಾಗಿ ಮುನ್ನಡೆಯುತ್ತಿದೆ. 25 ವಸಂತಗಳನ್ನು ಪೂರೈಸಿರುವ ನರ್ಮದಾ ಅಂದೋಲನ ಇಂದಿಗೂ ಸಕ್ರಿಯವಾಗಿದೆ, ವ್ಯಾಪಕವಾಗಿದೆ, ಪರಿಣಾಮಕಾರಿಯಾಗಿಯೂ ಇದೆ. ಆದರೆ ಇಂತಹ ಜನವಿರೋಧಿ ಯೋಜನೆಗಳ ವಿರುದ್ಧ ಇಡೀ ದೇಶದ ಜನತೆಯನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿ, ಪ್ರಭುತ್ವಕ್ಕೆ ಯಾವುದೇ ರೀತಿಯ ಬೆದರಿಕೆ ಒಡ್ಡದೆ ಅಹಿಂಸಾತ್ಮಕವಾಗಿಯೇ ಹೋರಾಡಿದ ಒಂದು ಜನಾಂದೋಲನ, ಒಂದು ಪಯರ್ಾಯ ಆಥರ್ಿಕ ನೀತಿಯನ್ನಾಗಲೀ ಪಯರ್ಾಯ ಅಭಿವೃದ್ಧಿ ಪಥವನ್ನಾಗಲೀ ಹುಟ್ಟುಹಾಕುವಲ್ಲಿ ವಿಫಲವಾದದ್ದೇಕೆ ?

ನರ್ಮದಾ ಕಣಿವೆಯ ಇಡೀ ಜನಸಮುದಾಯಗಳನ್ನು, ವಿಶೇಷವಾಗಿ ಆದಿವಾಸಿಗಳನ್ನು ಯೋಜನೆಯ ವಿರುದ್ಧ ದನಿ ಎತ್ತುವಂತೆ ಮಾಡಿದ ಒಂದು ಆಂದೋಲನ, ಈ ಯೋಜನೆಗಳ ರೂವಾರಿಗಳಾದ ಆಳ್ವಿಕರ ವಿರುದ್ಧ ಜನರನ್ನು ಎತ್ತಿಕಟ್ಟಲು ವಿಫಲವಾದದ್ದೇಕೆ ? ಹಾಗೆಂದ ಮಾತ್ರಕ್ಕೆ ನರ್ಮದಾ ಚಳುವಳಿ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿಲ್ಲ ಅಥವಾ ರಾಜಕೀಯ ಪಯರ್ಾಯದ ನಿಮರ್ಾಣಕ್ಕೆ ಯತ್ನಿಸಿಲ್ಲ ಎಂದು ಹೇಳಲಾಗದು. ಗ್ರಾಮಗಳಲ್ಲಿ ತಾಂಡವಾಡುತ್ತಿರುವ ಜಾತಿ ವ್ಯವಸ್ಥೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಆಂದೋಲನ ದಿಟ್ಟತನ ತೋರಿದೆ. ಯಶಸ್ಸನ್ನೂ ಗಳಿಸಿದೆ. ತನ್ಮೂಲಕ ಜನಸಮುದಾಯಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಲೂ ಪ್ರಯತ್ನಿಸಿದೆ.

ಆದರೆ ಚುನಾವಣೆಯ ಸಂದರ್ಭದಲ್ಲಿ ನರ್ಮದಾ ಆಂದೋಲನದ ಫಲಾನುಭವಿಗಳು ಭಾಜಪ ಅಥವಾ ಕಾಂಗ್ರೆಸ್ಸನ್ನು ಬೆಂಬಲಿಸುವುದನ್ನು ಮಾತ್ರ ತಡೆಗಟ್ಟಲಾಗಿಲ್ಲ. ಇದನ್ನು ಚಳುವಳಿಯ ವೈಫಲ್ಯ ಎಂದು ಹೇಳಲಾಗುವುದಿಲ್ಲವಾದರೂ, ಜನಾಂದೋಲನದ ಅಂತಿಮ ಗುರಿಯ ದೃಷ್ಟಿಯಿಂದ ನ್ಯೂನತೆ ಎಂದು ಖಂಡಿತವಾಗಿ ಹೇಳಬಹುದು. ಈ ನ್ಯೂನತೆ ಕಾರಣವೆಂದರೆ ನರ್ಮದಾ ಆಂದೋಲನ ಪರಿಸರ ನಾಶದ ವಿರುದ್ಧ, ಡ್ಯಾಂ ನಿಮರ್ಾಣದ ವಿರುದ್ಧ, ಆದಿವಾಸಿಗಳ ನಿರ್ವಸತಿಕತೆಯ ವಿರುದ್ಧ, ಪುನರ್ವಸತಿಯ ಪರವಾಗಿ ಹೋರಾಟ ನಡೆಸುತ್ತಿರುವುದೇ ಹೊರತು, ಪ್ರಭುತ್ವದ ಬಂಡವಾಳ ಪ್ರೇರಿತ ಮೂಲಭೂತ ನೀತಿಗಳ ವಿರುದ್ಧ ಅಲ್ಲ.

ಹಾಗಾಗಿ ಗ್ರಾಮಸಭೆಗಳಿಗೆ ಹೆಚ್ಚಿನ ಅಧಿಕಾರ ನೀಡುವುದು, ಆದಿವಾಸಿಗಳಿಗೆ ಅರಣ್ಯದ ಹಕ್ಕುಗಳನ್ನು ಒದಗಿಸುವುದು ಮುಂತಾದ ವಿಚಾರಗಳಲ್ಲಿ ನರ್ಮದಾ ಆಂದೋಲನ ಪ್ರಯತ್ನಗಳನ್ನೇ ಮಾಡಲಿಲ್ಲ. ಪ್ರಜಾಸತ್ತೆಯ ಹೆಸರಿನಲ್ಲೇ ಪ್ರಭುತ್ವವು ದೇಶದ ಸಂಪನ್ಮೂಲಗಳ ಮೇಲೆ ತನ್ನ ಸವರ್ಾಧಿಕಾರವನ್ನು ಸ್ಥಾಪಿಸುತ್ತದೆ. ಈ ಅಧಿಪತ್ಯವನ್ನು ಪ್ರಶ್ನಿಸುವ ಯಾವುದೇ ಪ್ರತಿರೋಧದ ದನಿ ರಾಷ್ಟ್ರದ ಹಿತಾಸಕ್ತಿಗಳ ವಿರೋಧಿ ಎಂದೇ ಬಿಂಬಿಸಲಾಗುತ್ತದೆ. ಹಾಗಾಗಿಯೇ ಅಹಿಂಸಾತ್ಮಕ ಗಾಂಧಿ ಮಾರ್ಗವನ್ನು ಅನುಸರಿಸುವ ಮೇದಾ ಪಾಟ್ಕರ್ ಮತ್ತು ಮಾವೋವಾದವನ್ನು ಸಾಮಾಜಿಕ ನೆಲೆಗಟ್ಟಿನಲ್ಲಿ ವಿಶ್ಲೇಸಿಸುವ ಅರುಂಧತಿ ರಾಯ್ ಪ್ರಭುತ್ವದ ದೃಷ್ಟಿಯಲ್ಲಿ ಒಂದೇ ಆಗಿರುತ್ತಾರೆ. ಪ್ರಭುತ್ವದ ಈ ಮೂಲಭೂತ ಲಕ್ಷಣವನ್ನು ಗುರುತಿಸದಿರುವುದೇ ನರ್ಮದಾ ಆಂದೋಲನದ ಪ್ರಮುಖ ನ್ಯೂನತೆಯಾಗಿದೆ.

ನವ ಉದಾರವಾದದ ಕಬಂಧ ಬಾಹುಗಳು ನಿರ್ಲಕ್ಷಿತ ಮತ್ತು ಅವಕಾಶವಂಚಿತ ಜನಸಮುದಾಯಗಳ ಮೂಲ ನೆಲೆಗಳನ್ನೇ ಧ್ವಂಸ ಮಾಡುತ್ತಿರುವ ಈ ಸಂದರ್ಭದಲ್ಲಿ ನರ್ಮದಾ ಆಂದೋಲನದಂತಹ ಜನಪರ ಚಳುವಳಿ ತನ್ನ ರಜತೋತ್ಸವ ಆಚರಿಸುತ್ತಿರುವುದು ಜನಾಂದೋಲನಗಳಲ್ಲಿ ಹೆಚ್ಚಿನ ಸ್ಫೂತರ್ಿ ಮೂಡಿಸಬೇಕಾಗಿದೆ. ಹಾಗೆಯೇ ಜನಾಂದೋಲನಗಳು ರಾಜಕೀಯ ಸ್ವರೂಪ ಪಡೆದು, ದೇಶದಲ್ಲಿ ಭದ್ರ ನೆಲೆಯೂರಿರುವ ಭ್ರಷ್ಟ ರಾಜಕೀಯ ಪರಂಪರೆಯನ್ನು ಕೊನೆಗಾಣಿಸಲೂ ಪ್ರೇರೇಪಿಸಬೇಕಾಗಿದೆ. ನರ್ಮದಾ ಆಂದೋಲನದ ಫಲಾನುಫಲಗಳಿಗಿಂತಲೂ ಅದರಿಂದ ಭಾರತೀಯ ಜನತೆ ಕಲಿಯಬೇಕಾದ್ದು ಬಹಳಷ್ಟಿದೆ. ಮುನ್ನಡೆವ ಹಾದಿಗೆ ನರ್ಮದಾ ಕಣಿವೆ ದೀವಿಗೆಯಾದೀತೇ ಕಾದು ನೋಡಬೇಕು.

One Response

  1. lalitharaju
    December 20, 2010

Add Comment

Leave a Reply