ಇಷ್ಟು ಬೇಗ ಬರಬೇಕಿತ್ತೆ ಬಿರುಬೇಸಿಗೆ, ನಿನ್ನ ಪ್ರೀತಿಗೆ..

ಜರೂರಿದೆ ನಿನ್ನ ನಗೆಯ ಬೆಳಕು

ಡಾ ಶೋಭಾ ರಾಣಿ

ಮೊನ್ನೆ ಮೊನ್ನೆವರೆಗೂ ನೀ ಸುರಿಸಿದ ಪ್ರೀತಿಯ ಮಳೆಗೆ

ತೋಯ್ದು ತೊಪ್ಪೆಯಾಗಿದ್ದೆ ಒಳಗೊಳಗೆ

ಇಷ್ಟು ಬೇಗ ಬರಬೇಕಿತ್ತೆ ಬಿರುಬೇಸಿಗೆ, ನಿನ್ನ ಪ್ರೀತಿಗೆ

ಹೇ ಪ್ಲೀಸ್ ಬತ್ತದಿರಲಿ ನಿನ್ನ ಪ್ರೀತಿಯ ಒರತೆ

ಹುಡಕದಿರು ನನ್ನಲ್ಲಿ ಕೊರತೆ ……..

ಜರೂರಿದೆ ನಿನ್ನ ನಗೆಯ ಬೆಳಕು

ಶಕ್ತಿ ನೀಡಲು ನನ್ನ ದೇಹದ ಕಣ ಕಣಕೂ

ಬಡಿದೋಡಿಸಬೇಕಾಗಿದೆ ತುರ್ತಾ ಗಿ ನನ್ನ ಬಾಳಿನ ತಮಸ್ಸು

ಅದಕ್ಕಾಗಿ ನೀ ಮಾಡಬೇಕಿದೆ ಕೊಂಚ ಮನಸ್ಸು

 

ನಂಬು ಬಿಟ್ಟಿರಲಾರೆ ನಾ ನಿನ್ನ ಅರೆಗಳಿಗೆ

ನೀ ನಿಲ್ಲದೆ ಬೆಳಕೆಲ್ಲಿದೆ ಈ ಬಾಳಿಗೆ…

ಹೇ ಯಾರು ಏನಾದರೂ ಅಂದುಕೊಳ್ಳಲಿ

ನಾ ನಿನಗಷ್ಟೇ ಮೀಸಲು ಈ ಜನ್ಮದಲಿ

6 Comments

Add Comment