Quantcast

ಮಿಸ್ ಮಾಡಬೇಡಿ ’ಇಂಗಳೆ ಮಾರ್ಗ’

ಆರ್ ಜಿ ಹಳ್ಳಿ ನಾಗರಾಜ್

“ಇಂಗಳೆ ಮಾರ್ಗ”

ಬೆಳಗಾವಿ, ಅಥಣಿ, ರಾಯಭಾಗ ಮೊದಲಾದ ಕನ್ನಡ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡ ಚಿತ್ರ. ಇದರ ಮೂಲ ಕತೆ ಕವಿ ಪತ್ರಕರ್ತ ಗೆಳೆಯ ಡಾ. ಸರಜೂ ಕಾಟ್ಕರ್. ಇದು ಚಲನಚಿತ್ರ ಆಗಲು ಗೆಳೆಯನ ಪ್ರಯತ್ನವೂ ಇದೆ. ಇನ್ನೊಂದು ವಿಶೇಷ ಎಂದರೆ ಈ ಚಿತ್ರದ ಸಾಹಿತ್ಯ ಹಾಗು ಹಾಡುಗಳನ್ನು ಇನ್ನೊಬ್ಬ ಕವಿ ಬಂಡಾಯ ಸಾಹಿತಿ ಹಾವೇರಿಯ ಸತೀಶ ಕುಲಕರ್ಣಿ ರಚಿಸಿದ್ದಾನೆ. ಇಬ್ಬರಿಗೂ ಮೊದಲಚಿತ್ರಕ್ಕೆ ಸ್ವಾಗತ ಹಾಗೂ ಅಭಿನಂದನೆ.

ಕೆಲವು ತಿಂಗಳ ಹಿಂದೆ ರೈಲ್ವೇ ನಿಲ್ದಾಣ ಬಳಿಯ “ದಿ ಬೆಲ್” ಹೋಟೆಲಾದ ಸಭಾಂಗಣದಲ್ಲಿ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆದಿತ್ತು. ಅಂದು ಲೋಕಾಯುಕ್ತಕ್ಕೆ ಮಹತ್ವ ತಂದುಕೊಟ್ಟ ನ್ಯಾಯಮೂರ್ತಿ ಸಂತೋಷ ಹೆಗಡೆ ಬಂದು ಆಡಿಯೋ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದರು. ನಾನು ಆ ಸಮಾರಂಭಕ್ಕೆ ಸಾಕ್ಷಿ ಆಗಿದ್ದೆ. ಅಂದು ಕೆಲವು ದೃಶ್ಯ, ಹಾಡಿನ ತುಣುಕು ತೋರಿಸಿದ್ದರು.

ವಾಸ್ತವ ನೆಲೆಗಟ್ಟಿನಲ್ಲಿ ಸ್ವಾತಂತ್ಯ ಪೂರ್ವದ ಕತೆ ಮನನೀಯವಾಗಿ ಚಿತ್ರಿತವಾಗಿದೆ.

ಚಿತ್ರ ಪ್ರೇಮಿಗಳು, ಸಂಸ್ಕೃತಿ ಚಿಂತಕರೆಲ್ಲ ಈ ಚಿತ್ರ ನೋಡಿ ಪ್ರೋತ್ಸಾಹಿಸಬೇಕು.

One Response

  1. KBS
    September 10, 2014

Add Comment

Leave a Reply