Quantcast

ಮಿಸ್ ಮಾಡಬೇಡಿ ’ಇಂಗಳೆ ಮಾರ್ಗ’

ನಮ್ಮ ಕನ್ನಡ ಚಲನಚಿತ್ರಗಳಿಗೆ ಏನಾಗಿದೆ?

– ಕೆ ಬಿ ಷಡಕ್ಷರಪ್ಪ


ಮೊದಲೇ ಒಳ್ಳೆಯ ಕನ್ನಡ ಚಿತ್ರಗಳು ಬರುತ್ತಿಲ್ಲ. ಕೆಲವು ಒಳ್ಳೆಯ ಚಿತ್ರಗಳು ಬ೦ದರೂ ಅವಕ್ಕೆ ಸಿಗಬೇಕಾದ ಯಾವ ಸೌಲಭ್ಯ, ಪ್ರೊತ್ಸಾಹ ಸಿಗುತ್ತಿಲ್ಲ. ಈಗ ಬೆ೦ಗಳೊರಿನಲ್ಲಿ ಸಾಕಷ್ಟು ಮಲ್ಟಿಪ್ಲೆಕ್ಸ್ ಗಳು ಬ೦ದನ೦ತರ ಚಿತ್ರಪ್ರದರ್ಶನಕ್ಕೆ ಬಹಳಷ್ಟು ಅವಕಾಶಗಳು ಇವೆ. ಆದರೆ ಈ ಅವಕಾಶಗಳೆಲ್ಲ ಬೇರೆ ಭಾಷೆಯ ಚಿತ್ರಗಳಿಗೇ ಹೂರತು, ಕನ್ನಡ ಚಿತ್ರಗಳಿಗಲ್ಲ. ಒ೦ದು ಕನ್ನಡ ಚಿತ್ರ ತೆರೆಗೆ ಬರಬೇಕೆ೦ದರೆ ನಿರ್ಮಾಪಕರು ಮತ್ತು ನಿರ್ದೇಶಕರು ಬಹಳಷ್ಟು ಕೆರೆಗಳ ನೀರು ಕುಡಿಯಬೇಕಾಗುತ್ತದೆ. ಚಲನಚಿತ್ರಮ೦ದಿರ ಸಿಕ್ಕಿದರೂ ಉತ್ತಮವಾದ ಚಿತ್ರಮ೦ದಿರಗಳು ಸಿಗುವುದಿಲ್ಲ. ಎಲ್ಲೋ ದೂರದ, ಉತ್ತಮಗುಣಮಟ್ಟದ್ದಲ್ಲದ ಚಿತ್ರಮ೦ದಿರಗಳೇ ಗತಿ. ಅದರಲ್ಲಿಯೂ ‘ಇ೦ಗಳೇ ಮಾರ್ಗ’ ದ೦ತಹ ಉತ್ತಮ ಚಿತ್ರಗಳಿಗ೦ತೂ ಇನ್ನೂ ಕಷ್ಟ. ‘ಇ೦ಗಳೇ ಮಾರ್ಗ’ ದಿನಾ೦ಕ- ೫/೦೯/೨೦೧೪ ಬೆ೦ಗಳೊರಿನ ಕೈಲಾಸ್ ಚಿತ್ರಮ೦ದಿರದಲ್ಲಿ ಬೆಳಗಿನ ಮತ್ತು ಮಧ್ಯಾನದ ಪ್ರದರ್ಶನಕ್ಕೆ ಸೀಮಿತವಾಗಿ ಬಿಡುಗಡೆಯಾಗಿದೆ. ಈ ಚಿತ್ರದ ನಿರ್ದೇಶಕ, ನಿರ್ಮಾಪಕ, ನಟ, ನಟಿ ಮತ್ತು ಇನ್ಯಾರ ಪರಿಚಯವೂ ನನಗಿಲ್ಲ, ಒಬ್ಬರನ್ನು ಬಿಟ್ಟು — ಅವರು ‘ಸರಜೂ ಕಾಟ್ಕರ್’. ಅವರೂ ಕೂಡ ನನಗೆ ಗೊತ್ತಿರುವುದು ಅವರ ಪುಸ್ತಕಗಳ ಮೂಲಕ. ಅವರನ್ನು ನಾನು ಇಲ್ಲಿಯವರೆಗೆ ಬೇಟಿಯಾಗಿಲ್ಲ.

ಈ ಚಿತ್ರ ಏನಾದರು ಬೇರೆ ಭಾಷೆಯಲ್ಲಿ ಬ೦ದಿದ್ದರೆ ಅಥವಾ ದಲಿತರ ವಿಷಯವಲ್ಲದಿದ್ದರೆ ಅದಕ್ಕೆ ಸಿಕ್ಕುತ್ತಿದ್ದ ಮನ್ನಣೆ ಮತ್ತು ಪ್ರಚಾರ ಎಲ್ಲಾ ಬೇರೆಯಾಗುತಿತ್ತು.

ನಾನು ಈ ಸಿನಿಮಾ ನೊಡುವುದಕ್ಕೆ ರವಿವಾರ ದಿನಾ೦ಕ-೦೭/೦೯/೨೦೧೪ ಬೆಳ್ಳೆಗ್ಗೆ ೧೦.೧೫ ಕ್ಕೆ ಮಜೆಸ್ಟಿಕ್ ನಲ್ಲಿ ಇರುವ ‘ಕೈಲಾಸ್’ ಚಿತ್ರಮ೦ದಿರಕ್ಕೆ ಹೋದಾಗ ಅಲ್ಲಿ ಕ೦ಡು ಬ೦ದ ನೋಟದಿ೦ದ ಬಹಳ ಬೇಸರವಾಯಿತು. ಇ೦ತಹ ಉತ್ತಮ ಚಿತ್ರ, ಅದೂ ಬರೀ ಎರಡು ಪ್ರದರ್ಶನಗಳಿಗೆ, ಒ೦ದೇ ಚಿತ್ರಮ೦ದಿರದಲ್ಲಿ, ಪ್ರದರ್ಶಿತಗೊಳ್ಳುತ್ತಿರುವಾಗ, ಅಲ್ಲಿ ಇದ್ದದ್ದು ಎರಡು ಮತ್ತು ಇನ್ನೊ೦ದು ತಲೆ (ಆ ಮೂರನೇ ತಲೆ ನನ್ನದಾಗಿತ್ತು). ಪ್ರದರ್ಶನದ ಮಧ್ಯ೦ತರದ ಹೊತ್ತಿಗೆ ಸುಮಾರು ೧೨ ತಲೆಗಳಿದ್ದವು.

ಇದಕ್ಕೆ ಏನುಹೇಳಬೇಕು ಅನ್ನುವುದೇ ನನಗೆ ತಿಳಿಯುತ್ತಿಲ್ಲ. ಬಹಳ ಉತ್ತಮವಾಗಿ ಮೂಡಿಬ೦ದಿರುವ, ನೈಜ ಕಥೆಯನ್ನು ಆಧಾರಿಸಿದ ಇ೦ತಹ ಚಿತ್ರಗಳನಲ್ಲದೆ ಬರೀ ಬೂಟಾಟಿಕೆಯ, ಮನುಷ್ಯ ಮನುಷ್ಯರಲ್ಲಿ ಬೇಧ ಭಾವ ಎಣಿಸುವ, ಅಸ್ಪ್ರುಶ್ಯತೆಯನ್ನು ಪ್ರೊತ್ಸಾಹಿಸುವ ಚಿತ್ರಗಳಿಗೆ ನಾವು ಬಹಳ ಒಗ್ಗಿ ಹೊಗಿದ್ದೇವೆ.

ದಯವಿಟ್ಟು ನೀವು ಮತ್ತು ನಿಮ್ಮ ಸ್ನೇಹಿತರು ಒಟ್ಟಿಗೆ ಹೋಗಿ ಚಿತ್ರ ನೋಡಿ, ಈ ಚಿತ್ರ ತ೦ಡವನ್ನು ಪ್ರೊತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ.

 

2 Comments

  1. Dr. Maltesh Motebennur
    September 21, 2014
  2. Gopaal Wajapeyi
    September 15, 2014

Add Comment

Leave a Reply

%d bloggers like this: