Quantcast

ಮೋಹಿತ್ ಸೂರಿ ಎಂಬ ರೋಮ್ಯಾಂಟಿಕ್ ನಿದೇಶಕನ ಕುರಿತು….

ಮಲ್ಲಿಕಾರ್ಜುನ ದಳವಾಯಿ

ಸಿನಿಮಾ ಒಂದು ಸೃಜನಶೀಲ ಮಾಧ್ಯಮ. ಜಗತ್ತಿನಲ್ಲಿ ಅತೀ ಹೆಚ್ಚು ಜನರನ್ನು ರಂಜಿಸುವ ಬೃಹತ್ ಮನರಂಜನಾ ಸರಕು. ಇಂತಹ ಕ್ಷೇತ್ರದಲ್ಲಿ ಬಹಳ ದಿನ ಕಾಲೂರಿ ನಿಲ್ಲಲು, ಸತತವಾಗಿ ಗೆಲ್ಲಲು ಅಗಾಧ ಪರಿಶ್ರಮ ಹಾಗೂ ಭಿನ್ನ ಚಿಂತನೆ, ಬದಲಾವಣೆಗೆ ಒಗ್ಗಿಕೊಳ್ಳುವ ಮನಸ್ಸು ಇರಬೇಕಾಗುತ್ತದೆ. ಇಲ್ಲಿಗೆ ಕೆಲವರು ತುಂಬ ಬೇಗ ಬಂದು ಅಷ್ಟೇ ಬೇಗ ಜಾಗ ಖಾಲಿ ಮಾಡುತ್ತಾರೆ. ಇನ್ನೂ ಕೆಲವರು ಒಂದು ಇನ್ನಿಂಗ್ಸ್ ಮುಗಿಸಿ ಹೊರಟು ಬಿಡುತ್ತಾರೆ. ಆದರೆ ಕೆಲವರು ಮಾತ್ರ ಏನೇ ಆದರೂ ಕದಲಲೊಲ್ಲರು. ಇದ್ದಷ್ಟು ದಿನ ತಮ್ಮ ಶ್ರದ್ಧೆ, ಶ್ರಮ, ಆಸಕ್ತಿಗಳ ಮೂಲಕ ಅಭಿಮಾನಿಗಳನ್ನು ಖುಷಿಪಡಿಸುತ್ತಾರೆ. ಅವರಲ್ಲಿ ನಿರ್ದೇಶಕರು, ನಟರು, ನಟಿಯರು, ಕಲಾವಿದರು ಇದ್ದಾರೆ. ಆದರೆ ಸಿನಿ ಕ್ಷೇತ್ರಕ್ಕೆ ಆಗಮಿಸಿದಷ್ಟೇ ವೇಗವಾಗಿ ಸಾಧನೆಯ ಹಳಿ ಮೇಲೆ ಪಯಣಿಸಿ ಅದರ ರುಚಿಯನ್ನು ಜಗತ್ತಿಗೆ ಉಣಬಡಿಸಿ ನೆನಪುಳಿಯುವವರು ಮಾತ್ರ ಬೆರಳೆಣಿಕೆಯಷ್ಟು ಜನ. ಅಂತಹವರಲ್ಲಿ ಇತ್ತೀಚೆಗೆ ಹೆಚ್ಚು ಗಮನ ಸೆಳೆದವರು ಮೋಹಿತ್ ಸೂರಿ.

ನಿಮಗೆ ನೆನಪಿರಬಹುದು. 2005ರಲ್ಲಿ `ಝಹೇರ್’ ಸಿನಿಮಾ ಬಿಡುಗಡೆಯಾಗಿತ್ತು. ಇಮ್ರಾನ್ ಹಸ್ಮಿ, ಆದಿತಿ ಗೋಸ್ವಾಮಿ, ಶಮಿತಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದರು. ಹಾಡುಗಳು ಕೇಳುಗರೆದೆಯಲ್ಲಿ ಕಂಪನ ಹುಟ್ಟಿಸಿದ್ದವು. ಅಗರ್ ತುಮ್ ಮಿಲ್ ಜಾವೋ ಜಮಾನಾ ಚೋಡ್ ದೇಂಗೆ ಹಮ್` ಅನ್ನೋ ಹಾಡಂತೂ ಸಿನಿ ಪ್ರೇಮಿಗಳ ಎದೆಯಲ್ಲಿ ಗಟ್ಟಿಯಾಗಿತ್ತು. ಅಂದಹಾಗೇ `ಝಹೇರ್ ಸೂರಿ’ ನಿರ್ದೇಶನದ ಮೊದಲ ಸಿನಿಮಾ. ತ್ರೀಕೋನ ಪ್ರೇಮಕಥಾ ಹಂದರವುಳ್ಳ ಈ ಚಿತ್ರ ನೋಡುಗರಿಗೆ ಮಜ ನೀಡಿತ್ತು. ಸಿನಿಮಾದಲ್ಲಿ ವಿಪರೀತ ಅನ್ನಿವಷ್ಟು ಚುಂಬನ ದೃಶ್ಯಗಳಿವೆ ಅನ್ನೋದನ್ನು ಹೊರತುಪಡಿಸಿದರೆ ಅದೊಂದು ಅಪ್ಪಟ ಮನರಂಜನಾ ಚಿತ್ರವಾಗಿತ್ತು. ಹಾಗಂತ ಸೂರಿ ಇದೇ ಚಿತ್ರದಿಂದ ವೃತ್ತಿ ಬದುಕು ಆರಂಭಿಸಿದವರಲ್ಲ. ಇದಕ್ಕೂ ಮೊದಲು ಮುಖೇಶ್ ಭಟ್ ಹಾಗೂ ಮಹೇಶ್ ಭಟ್ ಟೀಮಿನ ಅನೇಕ ಚಿತ್ರಗಳಿಗೆ ಇವರು ಕೆಲಸ ಮಾಡಿದ್ದರು.

ಕಸೂರ್(2001) ಆವಾರಾ ಪಾಗಲ್ ದೀವಾನಾ(2002) ಫುಟ್ಪಾತ್(2003) ಸಿನಿಮಾಗಳಿಗೆ ಸಹಾಯಕ ನಿದರ್ೇಶರಾಗಿ ದುಡಿದ ಸೂರಿ ಅನುಭವ ಗಳಿಸಿಕೊಂಡರು. ಆದರೆಟ 2005ರಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿದರ್ೇಕರಾಗಿ ಸೂರಿ ಡೈರ್ಕ್ಟರ್ ಕ್ಯಾಪ್ ಧರಿಸಿದರು. ನಿದರ್ೇಶಿಸಿದ ಮೊದಲ ಚಿತ್ರವೇ ಹಿಟ್ ಆಗಿತ್ತು. ಇಪ್ಪತ್ತೈದು ವರ್ಷ ವಯಸ್ಸಿನ ಮೋಹಿತ್ ಅನ್ನೋ ಹುಡುಗ ಬಾಲಿವುಡ್ ಅಂಗಳದಲ್ಲಿ ಸ್ವತಂತ್ರನಾಗಿ, ಹಿಟ್ ಎಂಬ ಚಿತ್ರದ ಮಹಡಿಯ ಮೇಲೆ ಆಸೀನನಾಗಿದ್ದ. ಆದರೆ ಅವನಿಗೆ ಎಚ್ಚರವಿತ್ತು. ಆ ಎಚ್ಚರವೇ ಮತ್ತೆ ಆತನನ್ನು ಬಾಲಿವುಡ್ ಅಂಗಳದ ಸೂಕ್ಷ್ಮಗಳಿರುವ ನಿದರ್ೇಶಕನನ್ನಾಗಿ ಚಾಲ್ತಿಯಲ್ಲಿಟ್ಟಿತು. ಅದೇ ವರ್ಷ ಮತ್ತೊಂದು ಹಿಟ್ ಚಿತ್ರ ಅವರ ಬತ್ತಳಿಕೆಯಿಂದ ಸಿಡಿದು ಬಂತು. ಆಗ ಮಾತ್ರ ಇಡೀ ಬಾಲಿವುಡ್ ಸೂರಿಯತ್ತ ಹೊರಳಿ ನೋಡಿತು. ಆ ಚಿತ್ರ `ಕಲಿಯುಗ್’. ವಿಚಿತ್ರ ಕಥಾ ಹಂದರದ ಸಿನಿಮಾ ಕೊಟ್ಟ ಸೂರಿ ಅದರೊಂದಿಗೆ ಸೈಫ್ ಅಲಿಖಾನ್ ತಂಗಿ ಸೋಹಾ ಅಲಿಖಾನ್ಳಿಗೆ ಒಬ್ಬ ಚೆಂದದ ಬಾಳ ಸಂಗಾತಿಯನ್ನು ಹುಡುಕಿ ಕೊಟ್ಟರು. ಯಾಕೆಂದರೆ, ಇವತ್ತು ಸೋಹಾಳನ್ನು ವರಿಸಲು ಅಣಿಯಾಗಿರುವ `ಕುನಾಲ್ ಕೇಮು’ ಅನ್ನೋ ಮುತ್ತನ್ನು ಬಾಲಿವುಡ್ ಅಂಗಳದಲ್ಲಿ ಹೊಳೆಯುವಂತೆ ಮಾಡಿದ ಶಿಲ್ಪಿ ಮಾತ್ರ ಒನ್ಸ್ ಅಗೇನ್ ಸೂರಿ. ಅದಾದ ಬಳಿಕ ಮೋಹಿತ್ ಹಿಂತಿರುಗಿ ನೋಡಲಿಲ್ಲ.

ವೋ ಲಮ್ಹೆ(2006) ಅವರ ಮತ್ತೊಂದು ಚಿತ್ರ. ಸಿನಿಮಾ ಸಾಧಾರಣ ಸದ್ದು ಮಾಡಿದರೂ ಅದರಲ್ಲಿನ ಹಾಡುಗಳು ಮಾತ್ರ ಕೇಳುವಂತ್ತಿದ್ದವು. ಶೈನಿ ಅಹುಜಾ ಅನ್ನೋ ನಟನ ಶೈನಿಂಗ್ ಹೆಚ್ಚಿದ್ದು ಮಾತ್ರ ಇದೇ ಚಿತ್ರದಿಂದ. ಆ ಶೈನಿ ಹೊಳಪು ಕಳೆದುಕೊಂಡು ಅತ್ಯಾಚಾರದ ಪ್ರಕರಣದಲ್ಲಿ ಜೈಲು ಸೇರಿದರು ಅನ್ನೋದು ಬೇರೆ ಮಾತು. ಆ ಬಳಿಕ ಆವಾರಾಪನ್(2007) ಸಿನಿಮಾ ಬಂತು. ಸಿನಿಮಾ ಓಡಿತು. ಯರ್ರಾಬಿರ್ರಿ ಹಿಟ್ ಆಯಿತು ಅನ್ನೋದಕ್ಕಿಂತ ಆ ಸಿನಿಮಾದ ಹಾಡುಗಳು ಮಾತ್ರ ಮೋಹಿತ್ ಸೂರಿ ಎಂಬ ನಿದರ್ೇಶಕನ ಮೇಲೆ ಭಾರತೀಯರಿಗೆ ಮೋಹ ಹುಟ್ಟುವಂತೆ ಮಾಡಿದ್ದವು. ಪ್ರೀತಮ್ ಅನ್ನೋ ಸಂಗೀತ ಮಾಂತ್ರಿಕನ ಕೈಚಳಕದಲ್ಲಿ ಮೂಡಿದ ಅಷ್ಟೂ ಹಾಡುಗಳು ಧೂಳೆಬ್ಬಿಸಿ ದಾಖಲೆ ಮಾಡಿದರೆ, ಈ ಸಿನಿಮಾದಿಂದ ಇಮ್ರಾನ್ ಹಸ್ಮಿ ಅನ್ನೋ ಚುಂಬನವೀರ ಮತ್ತೆ ಚಾಲ್ತಿಗೆ ಬಂದ. ರಾಜ್- ದಿ ಮಿಸ್ಟ್ರಿ ಕಂಟಿನ್ಯೂಸ್(2009) ಕೂಡ ಹಿಟ್ ಚಿತ್ರವೇ. ಆ ಮೇಲೆ ಸೋಲಿನ ರುಚಿ ಕೂಡ ಗೊತ್ತಿರಲಿ ಎಂಬಂತೆ, ಕ್ರೂಕ್- ಇಟ್ಸ್ ಗುಡ್ ಟು ಬಿ ಬ್ಯಾಡ್ (2010) ಚಿತ್ರ ಸೂರಿಗೆ ಮೊದಲ ಸೋಲಿನ ರುಚಿ ತೋರಿಸಿತು. ಹಾಡುಗಳು ಚೆನ್ನಾಗಿದ್ದರೂ ಕೂಡ ಸಿನಿಮಾ ಓಡಲಿಲ್ಲ. ಸೋಲಿನ ಸುಳಿಯಿಂದ ಹೊರಬರಲು ಮರ್ಡರ್-2(2010) ಚಿತ್ರ ಕೊಟ್ಟು ಗೆಲುವು ನೀವೇ ಅನುಭವಿಸಿ ಎಂದು ಪ್ರೇಕ್ಷಕರಿಗೆ ಹೇಳಿ ಸೂರಿ ಸುಮ್ಮನಾದರು.

ಆದರೆ ಪ್ರತಿ ನಿರ್ದೇಶಕನಿಗೂ ಒಂದು ಕನಸಿರುತ್ತದೆ. ತನ್ನ ಜೀವನದಲ್ಲಿ ಮೈಲುಗಲ್ಲು ಆಗುವಂತಹ ಒಂದು ಸಿನಿಮಾ ಕೊಡಬೇಕು. ಇಡೀ ದೇಶಕ್ಕೆ ದೇಶವೇ ಅದನ್ನು ಹುಚ್ಚೆದ್ದು ಪ್ರೀತಿಸಬೇಕು ಎನ್ನುವಂತಹ ಆಸೆ. ಕೆಲವರಿಗೆ ಸಾಧ್ಯವಾದರೆ ಮತ್ತೆ ಕೆಲವರು ಸಾಧ್ಯವಾಗಿಸಿಕೊಳ್ಳುವ ಪ್ರಯತ್ನದಲ್ಲಿಯೇ ಸಿನಿ ಪಯಣ ಮುಗಿಸಿರುತ್ತಾರೆ. ಆದರೆ ಒಬ್ಬ ಮೋಹಿತ್ ಸೂರಿ ಎಂಬ ಮೂವತ್ತೆರಡರ ಚೆಲುವ ಮಾತ್ರ ಅದನ್ನು ಈಡೇರಿಸಿಕೊಂಡ. ಸಾಧಾರಣ ಕಥೆ, ಕಡಿಮೆ ವೆಚ್ಚದ, ಹೊಸ ತಾರಾಗಣವುಳ್ಳ ಸಿನಿಮಾ ಒಂದನ್ನು ಜಾಗತಿಕ ಮಟ್ಟದಲ್ಲಿ ಗೆಲ್ಲಿಸಿಕೊಂಡ. ಅದರಲ್ಲಿನ ಹಾಡು ಕೇಳಿದ ಪ್ರತಿ ಸಿನಿಪ್ರಿಯನ ಹೃದಯ ವಿಲಗುಟ್ಟಿತು. ಕೆಲವರು ಹೆಂಡದ ಸಹವಾಸ ಬಿಟ್ಟರು. ಮತ್ತೆ ಕೆಲವರು ಹೊಸದಾಗಿ ಮದಿರಾಖಾನೆಗೆ ಸೇರ್ಪಡೆಯಾದರು. ಇಡೀ ಭಾರತೀಯ ಚಿತ್ರರಂಗ ಇವತ್ತಿಗೂ ಆ ಸಿನಿಮಾದ ಹಾಡುಗಳ ಗುಂಗಿನಿಂದ ಹೊರಬರಲಾಗಿಲ್ಲ. ಆಶಿಕಿ-2(2013) ಆ ಚಿತ್ರದ ಹೆಸರು. ಸಿದ್ಧಾರ್ಥ ರಾಯ್ ಕಪೂರ್ ಎಂಬ ಹೀರೋ, ಶ್ರದ್ಧಾ ಕಪೂರ್ ಎಂಬ ಚೆಲುವೆ, ಅಜರ್ಿತ್ ಸಿಂಗ್ ಎಂಬ ಗಾಯಕರನ್ನು ಭಾರತೀಯ ಚಿತ್ರರಂಗಕ್ಕೆ ಉಡುಗೂರೆಯಾಗಿಸಿದ್ದು ಮಾತ್ರ ಆಶಿಕಿ ಹೆಗ್ಗಳಿಕೆ. ಅದರಲ್ಲಿನ ಪ್ರೀತಿಯ ಕುರಿತಾದ ಸಂಭಾಷಣೆಗಳು ಮಾತ್ರ ನಿಜಕ್ಕೂ ಮಾವು ಸವಿದಷ್ಟೇ ಸೊಗಸು. `ಏ ಜಿಂದಗೀ ಚಲ್ ತೋ ರಹಿತಿ ಲೇಕಿನ್ ತೇರೆ ಆನೇ ಸೇ ಮೈ ಜೀನಾ ಶುರು ಕರ್ ದಿಯಾ’ ಎಂಬ ಮಾತು ಮರೆಯಲಸಾಧ್ಯ.

ಪ್ರತಿ ನಿದೇಶಕ ಭಿನ್ನವಾಗಿ ಚಿಂತಿಸುತ್ತಾನೆ. ಜಗದ ಕಣ್ಣಿಗೆ ಅದು ಸಾಮಾನ್ಯ ಸಂಗತಿಯಂತೆ ಗೋಚರಿಸಿದರೂ ಅವನ ಯೋಚನಾ ಧಾಟಿ, ಚಿಂತನಾಕ್ರಮ ಅವನಿಗೆ ಸೊಗಸೆ; ಹೊಸದೇ. ಆದರೆ ಕೆಲವರು ಮಾತ್ರ ಕೆಲವೊಂದು ಸಿದ್ಧ ಸೂತ್ರಗಳಿಗೆ ಅಂಟಿಕೊಂಡಿರುತ್ತಾರೆ. ಅಂಟಿಕೊಂಡರೂ ಅದರಲ್ಲೇ ಹೊಸದನ್ನು ಜಗಕ್ಕೆ ನೀಡುತ್ತಾರೆ. ಮೋಹಿತ್ ಕೂಡ ಹಾಗೊಬ್ಬ ಚಿಂತಕ. ಆಶಿಕಿ-2 ಅನ್ನೋ ಪ್ರೇಮಕಾವ್ಯ ಕೊಟ್ಟಂತೆ, ಏಕ್ ವಿಲನ್(2014) ಎಂಬ ಭರ್ಜರಿ ತ್ರೀಕೋನ ಪ್ರೇಮಕಥಾನಕ ನೀಡಿದರು. ಬಾಲಿವುಡ್ ಎಂಬ ಬೃಹತ್ ದೋಣಿಯಲ್ಲಿ ಈಜಲಾಗದೇ ಗುರಿಯಿರದೇ ಬಿಟ್ಟ ಬಾಣದಂತೆ ಸೋತು ಕಂಗಾಲಾಗಿದ್ದ ಶಾಹೀದ್ ಕಪೂರ್ ಎಂಬು ಸ್ಪುರದ್ರೂಪಿ ನಟ ಈ ಚಿತ್ರದಿಂದ ಗಡ್ಡ ಶೇವ್ ಮಾಡಿಕೊಂಡು ನೀಟಾದ. ಶ್ರದ್ಧಾ ಕಪೂರ್ ಅನ್ನೋ ಮಂದಸ್ಮಿತ ನಟಿ ಮತ್ತಷ್ಟು ಪ್ರಬುದ್ಧಳಾದಳು. ಆದರೆ ಒಬ್ಬ ಸೂರಿ ಮಾತ್ರ ತಣ್ಣಗಿದ್ದ. ಬಿಗ್ ಹಿಟ್ ಕೊಟ್ಟ ಖುಷಿಯಲ್ಲಿ ಯಾವತ್ತಿಗೂ ತೇಲಾಡದ ಅವರ ಸರಳತನವೇ ಇವತ್ತಿಗೂ ಅವರನ್ನು ಕಾಯುತ್ತಿದೆ ಎಂದರೆ ಅತಿಶಯೋಕ್ತಿಯೇನಲ್ಲ.

ಮಹೇಶ್ ಭಟ್, ಮುಖೇಶ್ ಭಟ್ರಂತಹ ಸೋದರ ಮಾವಂದಿರ ಗುರು ಸಾನ್ನಿಧ್ಯ, ಇಮ್ರಾನ್ ಹಸ್ಮಿ, ಅಲಿಯಾ ಭಟ್, ಪೂಜಾ ಭಟ್ ಎಂಬ ಕಸಿನ್ಸ್, ತಂಗಿ ಸ್ಮೈಲಿ ಸೂರಿ ಎಲ್ಲರೂ ಜೊತೆಗಿದ್ದಾರೆ ಎಂಬುದು ಗೊತ್ತಿದ್ದರೂ, ತನ್ನದೇ ಹಾದಿಯಲ್ಲಿ ನಡೆಯುತ್ತಿರುವ ಮೋಹಿತ್ಗೆ ಮಾತ್ರ ಸಿನಿಮಾ ಮೋಹ ಕಮ್ಮಿಯಾಗಿಲ್ಲ. ಅದಕ್ಕುತ್ತರವಾಗಿ ಮತ್ತೊಂದು ಸಿನಿಮಾ ರೆಡಿ ಮಾಡಿ ಕೋತಿದ್ದಾರೆ ಸೂರಿ. `ಹಮಾರಿ ಅದೂರಿ ಕಹಾನಿ’ ಅದರ ಹೆಸರು. ಮತ್ತೆ ಮತ್ತೆ ಎಂಬಂತೆ ಇಮ್ರಾನ್ ಹಸ್ಮಿ ಇಲ್ಲೂ ಇದ್ದಾರೆ. `ಗ್ಯಾಂಗ್ಸ್ ಆಫ್ ವಸೇಪುರ್’ ಚಿತ್ರದಲ್ಲಿ ‘ಶಮಶಾದ್ ಆಲಂ’ ಅನ್ನೊ ಪಾತ್ರ ಮಾಡಿದ್ದ `ರಾಜಕುಮಾರ್ ಯಾದವ್’ ಎಂಬ ನಟನಿಗೆ ಇದರಲ್ಲಿ ಸೋಲೋ ಪಾತ್ರವಾದರೂ, ಸೂರಿ ಕೈಯಲ್ಲಿ ಆ ಪಾತ್ರಕ್ಕೊಂದು ಗಟ್ಟಿ ನೆಲೆ ದಕ್ಕಿರುತ್ತದೆ ಎನ್ನುವುದು ಟ್ರೈಲರ್ ನೋಡಿದಾಗಲೇ ಪಕ್ಕಾ ಆದಂತಿದೆ. ಇನ್ನೂ ಈ ಸಿನಿಮಾದಲ್ಲಿ ಬಾಲಿವುಡ್ ಮಿಂಚಿಂಗ್ ಆಂಟಿ `ವಿದ್ಯಾಬಾಲನ್’ ಇದ್ದಾರೆ. ನಾಯಕಿಯಾಗಿ ಸೂರಿ ಸಿನಿಮಾದಲ್ಲಿ ಅವರಿಗಿದು ಮೊದಲ ಅವಕಾಶ. ಮೂವತ್ನಾಲ್ಕು ವರ್ಷದ ವಿದ್ಯಾ ಈ ಸಿನಿಮಾದಲ್ಲಿ ಅದೇನೂ ಮೋಡಿ ಮಾಡಲಿದ್ದಾರೋ ಗೊತ್ತಿಲ್ಲ. ಆದರೆ ಬಾಲಿವುಡ್ ಸಿನಿ ಅಂಗಳ ಮಾತ್ರ ಈ `ಅದೂರಿ ಪ್ರೇಮ ಕಹಾನಿ’ ನೋಡಲು ತುದಿಗಾಲಲ್ಲಿ ನಿಂತಿದೆ.

ಇಷ್ಟೇಲ್ಲ ಹೇಳಿದ ಮೇಲೆ ಮೋಹಿತ್ ಕುರಿತು ಇನ್ನೆರಡು ಮಾತು ಹೇಳಲೇ ಬೇಕು. ಮೋಹಿತ್ ಸಿನಿಮಾಗಳಲ್ಲಿ ತ್ರಿಕೋನ ಪ್ರೇಮದ ವಸ್ತುಗಳೇ ಚಿತ್ರಕತೆಗಳಾಗಿ ಹೆಚ್ಚು ಬಳಕೆಯಾಗುತ್ತವೆ. ಪ್ರೇಮ ಮತ್ತು ಕ್ರೌರ್ಯ ಎರಡನ್ನೂ ಅವರು ಸಂಭಾಳಿಸುತ್ತಾರೆ. ಹೆಚ್ಚಾಗಿ ಹೊಸ ಮುಖಗಳು ಅಥವಾ ಅಷ್ಟೇನೂ ಹೆಸರು ಮಾಡದ ನಟ-ನಟಿಯರು ಇವರ ಸಿನಿಮಾಗಳಲ್ಲಿರುತ್ತಾರೆ. ನಾಲ್ಕು ಹಾಡು, ಲಿಕ್ಕವಿಲ್ಲದಷ್ಟು ಹೊಡೆದಾಟ ತುಂಬಿ `ಯಾವ ತರಹದ ಸಿನಿಮಾ ಇದು’ ಎಂದು ಚಿಂತಿಸುವ ಹಾಗೇ ಮಾಡುವ ಸಿನಿಮಾಗಳನ್ನು ಸೂರಿ ಯಾವತ್ತೂ ಮಾಡಿಲ್ಲ. ಪ್ರೀತಿಯ ಹಸಿ ಮುಖಗಳನ್ನು ತೋರಿಸುವಾಗಿನ ಅವರ ಎಚ್ಚರಿಕೆ, ಸ್ವಾತಂತ್ರೃ ಮತ್ತು ಸ್ವೇಚ್ಚೆ ನಡುವಿನ ಅಂತರವನ್ನು ಅವರು ತೋರಿಸುವ ಬಗೆ ಎಲ್ಲವೂ ಚೆಂದ. ಕೇವಲ ಚೆಂದದ ಹಾಡುಗಳ ಮೂಲಕ ಸಿನಿಮಾ ಗೆಲ್ಲಿಸಬಹುದು ಎಂಬ ಭಟ್ ಕ್ಯಾಂಪಿನ ಹುಡುಗ ಸೂರಿ, ಸಹಜವಾಗಿ ಅಂತಹ ಸಿದ್ಧ ಫಾಮರ್ುಲಾಗಳೆಡೆಗೆ ಆಕಷರ್ಿತರಾಗಿರಬಹುದು. ದುಡ್ಡು ಮಾಡುವುದರ ಜತೆಗೆ ಸಿನಿಮಾ ನೋಡಲು ಬರುವ ಪ್ರೇಕ್ಷಕನ ಹೃದಯದ ಭಾರ ಇಳಿಸುವ ಜವಾಬ್ದಾರಿ ಕೂಡ ಪ್ರತಿ ನಿದರ್ೇಶಕನ ಮೇಲಿರುತ್ತದೆ. ಕೆಲವರು ಅದನ್ನು ನಿಭಾಯಿಸುತ್ತಾರೆ. ಮತ್ತೆ ಕೆಲವರು ಆ ಕುರಿತು ಚಿಂತಿಸದೇ ಸುಮ್ಮನಿರುತ್ತಾರೆ. ಉಸಿರುವವರೆಗೆ ಸಿನಿಮಾಗಳನ್ನೇ ಉಸಿರಾಡಿ ಬದುಕು ಮುಗಿಸಿದ ನಿದೇಶಕರಿದ್ದಾರೆ. ಹೇಳಹೆಸರಿಲ್ಲದಂತೆ ಹೋದವರೂ ಉಂಟು. ಸೂರಿ ಮಾತ್ರ ಮೊದಲ ಗುಂಪಿಗೆ ಸೇರಲಿ. ತನ್ನ ಮುಂದಿನ ಚಿತ್ರ `ಹಾಫ್ ಗಲರ್್ಫ್ರೆಂಡ್’ ತಯಾರಿ, ಕಹಾನಿಯ ಪ್ರಮೋಷನ್ನಲ್ಲಿ ಬಿಜಿ ಇರುವ ಮೂವತ್ನಾಲ್ಕು ವರ್ಷದ ಯಂಗ್ಮ್ಯಾನ್ ಮತ್ತಷ್ಟು ರೋಮ್ಯಾಂಟಿಕ್ ಸಿನಿಮಾಗಳನ್ನು ಕೊಡಲಿ. ಅಂದಹಾಗೇ ಈ ಚೆಂದದ ರಾಜಕುಮಾರನಿಗೆ ಮದುವೆಯಾಗಿದೆ. ಉದಿತಾ ಗೋಸ್ವಾಮಿ ಇವರ ಪತ್ನಿ. ಅವರೂ ಕೂಡ ನಟಿ. ಅದೂರಿ ಕಹಾನಿ ನೋಡೋದು ಬಿಡೋದು ಅವರವರಿಗೆ ಬಿಟ್ಟದ್ದು.

 

10 Comments

 1. mallikarjun talwar
  June 13, 2015
 2. mainuddin Nadaf
  June 13, 2015
 3. Mallikarjun talwar
  June 12, 2015
  • Ramakrishna
   June 13, 2015
 4. Anonymous
  June 11, 2015
 5. mallikajun talwar
  June 11, 2015
 6. Anonymous
  June 11, 2015
 7. Ramakrishna
  June 11, 2015
  • mallikajun talwar
   June 11, 2015
   • Ramakrishna
    June 12, 2015

Add Comment

Leave a Reply