Quantcast

‘ಮನಸಲ್ಲೇ ಉಳಿಯುವ ಅವಳು..’ – ಐಶ್ವರ್ಯ

11225722_10206077887800438_115379303725523637_n
ಡಾ ಐಶ್ವರ್ಯಾ

1

‘ಅವಳನ್ನು’ ನೋಡಬೇಕೆಂಬ ಆರು ತಿಂಗಳ ಕಾತರ ನನ್ನಲ್ಲೆಷ್ಟಿತ್ತೋ..ಚಿತ್ರ ನೋಡಿ 24 ಘಂಟೆಗಳು ಕಳೆದಿದ್ದರೂ ಅವಳು ಇನ್ನೂ ಕಾಡುತ್ತಲೇ ಇದ್ದಾಳೆ.
ಅವಳ ಮೂಲಭೂತ ಮನಸ್ಥಿತಿಯನ್ನು ತಾನೇ ಪೂರ್ತಿಯಾಗಿ ಒಪ್ಪಿಕೊಂಡು ತನ್ನ ಬದುಕ ನಡೆಸಲು ಸೋತು ಗೆಲ್ಲುವ ಸಂಘರ್ಷವೇ ಅವಳನ್ನು ನಿಮ್ಮೊಳಗೆ ಕರೆದೊಯ್ಯುವುದು.

ಒಂದು ಲಕ್ಷ ಜನರಲ್ಲಿ ಒಬ್ಬರಿಗೆ ಬರುವಂಥ ರೋಗಗಳ ಸುತ್ತ ಕಥೆ ಹೆಣೆದು ಸಿನೆಮಾ ಮಾಡುವುದು ಇತ್ತೀಚಿನ ಟ್ರೆಂಡ್. ಆದರೆ ಕೇವಲ 500 ಜನರ ಪೈಕಿ ಒಬ್ಬರಲ್ಲಿ ಕಂಡುಬರುವಂಥ., the most common chromosomal abnormality Klinefelter’s Syndrome – ಈ ವಿಷಯ ಮೊದಲಬಾರಿಗೆ ತೆರೆಯ ಮೇಲೆ  ಅತೀ ಸೂಕ್ಷ್ಮವಾಗಿ ನೈಜವಾಗಿ ಮೂಡಿಬಂದಿದೆ. ಇಲ್ಲಿ ರೋಗ ಜೀವಕ್ಕೇನು ಅಪಾಯ ತರುವಂಥದಲ್ಲ .. ಆದರೆ, ನಿಜವಾದ ರೋಗ ಸಮಾಜವು ಮಂಗಳಮುಖಿಯರನ್ನು ಮನುಷ್ಯರಾಗಿ ಕಾಣಲಾಗದಂಥ ದೃಷ್ಟಿಹೀನತೆ. ಬಸ್ ಸ್ಟಾಪ್, ಹೋಟೆಲ್, ಆಸ್ಪತ್ರೆ ಕಡೆಗೆ ಸಾರ್ವಜನಿಕ ಶೌಚಾಲಯಗಳನ್ನೂ ಉಪಯೋಗಿಸಲಾರದಂಥ ಪರಿಸ್ಥಿತಿ. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಮಂಗಳಮುಖಿಯರನ್ನು ತೃತೀಯ ಲಿಂಗವೆಂದು ಪರಿಗಣಿಸಿದೆ…, ಕಾನೂನು ಬದಲಾದರೇನು ಮನಸ್ಥಿತಿಗಳು ಬದಲಾಗಬೇಡವೇ? It is just one extra chromosome…ಸಾಮಾನ್ಯವಾಗಿ 46XX ಅಥವಾ 46XY
ಇರುವ ಬದಲು ಲಿಂಗವನ್ನು ಪ್ರತಿನಿಧಿಸುವ ಒಂದು Chromosome ಹೆಚ್ಚಾಗಿ 47XXY ಆಗಿರುತ್ತದೆ. ಅದೇನು ಮನುಷ್ಯರನ್ನು ಬಹಿಷ್ಕರಿಸುವಷ್ಟು ಮಹಾ ವಿಚಿತ್ರವೇ?

ಈ ಹೈಟೆಕ್-ಸೈಂಟಿಫಿಕ್ ಯುಗದಲ್ಲೂ ಸಾರ್ವಜನಿಕವಾಗಿ ಮಂಗಳಮುಖಿಯರನ್ನು ಹಿಯ್ಯಾಳಿಸುವುದು, ದೈಹಿಕ ಹಲ್ಲೆ ನಡೆಸುವುದು ನಾಚಿಕೆಗೇಡಿನ ಸಂಗತಿ.
ಚಿತ್ರದಲ್ಲಿ ಒಮ್ಮೆ ವಿದ್ಯಾ “ಈ ದ್ವಂದ್ವದ ಬದುಕು ಸಾಕಾಗಿದೆ. ನಾನು ಹೆಣ್ಣಾಗೆ ಸಾಯ್ತೀನಿ..” ಎನ್ನುತ್ತಾಳೆ. ಮುಂದಿನ ಬಾರಿ ನೀವು ಎಲ್ಲಾದರೂ ಯಾರಾದರೂ ಮಂಗಳಮುಖಿಯನ್ನು ನೋಡಿ ನಿಮ್ಮಲ್ಲಿರುವುದೇನೋ ಅವಳಲ್ಲಿಲ್ಲವೆಂದು ಭೀಗುತ್ತಾ ಹಲ್ಲು ಕಿರಿಯುವ ಮೊದಲು ಈ ಮಾತುಗಳು ನಿಮಗೆ ನೆನಪಾಗಲಿ….,ಅವರು ಮಾನಸಿಕವಾಗಿಯೂ ದೈಹಿಕವಾಗಿಯೂ ನಿಮಗಿಂತ ಶಕ್ತರು..ಈ ಜಗತ್ತಿನ ಸಾವಿರಾರು ದ್ವಂದ್ವದ ಜೀವನಗಳಲ್ಲಿ ತಮ್ಮ ಮನಸ್ಸು-ದೇಹಗಳಿಗೆ ಒಪ್ಪುವಂತೆ ನಿಜವಾಗಿ ಬದುಕುತ್ತಿರುವುದು ಮಂಗಳಮುಖಿಯರೇ…!

ನಿಮಗೆ ತುಂಬಾ ಇಷ್ಟವಾದ ಉಡುಪು ನಿಮಗೆ ಒಪ್ಪದಿದ್ದರೂ ಸ್ನೇಹಿತರು ಆಡಿಕೊಂಡರೂ ನೀವು ಅದನ್ನೇ ಧರಿಸಲು ಇಷ್ಟ ಪಡುತ್ತೀರಿ..
ಉಡುಪಾದರೆ ಒಂದು ದಿನದ ಕಥೆ…ಆದರೆ ಬದುಕು?

ಎಲ್ಲರ ವಿರೋಧದ ನಡುವೆಯೂ ಅವರು ಅದೇ ಬದುಕನ್ನು ಆರಿಸಿಕೊಂಡಿರುವಾಗ….ಬದುಕಲು ಬಿಡಿ! ಒಮ್ಮೆ ‘ನಾನು ಅವನಲ್ಲ..ಅವಳು’ ಚಿತ್ರ ನೋಡಿ!
ಇದು Art movie ನ Commercial movieನ ಅಂತ ಯೋಚನೆ ಮಾಡದೆ ದಯವಿಟ್ಟು ಸಿನಿಮಾ ನೋಡಿ..Its a NEAT movie! ಕನ್ನಡಿಗನೊಬ್ಬನು ರಾಷ್ಟ್ರಪ್ರಶಸ್ತಿ ಗೆದ್ದಿರುವ ಹೆಮ್ಮೆ ನಿಮ್ಮನ್ನು ಈ ಚಿತ್ರಕ್ಕೆ ಕರೆತರಲಿ 🙂

ವಿ.ಸೂ: ಈ ಚಿತ್ರವನ್ನು ವೀಕ್ಷಿಸುವ ಮೊದಲು,
ಮುಖ್ಯವಾಗಿ ಚಲನಚಿತ್ರ ವೀಕ್ಷಿಸುವಾಗ ಮತ್ತು
ಚಿತ್ರ ವೀಕ್ಷಿಸಿದ ನಂತರ…ದಯವಿಟ್ಟು ಗಮನಿಸಿ
Discrimination on the grounds of
sexual orientation or gender identity,
therefore impairs equality before law
and violates Article 14 of the
Constitution of India.

ಲಿಂಗದೇವರು ಶಿವನಂಜಪ್ಪ ಸರ್ ..ನಿಮ್ಮ ತಂಡದ ಅಷ್ಟೂ ಪರಿಶ್ರಮಕ್ಕೊಂದು ಗೌರವಪೂರ್ವಕ ನಮಸ್ಕಾರ!

ಒಮ್ಮೆ ಚಿತ್ರ ನೋಡಿದ ನಮಗೇ ವಿದ್ಯಾ, ರಾಧಕ್ಕ, ಸೆಲ್ವಿ, ನಾನಿ ಈ ಪಾತ್ರಗಳೆಲ್ಲಾ ಇಷ್ಟು ಕಾಡುತ್ತಿರಬೇಕಾದರೆ ಆರು ವರ್ಷಗಳಿಂದ ಆ ಜಗತ್ತಿನ ಬೆನ್ನುಹತ್ತಿ ಚಿತ್ರಕಥೆಯನ್ನು ಇಷ್ಟು ಅಚ್ಚುಕಟ್ಟಾಗಿ ಎಲ್ಲೂ ಮುಜುಗರವಾಗದಂತೆ ಕಟ್ಟಿಕೊಟ್ಟಿದ್ದಕ್ಕೆ ನಿಮಗೆ ನಮ್ಮೆಲ್ಲರ ಒಲವಿನ ಅಭಿನಂದನೆಗಳು!
ಇಂಥ ಇನ್ನಷ್ಟು ಚಿತ್ರಗಳು ಮಾಡುವ ಆಸೆ ಬಾನಾಡಿ ನಿಮ್ಮ ಮನಸಿನಾಗೆ ಗೂಡು ಕಟ್ಟಲಿ.

ಒಂದೊಳ್ಳೆ ಸದಭಿರುಚಿಯ ಚಿತ್ರ ನಿರ್ಮಿಸಿ ರಾಷ್ಟ್ರಮಟ್ಟದಲ್ಲಿ ಮನ್ನಣೆ ಗಳಿಸುವಂತೆ ಮಾಡಿದ ರವಿ ಗರಣಿಯವರಿಗೆ ಅಭಿನಂದನೆಗಳು. ಇನ್ನು ಚಿತ್ರದ ಆರಂಭದಿಂದಲೂ ನಿಮಗೆ ಆ ಅಂತರ್ಲಿಂಗಿಗಳ ಹೆಣ್ಣಾಗುವ ಸಂಭ್ರಮವನ್ನು ಪರಿಚಯಿಸುವ ಸದ್ದು ಒಂದಿದೆ. ಆ ಕೊಳಲಿನ ನಾದದ ಜೊತೆ ಡೋಲಕ್ ತಾಳ..ಅದು ಕಥೆಯ ಜೊತೆಗೆ ಎಷ್ಟು ಚೆನ್ನಾಗಿ  ಮೇಳೈಸುತ್ತೆಂದರೆ ಆ ಸದ್ದು ಬಂತೆಂದರೆ ನಿಮಗೂ ವಿದ್ಯಾ ಗೆದ್ದಳೆಂಬ ಸಂಭ್ರಮವಾಗುವಷ್ಟು..ಅನೂಪ್ ಸೀಳಿನ್ ಸಂಗೀತ ಶ್ಲಾಘನೀಯ.

ಸಂಚಾರಿ ವಿಜಯ್….Niether a woman nor a transgender would have portrayed Vidyas role as sensible as you! Take a bow!

 

One Response

  1. Paramesh
    September 22, 2015

Add Comment

Leave a Reply