Quantcast

ಮುನ್ಸೀಫ ಪ್ರದರ್ಶನ ಚಲನಚಿತ್ರ ಅಕಾಡೆಮಿ ವತಿಯಿಂದ.. ಮಿಸ್ ಮಾಡ್ಬೇಡಿ.

umashankar swamy director

ಬಾಗಲೋಡಿ ದೇವರಾಯರು ಕಾಡುವ ಕಥೆಗಾರ. ಲಂಕೇಶರು ಅಪಾರವಾಗಿ ಮೆಚ್ಚಿಕೊಂಡಿದ್ದ ದೇವರಾಯರ ಮಾರ್ಮಿಕ ಕಥೆ ಹುಚ್ಚ ಮುನ್ಸೀಫ.

ಇದನ್ನು ಕನ್ನಡದ ಸಂವೇದನಾಶೀಲ ನಿರ್ದೇಶಕ ಉಮಾಶಂಕರ ಸ್ವಾಮಿ ತೆರೆಗೆ ತಂದಿದ್ದಾರೆ. ಇದು ಸಾಕಷ್ಟು ಪ್ರಶಸ್ತಿ, ಪ್ರಶಂಸೆಗೂ ಕಾರಣವಾಗಿದೆ. ಉಮಾಶಂಕರ್ ರಂಗಭೂಮಿಯ ಹಿನ್ನೆಲೆಯಿಂದ ಹಿರಿತೆರೆಗೆ ಜಿಗಿದವರು. ಹಾಗಾಗಿ ಇವರಲ್ಲಿ ಏನೋ ಹೇಳಿಕೊಳ್ಳಬೇಕೆಂಬ ತುಡಿತ, ದೃಶ್ಯವನ್ನು ಪರಿಣಾಮಕಾರಿಯಾಗಿ ಕಟ್ಟುವ ತಹತಹ, ಶಿಸ್ತು ಇದೆ.

ಎಂಜಿನಿಯರಿಂಗ್ ಓದಿ ಸಿನೆಮಾಗೆ ಕಾಲಿಟ್ಟ ಇವರು ನಿರ್ದೇಶಿಸಿದ ಬನದ ನೆರಳು ಸಹಾ ಪ್ರಶಸ್ತಿಗೆ ಪಾತ್ರವಾಗಿತ್ತು.  ಮುನ್ಸೀಫದ ಪ್ರದರ್ಶನ ಚಲನಚಿತ್ರ ಅಕಾಡೆಮಿಯ ವತಿಯಿಂದ. ಮಿಸ್ ಮಾಡ್ಬೇಡಿ.

ಇಲ್ಲಿ ಆಹ್ವಾನ ಮತ್ತು ಒಂದು ಪುಟ್ಟ ವಿಡಿಯೋ ಝಲಕ್ ಇದೆ. ನೋಡಿ..

ಅಂದ ಹಾಗೆ ಇದು ಬಾಗಲೋಡಿ ದೇವರಾಯರ ಕಥೆಗಳನ್ನು ಓದಲು ಪ್ರೇರೇಪಿಸಿದರೆ ಪ್ರಿಸಂ ಅವರ ಸಮಗ್ರ ಕಥಾ ಸಂಕಲನವನ್ನು ಹೊರತಂದಿದೆ ಇಲ್ಲಿ ಕೊಳ್ಳಿ 21st Nov BCBM

21st Nov BCBM Back

Add Comment

Leave a Reply

%d bloggers like this: