Quantcast

Sunday Special: ಕಿಚ್ಚನ ಖಡಕ್ ಧ್ವನಿಯೂ.. ರಿಕ್ಕಿಯ ಖದರ್ರೂ…

cinibuzz2

ಕಿಚ್ಚ ಸುದೀಪ್ ಖಡಕ್ ಧ್ವನಿಗೆ ಫಿದಾ ಆಗದವರು ಬಲು ವಿರಳ. ಅದು ಅಭಿಮಾನದ ಪರಿಧಿ ಮೀರಿ ಪ್ರೇಕ್ಷಕ ವಲಯವನ್ನ ಆವರಿಸಿಕೊಂಡಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಕಿಚ್ಚನ ಧ್ವನಿಯ ಖದರ್ ಏನೆಂಬುದು ರಿಕ್ಕಿ ಚಿತ್ರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ!

ರಿಷಬ್ ಶೆಟ್ಟಿ ಮೊದಲ ಸಲ ನಿರ್ದೇಶನ ಮಾಡಿರುವ, ರಕ್ಷಿತ್ ಶೆಟ್ಟಿ ಅಭಿನಯದ ರಿಕ್ಕಿ ಚಿತ್ರ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಫೇಸ್ ಬುಕ್ ಮತ್ತು ಟ್ವಿಟರ್ ಗಳಂಥಾ ಸಾಮಾಜಿಕ ಜಾಲ ತಾಣಗಳಲ್ಲಿಯೂ ಈ ಚಿತ್ರದ ಬಗ್ಗೆ ಮೆಚ್ಚುಗೆ ಹರಿದಾಡುತ್ತಿದೆ. ಮೊದಲ ಶೋ ನೋಡಿಕೊಂಡು ಬಂದವರ ಮುಖದಲ್ಲಿಯೂ ಅದೇ ಸಂತಸದ ಕಳೆ.

ಹೀಗೆ ಚಿತ್ರದ ಬಗ್ಗೆ ಕೇಳಿ ಬರುತ್ತಿರುವ ಒಳ್ಳೆಯ ಮಾತುಗಳಲ್ಲಿ ರಿಕ್ಕಿ ಚಿತ್ರಕ್ಕೆ ಕಿಚ್ಚಾ ಸುದೀಪ್ ಕೊಟ್ಟಿರುವ ಹಿನ್ನೆಲೆ ಧ್ವನಿಯೇ ಮೇಜರ್ ಆಗಿ ಹರಿದಾಡುತ್ತಿದೆ. ಈ ಚಿತ್ರ ತೆರೆದುಕೊಳ್ಳುವುದೇ ಸುದೀಪ್ ರ ಖಡಕ್ ಧ್ವನಿಯ ಮೂಲಕ. `ನೆತ್ತರ ಹನಿ ಮಣ್ಣಿಗೆ ಬಿದ್ದು ಆಕಾಶ ಕೆಂಪಾಗಿ ನೋವಿಗೆ ಹೊಸ ಅರ್ಥ ಬಂದು, ಮನದಲ್ಲಿ ಈಗ ಕ್ರಾಂತಿಯ ಬೆಂಕಿ, ಸೂರಿನ ಸುಖವಿಲ್ಲ, ನಿದ್ದೆಯ ಕನಸಿಲ್ಲ, ಬಾ ಸಾಥೀ ಈಗ ಗುರಿಯೊಂದೇ, ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತ ಎಂಬ ಸುದೀಪ್ ಅಶರೀರವಾಣಿ ಮೋಡಿ ಮಾಡಿದೆ.

ಅದು ನಕ್ಸಲ್ ಹೋರಾಟದ ನೈಜ ಆಕ್ರೋಶವನ್ನು ಹೊಮ್ಮಿಸುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಮಾತಾಡ್ ಮಾತಾಡು ಮಲ್ಲಿಗೆ ಚಿತ್ರದಲ್ಲಿ ಸುದೀಪ್ ನಿರ್ವಹಿಸಿದ್ದ ನಕ್ಸಲ್ ಕ್ಯಾರೆಕ್ಟರ್ ಕೂಡಾ ಹೀಗೆಯೇ ಮೋಡಿ ಮಾಡಿತ್ತು. ಇದೀಗ ಸುದೀಪ್ ಧ್ವನಿಯ ಜೊತೆ ರಿಕ್ಕಿಯ ಖದರ್ ಕೂಡಾ ಜೋರಾಗಿದೆ. ರಕ್ಷಿತ್ ಹಾಗೂ ಸುದೀಪ್ ನಡುವಿನ ಅಶರೀರವಾಣಿಯ ಜುಗಲ್ಬಂದಿಯೇ ಈಪರಿ ಹವಾ ಸೃಷ್ಟಿ ಮಾಡಿರೋದರಿಂದ ಇವರಿಬ್ಬರ ಕಾಂಬಿನೇಷನ್ನ ಚಿತ್ರ ಯಾವಾಗ ಸೆಟ್ಟೇರುತ್ತದೆ ಎಂಬ ಕುತೂಹಲವೂ ಗರಿಗೆದರಿದೆ!

cinibuzz3

ಯಾರೂ ಹೋಗದೂರಿಗೆ ಹೊರಟ್ರು ನೋಡಿ ಸುದೀಪ್!

ಕಿಚ್ಚಾ ಸುದೀಪ್ ಅಂದ್ರೆ ಕ್ರಿಯೇಟಿವಿಟಿ. ಸದಾ ಹೊಸತಕ್ಕೆ ಹಂಬಲಿಸೋ ವ್ಯಕ್ತಿತ್ವದ ಕಿಚ್ಚ ಅದು ರೀಮೇಕಿದ್ದರೂ, ಸ್ವಮೇಕೇ ಆದರೂ ಡಿಫರೆಂಟಾಗೇನಾದರೊಂದನ್ನು ಮಾಡೇ ಮಾಡ್ತಾರೆ. ಈಗಹೇಳೋಕೆ ಹೊರಟಿದ್ದೂ ಕೂಡಾ ಅಂಥಾದ್ದೇ ಒಂದು ಹೊಸತನದ ಸಾಹಸದ ಬಗ್ಗೆ…

ಅಂದಹಾಗೆ ಸುದೀಪ್ ಅಭಿನಯದ ಕೋಟಿಗೊಬ್ಬ ಭಾಗ ಎರಡು ಸಿನಿಮಾದ ಬಗ್ಗೆ ಎಲ್ಲರಿಗು ಗೊತ್ತೇ ಇದೆ. ಈ ಸಿನಿಮಾಕ್ಕಾಗಿ ಹೊಸಾ ಲೊಕೇಶನ್ ಹುಡುಕಾಟದಲ್ಲಿದ್ದ ಚಿತ್ರ ತಂಡದ ಕಣ್ಣು ದೂರದ ಜಪಾನ್ ದೇಶದತ್ತ ಹೊರಳಿಕೊಂಡಿದೆ. ಈ ವಿಚಾರ ತಿಳಿಯುತ್ತಲೇ ಸುದೀಪ್ ಕೂಡಾ ಖುಷಿಯಾಗಿಯೇ ಒಪ್ಪಿಕೊಂಡಿದ್ದಾರೆ. ಅಲ್ಲಿಗೆ ಹೊಸಾದೊಂದು ದಾಖಲೆ ಸೃಷ್ಟಿಯಾಗೋದು ಪಕ್ಕಾ ಆಗಿದೆ!

ಯಾಕಂದ್ರೆ, ಇದುವರೆಗೂ ಯಾವ ಕನ್ನಡ ಚಿತ್ರಗಳ ಚಿತ್ರೀಕರಣವೂ ಜಪಾನ್ ನಲ್ಲಿ ನಡೆದಿಲ್ಲ. ವಿದೇಶದಲ್ಲಿ ಚಿತ್ರೀಕರಣ ಎಂದಾಕ್ಷಣ ಹಾಂಕಾಂಗ್, ಸಿಂಗಾಪೂರ್ ಅಂತ ಸುತ್ತೋದೇ ಹೆಚ್ಚು. ಅದನ್ನು ಮೀರಿ ಕೆಲವೇ ಕೆಲ ಪ್ರಯತ್ನಗಳಾಗಿವೆ ಅಷ್ಟೇ. ಆ ನಿಟ್ಟಿನಲ್ಲಿ ಸುದೀಪ್ ಚಿತ್ರದ್ದೊಂದು ದಾಖಲೆಯಾಗಲಿದೆ.

ಜಪಾನ್ ದೇಶದಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆಸಲು ನಿರ್ಮಾಪಕ ಸೂರಪ್ಪ ಬಾಬು ನಿರ್ಧರಿಸಿದ್ದಾರೆ. ಕಿಚ್ಚಾ ಸುದೀಪ್ರನ್ನು ಪ್ರತೀ ಸಿನಿಮಾದಲ್ಲಿಯೂ ಡಿಫರೆಂಟಾಗಿ ನೋಡಲು ಇಷ್ಟಪಡುತ್ತಾರೆ, ಸುದೀಪ್ ಕೂಡಾ ಅಂಥಾ ಹೊಸತನವನ್ನ ಇಷ್ಟಪಡುತ್ತಾರೆ. ಹಾಗಾಗಿಯೇ ಯಾರೂ ಚಿತ್ರೀಕರಣ ಮಾಡದ ದೇಶದತ್ತ ಹೊರಟಿದ್ದೇವೆ ಎಂಬುದು ಸೂರಪ್ಪ ಬಾಬು ವಿವರಣೆ

One Response

  1. Dr. Prabhakar M. Nimbargi
    January 31, 2016

Add Comment

Leave a Reply