Quantcast

ಇಲ್ಲಿದೆ ನೋಡಿ ಕಿರಗೂರಿಗೆ ಸೆನ್ಸಾರ್ ಬೋರ್ಡ್ ಕೊಟ್ಟ ಕಿರಿಕ್

censor suggested cuts kiragoorina gayyaligalu

ಕಿರಗೂರಿನ ಗಯ್ಯಾಳಿ ಹೆಂಗಸ್ರು ತಮ್ತಮ್ಮ “ ಹಿಟ್ಟಿನ ಕೋಲು” ತಗಂಡು ಹಂಗೇ ಒಂದ್ಕಿತಾ ಸೆನ್ಸಾರ್ ಆಫೀಸ್ ತಾವ್ಕೆ ಹೋಗಿ, ಅಲ್ಲಿರೋ “ಕನ್ನಡ ಪಂಡಿತ”ರನೆಲ್ಲ ಮಾತಾಡಿಸ್ಕಂಡ್ ಬಂದಿದ್ರೆ… ಸಿನಿಮಾ ಬೋ ಸಂದಾಗಿರೋದು… ಸಿನ್ಮಾದಲ್ಲಿರೋ ಡೈಲಾಗು ಖಾಲೀ ಇರೂ ಜಾಗಗಳೆಲ್ಲಾ ತುಂಬಿರೋವು…

-ರಾಜಾರಾಂ ತಲ್ಲೂರ್ 

kiragooru protest censor 2ಮಧ್ಯ ಮಧ್ಯ ಬೀಪ್ ಸೌಂಡು ಗಳು ಬಂದು ಹೋಗುತ್ತವೆ .. ‘ಕತ್ತೆ ಲೌಡಿ’ , ‘ತಿಕ ಮುಚ್ಲಾ’ ಅಂತ ಪದಗಳು ಅಲ್ಲಿ ನ್ಯಾಚುರಲ್ ಆಗಿ ಸೇರುತ್ತೆ ಅಂದ್ರೆ ಬಿಡಬಹುದಿತ್ತು .. ಹಾಗೆಯ , ಕೆಲವು ಪದಗಳನ್ನು ಮಾತ್ರ ಹಾಗೆಯೇ ಬಿಟ್ಟಿದ್ದಾರೆ , ‘ಮಿಂಡ’ನ ಜೊತೆ ಓಡಿ ಹೋದವಳು ಅಂತೇನೋ ಒಂದು ಕಡೆ ಬರುತ್ತೆ ..

ತಿಥಿ ಸಿನಿಮಾದಲ್ಲಿ ಅನ್ -ಸೆನ್ಸರ್ಡ್ ವರ್ಷನ್ ಬೆಂಗಳೂರು ಚಲನ ಚಿತ್ರೋತ್ಸವ ದಲ್ಲಿ ನೋಡಿದೆ , ಕೆಲವು ಕಡೆ ಸ್ವಲ್ಪ ಮುಜುಗರ /ಕಷ್ಟ ಆಯ್ತು , ಜನರಿಗೆ ಗೊಳ್ ಎಂದು ನಗುವ ಅವಕಾಶ ಸಿಕ್ಕಿದ್ದು ಒಂದು ಪ್ಲಸ್ ಪಾಯಿಂಟ್…

Side note – ಇಂತಹದಕ್ಕೆ ಸೆನ್ಸಾರ್ ಮಾಡಿ ಆ ಜಗ್ಗೇಶ್, ಶರಣ್ , ಸಾಧು, ಡಬಲ್ ಮೀನಿಂಗ್ ಇರೋ ಇನ್ನು ಕೆಟ್ಟ ಕೆಟ್ಟ ಸಾಲುಗಳಿಗೆ ಅಸ್ತು ಎನ್ನುವ ಸೆನ್ಸಾರ್ ಮಂಡಳಿಗೆ ಸ್ವಲ್ಪ ಅದನ್ನ ಅರ್ಥ ಮಾಡಿಕೊಂಡು ಇಷ್ಟ ಪಡುವ ನಮ್ಮ ಅಭಿಮಾನಿಗಳ ಸೇರ್ಪಡೆಯಾಗಬೇಕು…

-ವೀಣಾ ಶಿವಣ್ಣ 

‘ತಿಕ’ಕ್ಕೂ ‘ಕುಂಡೆ’ಗೂ ಇರುವ ವ್ಯತ್ಯಾಸವೇನು? ಇದು ವಾಹಿನಿಯೊಂದರ ಚರ್ಚೆಯಲ್ಲಿ ‘ಕಿರಗೂರಿನ ಗಯ್ಯಾಳಿ’ ಸಿನಿಮಾ ನಿರ್ದೇಶಕಿ ಸುಮನಾ ಕಿತ್ತೂರು ಕೇಳಿದ ಪ್ರಶ್ನೆ (ಆ ಚರ್ಚೆಯಲ್ಲಿ ಬಿ ಸುರೇಶ್, ಸಿ ಎಸ್ ದ್ವಾರಕಾನಾಥ್, ಜೋಗಿ ಕೂಡಾ ಭಾಗವಹಿಸಿದ್ದರು). ಸೆನ್ಸಾರ್ ಮಂಡಳಿಯವರ ಪ್ರಕಾರ ಸಿನಿಮಾದಲ್ಲಿ ‘ಕುಂಡೆ’ ಎನ್ನುವ ಪದವನ್ನು ಬಳಸಬಹುದಂತೆ, ಆದರೆ ‘ತಿಕ’ ಎಂಬ ಪದವನ್ನು ಬಳಸುವಂತಿಲ್ಲವಂತೆ!! ತಾನು ಕಷ್ಟಪಟ್ಟು ಮಾಡಿದ ಸಿನಿಮಾದ ಅನೇಕ ಮುಖ್ಯ ಮಾತುಗಳಿಗೆ, ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದ್ದನ್ನು ಪ್ರಸ್ತಾವಿಸುವಾಗ ಸುಮನಾ ಅಕ್ಷರಶಃ ಗದ್ಗತಿತರಾದರು (ಬೀಪ್ ಸೌಂಡ್ ಗಳದ್ದೇ ಕಿರಿಕಿರಿ ಎಂದು ಸಿನಿಮಾ ನೋಡಿದವರೂ ಹೇಳುತ್ತಾರೆ).

kiragooru protest censorತೇಜಸ್ವಿ ರಚಿಸಿರುವ ‘ಕಿರಗೂರಿನ ಗಯ್ಯಾಳಿ’ ಗ್ರಾಮ್ಯ ಸೊಗಡಿನ ಒಂದು ಅತ್ಯುತ್ಕೃಷ್ಟ ಕೃತಿ. ಸಬಲೀಕೃತ ಹಳ್ಳಿಹೆಂಗಸರ ವಿಶಿಷ್ಟ ಕಥಾನಕ ಹೊಂದಿರುವ ಆ ಕೃತಿಯಲ್ಲಿ ಅನೇಕ ಆಡುಮಾತಿನ ಬೈಗುಳಗಳಿದ್ದು, ಅವು ತೀರಾ ತೀರಾ ಸಹಜವಾಗಿ ಮಾತ್ರವಲ್ಲ ಕತೆಗೆ ಅನಿವಾರ್ಯವೇನೋ ಎಂಬಂತೆ ಮೂಡಿಬಂದಿವೆ. (ರಾಜೇಶ್ವರಿಯವರು ಹೇಳುವ ಪ್ರಕಾರ ತೇಜಸ್ವಿಯವರು ಯಾವತ್ತೂ ಇಂಥ ಪದಗಳನ್ನು ಮನರಂಜನೆಗಾಗಿ ಬಳಸುವುದಿಲ್ಲವಂತೆ). ಕತೆಯಲ್ಲಿ ಅವು ಹಳ್ಳಿ ಹೆಂಗಸರ ದಿಟ್ಟತನದ ಪ್ರತೀಕವಾಗಿ ಕಾಣಿಸಿಕೊಳ್ಳುತ್ತವೆ. ಆ ಬಯ್ಗುಳಗಳನ್ನು ತೆಗೆದು ಹಾಕಿದರೆ ಆ ಕತೆಯ ಅನೇಕ ಸಂಭಾಷಣೆಗಳಿಗೆ ಜೀವವೇ ಇರುವುದಿಲ್ಲ.

ಆದರೆ ಸುಮನಾ ಕಿತ್ತೂರು ಹೇಳುವ ಪ್ರಕಾರ ಸೆನ್ಸಾರ್ ಮಂಡಳಿ ಆ ಬಹುತೇಕ ಬಯ್ಗುಳಗಳಿಗೆ (ಮತ್ತು ಮೂರುಕಾಸಿನವಳು ಎಂಬಂತಹ ಮಾಮೂಲಿ ಪದಗಳಿಗೂ) ಕತ್ತರಿ ಹಾಕಿದೆಯಂತೆ. ಪುಟಾಣಿ ಮಕ್ಕಳು ಬೆತ್ತಲಾಗಿ ಕಾಣಿಸಿಕೊಂಡಿರುವ ದೃಶ್ಯಗಳನ್ನೂ ಅವು nudity ಎಂದು ಕತ್ತರಿ ಹಾಕಿದೆಯಂತೆ! “ತೇಜಸ್ವಿ ಕತೆಯಲ್ಲಿ ಈ ಮಾತುಗಳು ಮತ್ತು ದೃಶ್ಯಗಳ ಅನಿವಾರ್ಯತೆಯನ್ನು ಸೆನ್ಸಾರ್ ಮಂಡಳಿಯುವರಿಗೆ ಮನವರಿಕೆ ಮಾಡಿಕೊಡುವುದಾದರೂ ಹೇಗೆ, ನಾವು ಮನವರಿಕೆ ಮಾಡಲು ಹೋದರೆ ಅವರು ತೀರಾ ಒರಟಾಗಿ ಮಾತನಾಡುತ್ತಾರೆ, ಒಂದು ಸಿನಿಮಾ ಮಾಡಲು ನಾವೆಷ್ಟು ಕಷ್ಟಪಡುತ್ತೇವೆ ಎನ್ನುವುದು ಅವರಿಗೆ ಗೊತ್ತೇ” ಎಂದು ಪ್ರಶ್ನಿಸುತ್ತಾರೆ ಸುಮನಾ.

ಎಂತಹ ಸಂಕುಚಿತ ಮನಸ್ಥಿತಿಯನ್ನು ಹೊಂದಿರುವವರು, ನಗ್ನತೆ ಮತ್ತು ಅಶ್ಲೀಲತೆಯ ನಡುವಣ ವ್ಯತ್ಯಾಸದ ಅರಿವಿಲ್ಲದವರು, ಗ್ರಾಮ್ಯ ಬದುಕಿನ ಪರಿಚಯವಿಲ್ಲದವರೆಲ್ಲ ಸೆನ್ಸಾರ್ ಮಂಡಳಿಯಲ್ಲಿ ಕುಳಿತುಕೊಂಡಿದ್ದಾರೆ! ಇದು ತಮ್ಮದು ಶ್ರೇಷ್ಠ ಸಂಸ್ಕೃತಿ ಎಂದುಕೊಂಡವರಿಂದ ಗ್ರಾಮ್ಯ ಸಂಸ್ಕೃತಿಯ ಮೇಲೆ ನಡೆಯುವ ಒಂದು ತೆರನ ಧಾಳಿಯಲ್ಲವೇ? ಇವತ್ತು ತೇಜಸ್ವಿಯವರ ಕತೆಗಳನ್ನು ಸಾರ್ವಜನಿಕರು ಓದುತ್ತಾರೆ, ಪಠ್ಯವಾಗಿ ವಿದ್ಯಾರ್ಥಿಗಳು ಓದುತ್ತಾರೆ. ಅವರಿಗೆ ಅಸಹ್ಯ ಎನಿಸದ್ದು ಸೆನ್ಸಾರ್ ಮಂಡಳಿಗೆ ಅಸಹ್ಯವಾಗುವುದು ಹೇಗೆ?

ಅದೆಲ್ಲ ಹೋಗಲಿ ಚಿತ್ರದ ನಿರ್ದೇಶಕಿ ಕೂಡಾ ಒಬ್ಬಳು ಸಭ್ಯ ಹೆಣ್ಣುಮಗಳು. ಜನ ನೋಡಬಾರದ್ದು ಕೇಳಬಾರದ್ದು ಎಂಬಂತಹ ಅಂಶಗಳನ್ನು ಅವರು ತಮ್ಮ ಸಿನಿಮಾದಲ್ಲಿ ಇರಗೊಡುತ್ತಾರೆಯೇ? ನಾವು ಏನನ್ನು ನೋಡಬಾರದು ಎನ್ನುವುದನ್ನು ನಿರ್ಧರಿಸಲು ಇವರು ಯಾರು? ನಮ್ಮ ಬದುಕಿನ ಯಾವು ಯಾವುದನ್ನೆಲ್ಲ ಇವರು ನಿಯಂತ್ರಿಸುತ್ತಾರೆ? ಎಲ್ಲಕ್ಕಿಂತಲೂ ಮುಖ್ಯ ಪ್ರಶ್ನೆ- ಏನನ್ನು ನೋಡಬೇಕು ಏನನ್ನು ನೋಡಬಾರದು ಎಂದು ನಿರ್ಧರಿಸುವ ತಿಳಿವಳಿಕೆ ಜನರಿಗಿರುವಾಗ ಈ ಕಾಲದಲ್ಲೂ ಸೆನ್ಸಾರ್ ಮಂಡಳಿ ಎಂಬ ಒಂದು ಸಂಸ್ಥೆ ಅಗತ್ಯವಿದೆಯೇ?

ವಿಜಯ್ ಅಮೃತರಾಜ್ ಅವರ ಫೇಸ್ ಬುಕ್ ಗೋಡೆಯಿಂದ / ಹುಸೇನ್ ಪಾಷಾ ಅವರಿಂದ ಬಂಡ ವಾಟ್ಸ್ ಅಪ್ ಇದು ಎನ್ನುತ್ತಾರೆ 

 

Add Comment

Leave a Reply