Quantcast

ನಕ್ಸಲೈಟ್ ನಾಡಿಗೆ ಶರ್ಮಿತಾ ಶೆಟ್ಟಿ

 cinibuzz
ಈಟೀವಿ ವಾಹಿನಿಯ ನಿರೂಪಕಿ ಶರ್ಮಿತಾ ಶೆಟ್ಟಿ ಗೊತ್ತಲ್ಲ. ಕಳೆದೈದು ವರ್ಷಗಳಿಂದ ವಾರ್ತಾ ವಾಚಕಿಯಾಗಿ, ಕಾರ್ಯಕ್ರಮ ನಿರೂಪಕಿಯಾಗಿ ಹೆಸರು ಮಾಡಿರುವವರು. ಸದ್ಯ ಶರ್ಮಿತಾ ಶೆಟ್ಟಿ ಬಣ್ಣ ಹಚ್ಚಿ ಹಿರಿತೆರೆಗೆ ಕಾಲಿಟ್ಟಿದ್ದಾರೆ.
ಶರ್ಮಿತಾ ನಟಿಸುತ್ತಿರುವ ಸಿನಿಮಾ ಹೆಸರು ‘ಹೊಂಬಣ್ಣ’. ಈ ಸಿನಿಮಾ ಅಪ್ಪಟ ಮಲೆನಾಡ ಕಥೆಯನ್ನು ಆಧರಿಸಿದ್ದು ಬಹುತೇಕ ಚಿತ್ರೀಕರಣ ಮಲೆನಾಡಲ್ಲೇ ನಡೆದಿದೆ. ಅರಣ್ಯ ಒತ್ತುವರಿಯ ಎಳೆಯ ಹಿಡಿದು ಚಿತ್ರ ಮಾಡಲಾಗಿದ್ದು ಕಾನೂನು ಮತ್ತು ಸಾಮಾನ್ಯ ರೈತ ಜೀವನದ ತೊಡಲಾಟಗಳು ಚಿತ್ರದ ಜೀವಾಳ…
0e7691c7-e873-443b-a6aa-ff95827c8d45ಈ ಸಿನಿಮಾದಲ್ಲಿ ಶರ್ಮಿತಾ ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿರುತ್ತಾರೆ. ಅದೊಮ್ಮೆ ಒಂದು ಪುಸ್ತಕ ಓದುತ್ತಿರುತ್ತಾರೆ.. ಅಲ್ಲಿಂದ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.. ನೆಲದ ಸಂಪೂರ್ಣ ಚಿತ್ರಣ ತೆರೆದುಕೊಳ್ಳುತ್ತದೆ. ಇದನ್ನು ಕಥೆಯ ರೂಪದಲ್ಲಿ ಶರ್ಮಿತಾ ನಿರೂಪಿಸುತ್ತಾ ಸಾಗುತ್ತಾರೆ. ಹೀಗಾಗಿ ಇಡೀ ಸಿನಿಮಾ ಶರ್ಮಿತಾರ ಪಾತ್ರವನ್ನೇ ಕೇಂದ್ರೀಕರಿಸುತ್ತದೆ.
ಒಟ್ಟಾರೆ ಇದೊಂದು ಸಾಮಾಜಿಕ ಪರಿಣಾಮ ಬೀರುವ ಚಿತ್ರವಾಗಿ ಮೂಡಿಬರುತ್ತಿರೋದು ನಿಜ. ಆದರೆ, ಈ ಚಿತ್ರದ ಅಂತಿಮ ನಿಲುವು ಆಳುವ ಸರ್ಕಾರದ ಪರವಾಗಿರುತ್ತದಾ? ಅಥವಾ ಜನಸಾಮಾನ್ಯರ ದನಿಯಾಗಿ ಮೂಡಿ ಬರುತ್ತದಾ ಅನ್ನೋದು ಸದ್ಯದ ಕುತೂಹಲ.

ಈ ಚಿತ್ರದಲ್ಲಿ ಬಹುಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶರ್ಮಿತಾ ಟೀವಿ ನಿರೂಪಣೆಯ ಜೊತೆಯಲ್ಲೇ ಈ ಹಿಂದೆ ರಾಮೋಜಿ ಫಿಲಂಸ್ ನಿರ್ಮಾಣದ ಇಂಗ್ಲಿಷ್ ಕಿರುಚಿತ್ರವೊಂದರಲ್ಲಿ ನಟಿಸಿದ್ದರು. sharmita make upಅಲ್ಲದೆ, ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪರಿಭ್ರಮಣ ಧಾರಾವಾಹಿಯಲ್ಲೂ ಪಾತ್ರ ನಿರ್ವಹಿಸಿದ್ದರು. ತೀರ್ಥಹಳ್ಳಿಯ ತೂದೂರಿನ ಶರ್ಮಿತಾ, ಸಿನಿಮಾದಲ್ಲಿ ಬೆಂಗಳೂರಿನಿಂದ ಮಲೆನಾಡಿಗೆ ಹೋಗುವ ಪಾತ್ರ ನಿರ್ವಹಿಸಿರೋದು ಸ್ಪೆಷಲ್ಲು.

ಸಂಚಲನ ಮೂವೀಸ್ ನ ರಾಮಕೃಷ್ಣ ನಿಗಡೆ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಚೇತನ್ ಚಂದ್ರ, ವಿನಯ್ ಗೌಡ, ರಜತ್, ಲೂಸ್ ಮಾದ ಯೋಗಿಯ ತಾಯಿ ಅಂಬುಜಾಕ್ಷಿ, ಮಿಮಿಕ್ರಿ ಗೋಪಿ ಮುಂತಾದವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇನ್ನುಳಿದಂತೆ, ಸುಬ್ಬು ತಳಬಿ, ಧನಂಜಯ, ಮಂಜು ಪಾಟೀಲ್, ಕೃದನ್ ತೀರ್ಥಹಳ್ಳಿ, ವರ್ಷಾ ಆಚಾರ್ಯ, ಪವಿತ್ರ, ಜಗದೀಶ್ ಬೊಳ್ಳಂದೂರು ಮುಂತಾದವರ ತಾರಾಗಣವಿದೆ.

‘ಹೊಂಬಣ್ಣ’ ಚಿತ್ರದ ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯದ ಜವಾಬ್ದಾರಿಯನ್ನು ರಕ್ಷಿತ್ ತೀರ್ಥಹಳ್ಳಿ ವಹಿಸಿಕೊಂಡಿದ್ದಾರೆ. ಇತ್ತೀಚೆಗೆ ಸಾಕಷ್ಟು ‘ಸೌಂಡ್’ ಮಾಡುತ್ತಿರುವ ವಿನು ಮನಸ್ಸು ಸಂಗೀತ ಸಂಯೋಜಿಸಿರುವ ಒಂದು ಹಾಡನ್ನು ಕೇರಳದಲ್ಲಿ ಚಿತ್ರಿಸಿದ್ದು, ಹೇಮಂತ್, ಅನುರಾಧ ಭಟ್, ಜೋಗಿ ಸುನಿತಾ, ವಾಣಿ ಹರಿಕೃಷ್ಣ, ಮಾನಸ ಹೊಳ್ಳ, ಸಂತೋಷ್ ವೆಂಕಿ, ಅನನ್ಯ ಭಗತ್ ಹಾಗು ಚಂದನ್ ಶೆಟ್ಟಿ ಚಿತ್ರದ ಇನ್ನುಳಿದ ೭ ಹಾಡುಗಳಿಗೆ ದನಿಯಾಗಿದ್ದಾರೆ..

sharmita movie

Add Comment

Leave a Reply