Quantcast

“ಊಟಿ” ಎಂಬ ತಲ್ಲಣ..!

c s dvarakanath

ಸಿ ಎಸ್ ದ್ವಾರಕಾನಾಥ್

ooty1ಒಂದೆರಡು ತಿಂಗಳ ಹಿಂದೆ “ಊಟಿ” ಸಿನಿಮಾ ಹಾಡುಗಳ CD ಬಿಡುಗಡೆ ಮಾಡಲು ಹೋಗಿದ್ದೆ. ಸಿನಿಮಾ ಬಗ್ಗೆ ಓನಾಮಗಳನ್ನೂ ಅರಿಯದ ನಾನು ಮನಸ್ಸಿಗೆ ಬಂದದ್ದನ್ನು ಮಾತಾಡಿ ಬಂದಿದ್ದೆ..

ಬಹುಜನ ಚಳುವಳಿಯಲ್ಲಿ ಸಕ್ರಿಯರಾಗಿರುವ ಗೆಳೆಯರಾದ ವಕೀಲ ಮೋಹನ್ ಕುಮಾರ್ ಹಾಗೂ ಸಾಹಿತಿ ಕೃಷ್ಣಮೂರ್ತಿ ಚಮರಂ ತಮ್ಮ ಇತರೆ ಗೆಳೆಯರೊಂದಿಗೆ “ಊಟಿ” ಸಿನಿಮಾ ಮಾಡುವ ಈ ಸಾಹಸಕ್ಕಿಳಿದಿದ್ದರು! ಸಿನಿಮಾ ಮಾಡುವ ‘ಜಾತಿ’ಗೇ ಸೇರದ ಇವರಿಗೆ ಈ ಧೈರ್ಯ ಹೇಗೆ ಬಂತೋ ನನಗಿನ್ನೂ ಅರ್ಥವಾಗಿಲ್ಲ!?

ಯಾವುದೋ ಕಾರಣಕ್ಕೆ ಮಾನಸಿಕವಾಗಿ ಜರ್ಜರಿತನಾಗಿದ್ದ ನನಗೆ ಒಂದು diversion ಗಾಗಿ “ಊಟಿ” ಗೆ ಕರೆದೊಯ್ದರು.. ನಿಜ ಹೇಳಬೇಕೆಂದರೆ ಮನಸಿಲ್ಲದ ಮನಸಿನಿಂದ ಹೋಗಿದ್ದೆ..

‘ಊಟಿ’ ನನ್ನನ್ನು ನಿಧಾನಕ್ಕೆ ಸೆಳೆಯತೊಡಗಿತು ಒಳಗೊಳ್ಳತೊಡಗಿತು.. ಸುಮಾರು ವರ್ಷಗಳ ಹಿಂದೆ ಬಾಲು ಮಹೇಂದ್ರರವರ “ಮೂನ್ರಂ ಪಿರೈ” ಚಿತ್ರದಲ್ಲಿ ಊಟಿಯನ್ನು ಅತಿಮನಮೋಹಕವಾಗಿ ತೋರಿಸಿದ್ದನ್ನು ಬಿಟ್ಟರೆ ಊಟಿಯ ಸೌಂದರ್ಯವನ್ನು ಇಷ್ಟೊಂದು ಸುಂದರವಾಗಿ ತೋರಿಸಿದ ಚಿತ್ರ “ಊಟಿ” ಯೇ ಎನಿಸುತ್ತದೆ..

ಖುಷವಂತ್ ಸಿಂಗ್ ರವರ train to Pakistan ನಂತಹ ಪುಸ್ತಕಗಳನ್ನು ಆದರಿಸಿ ಇಂಡಿಯ-ಪಾಕಿಸ್ತಾನ್ ಸಂಘರ್ಷದ ನಡುವೆ ಬೆಂಕಿಯಲ್ಲಿ ಅರಳಿದ ಪ್ರೇಮ ಕತೆಗಳು, ಮಣಿರತ್ನಂ ಮಾಡಿದ “ಬಾಂಬೆ”. ಬಾಲಚಂದರ್ ರವರ “ಮರೋಚರಿತ್ರ” ರಂತವುಗಳು ಪ್ರಾದೇಶಿಕ ಗಡಿಗಳೊಂದಿಗೆ ಜಾತಿ,ಮತ ಗಳ ಸಂಘರ್ಷಗಳನ್ನಿಟ್ಟುಕೊಂಡು ಮಾಡಿದ ಯಶಸ್ವಿ ಪ್ರಯತ್ನಗಳು. ಇಲ್ಲಿ ಕೋಟ್ಯಾನುಗಟ್ಟಳೆ ಹಣ ಸುರಿಯಲಾಗಿದೆ..ಹೆಸರಾಂತ ನಿರ್ದೇಶಕರಿದ್ದಾರೆ, ದೊಡ್ಡ ಸ್ಟಾರ್ ಕ್ಯಾಸ್ಟ್ ಗಳ ವಿಜೃಂಭಣೆಯ ಮೆರವಣಿಗೆಯೇ ಇದೆ!!

‘ಊಟಿ’ ಮಾಡಿದವರಿಗೆ ಈ ಯಾವ ಹಿನ್ನೆಲೆಯೂ ಇಲ್ಲ..! ಹಣವಿಲ್ಲ, ಹೆಸರಿಲ್ಲ, ಹೆಸರಾಂತ ನಟನಟಿಯರಿಲ್ಲ. ಅವರಿಗಿರುವುದು ಸಿನಿಮಾ ಮಾಡುವ passion ಒಂದೇ.. ಅದಕ್ಕೆ ಬೇಕಾದ ಮೊಂಡುತನ,ಧೈರ್ಯ, ಬದ್ದತೆ ಮತ್ತು talent ಇದೆ.. ಇದನ್ನು ಇಲ್ಲಿನ ಪ್ರತಿದೃಷ್ಯದಲ್ಲೂ ಸಾಭೀತುಪಡಿಸಿದ್ದಾರೆ.. even an ordinary people also can make good cinema ಎಂಬುದನ್ನು ತಣ್ಣಗೆ ನಿರೂಪಿಸಿದ್ದಾರೆ.

ooty2ಇವರು ಈ ಸಿನಿಮಾದಲ್ಲಿ ಬೆಸೆಯಹೊರಟಿರುವುದು ಭಾಷೆ, ಪ್ರೇಮ ಮತ್ತು ವಿಶೇಷವಾಗಿ ಜೀವಜಲ ನೀರನ್ನು. ಬಹುಶಃ ಈ ವಿಷಯಗಳನ್ನಿಟ್ಟುಕೊಂಡು ಸಿನಿಮಾ ಮಾಡುವುದು ಒಂದು ರೀತಿಯ ಛಾಲೆಂಜ್.. ಕೈಯಲ್ಲಿ ಕಾಸಿಲ್ಲದ ಹುಡುಗರು ಇದನ್ನು ತಮ್ಮ ಮಿತಿಗಳಲ್ಲಿ ನಿಭಾಯಿಸಿರಿವುದು ಅದ್ಭುತ!! ನಮ್ಮಂತವರಿಗೆ ತಲುಪಿಸಿರುವುದಂತೂ ಇನ್ನೂ ಅದ್ಭುತ..

ಮೊದಲರ್ದದಲ್ಲಿ ಊಟಿಯ ಸುಂದರ ಪರಿಸರದಲ್ಲಿ ಎರಡು ಪುಟಾಣಿ ಹೃದಯಗಳಲ್ಲಿ ಅರಳುವ ಪ್ರೇಮ.. ಇದು ಒಂದಷ್ಟು ಎಳೆಯುತ್ತದೆ ಆದರೆ ಎಲ್ಲೂ ಬೋರಾಗುವುದಿಲ್ಲ.. ಸಂಭಾಷಣೆ ಮತ್ತು ಹಾಡುಗಳು ಇದನ್ನು ನಿಭಾಯಿಸುತ್ತವೆ. ಇಂಟರ್‌ವೆಲ್ ನಂತರ ಕತೆ ಅನೇಕ ತಿರುವುಗಳನ್ನು ಪಡೆದು ಕುತೂಹಲ ಕೆರಳಿಸುತ್ತದೆ.. ಮಿಕ್ಕ ಪ್ಲಸ್ ಮತ್ತು ಮೈನಸ್ ಪಾಯಿಂಟುಗಳನ್ನು ಸಿನಿಮ ‘ಪಂಡಿತರು’ ಹೇಳಬೇಕು… ನಮ್ಮಂತಹ ಹುಲುಮಾನವರಿಗೆ ತೋಚಲ್ಲ. ನಮಗಂತೂ ಒಟ್ಟಾರೆಯಾಗಿ ಒಂದು ಒಳ್ಳೆಯ ಸಿನಿಮಾ ನೋಡಿದ ಅನುಭವ, ಆಹ್ಲಾದಕರ ಮನಸ್ಸಿನಿಂದ ಹೊರಬರುತ್ತೇವೆ.

ಎಲ್ಲರೂ ಸಿನಿಮಾ ನೋಡಿ, ಪ್ರೊತ್ಸಾಯಿಸಿ.. ನಮ್ಮಲ್ಲು ಮಣಿರತ್ನಂ, ಬಾಲಚಂದರ್ ಗಳಿರಲಿ.. ಅಕಿರ ಕುರಸೋವ, ಸ್ಪಿಲ್ ಬರ್ಗ್ ಗಳನ್ನು ಕೂಡ ನಾವೇ ಗುರುತಿಸೋಣ.. ಯಾರೂ ಆಕಾಶದಿಂದ ಇಳಿದುಬಂದವರಲ್ಲವಲ್ಲ..?

Add Comment

Leave a Reply