Quantcast

‘ಬಬ್ಲುಷಾ’ 26 ರಂದು ಬಿಡುಗಡೆ

nagendraನಾಗೇಂದ್ರ

 

ಈಗಾಗಲೇ ‘ಎ ಡೇ ಇನ್ ದಿ ಸಿಟಿ’ ಸಿನಿಮಾ ನಿರ್ದೇಶನ ಮಾಡಿ ಕೆಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ವೆಂಕಟ್ ಭಾರದ್ವಾಜ್ ಅವರ ‘ಬಬ್ಲುಷಾ’ ಇದೀಗ ಬಿಡುಗಡೆ ಆಗಲು ಸಿದ್ಧವಾಗಿದೆ. ಆಗಸ್ಟ್ ತಿಂಗಳ 26 ರಂದು ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ ಎಂದು ವೆಂಕಟ್ ಭಾರದ್ವಾಜ್ ತಿಳಿಸಿದ್ದಾರೆ.

550 ವರ್ಷಗಳ ಹಿಂದಿನ ಇತಿಹಾಸವನ್ನು ತೆರೆಯ ಮೇಲೆ ತಂದಿರುವ ‘ಬಬ್ಲುಷಾ’ ಸಿನಿಮಾ, ವಿಜಯನಗರ ಸಾಮ್ರಾಜ್ಯವನ್ನು ನೆನಪಿಗೆ ತರುತ್ತದೆ. ಈ ಚಿತ್ರದ
ಚಿತ್ರೀಕರಣವನ್ನು ಮಳವಳ್ಳಿ, ಕನಕಪುರ, ಮಲ್ಲಿನಾಥಪುರ, ರಾಮನಗರ ಹಾಗೂ ಇನ್ನಿತರ ಸ್ಥಳಗಳಲ್ಲಿ ಮಾಡಲಾಗಿದೆ. 16 ಕಲಾವಿದರು ಒಳಗೊಂಡ ಮದನ್ ಹಾಗೂ ಹರಿಣಿ ಅವರ ನೃತ್ಯ ಸಂಯೋಜನೆ ಇರುವ ಹಾಡು ಚಿತ್ರದ ಅನೇಕ ವಿಶೇಷಶಗಳಲ್ಲಿ ಒಂದು.

ಚಿತ್ರದಲ್ಲಿರುವ ಕಲಾ ಪ್ರತಿಭೆಗಳನ್ನು ವೆಂಕಟ್ ಭಾರದ್ವಾಜ್, ಬಿಜಾಪುರ ಹಾಗೂ ಅನೇಕ ಸ್ಥಳಗಳಿಂದ ಆಯ್ಕೆ ಮಾಡಿಕೊಂಡಿದ್ದಾರೆ. ಹರ್ಷಾರ್ಜುನ, ಮಣಿ ಶೆಟ್ಟಿ, ಸಿಂಚನ, ಮೃದುಲ ಭಾಸ್ಕರ್ ಅಲ್ಲದೆ ಹಿರಿಯ ಕಲಾವಿದರಾದ ಶೋಭರಾಜ್, ಅವಿನಾಶ್, ಶ್ರೀಕಾಂತ್ ಹೆಬ್ಳೀಕರ್, ಶಾಂತ ನಾಗೇಂದ್ರ ಸ್ವಾಮಿ ಸಹ ತಾರಾಂಗಣದಲ್ಲಿ ಇದ್ದಾರೆ.

ಸನ್ನಿ ಮಹಾದೇವಣ್ ಅವರ ಸಂಗೀತ, ಅಕ್ಷಯ್ ಪಿ ರಾವ್ ಅವರ ಸಂಕಲನ, ವಿಶ್ವಜಿತ್ ಬಿ ರಾವ್ ಅವರ ಛಾಯಾಗ್ರಹಣ ಇರುವ ಅಮೃತ ಫಿಲ್ಮ್ ಸೆಂಟರ್ ಅಡಿಯಲ್ಲಿ ಈ ಚಿತ್ರದ ನಿರ್ಮಾಪಕರು ಹಿರಿಯ ಕನ್ನಡ ಸಿನಿಮಾಗಳ ನಿರ್ದೇಶಕ ಹಾಗೂ ಸಾಹಿತಿ ಸಿ ವಿ ಶಿವಶಂಕರ್.

Add Comment

Leave a Reply