Quantcast

‘ಅನ್ವೇಷಣೆ’ಗೆ ಪುಸ್ತಕ ಪ್ರಾಧಿಕಾರದ ಗರಿ

ಕನ್ನಡ ಪುಸ್ತಕ ಪ್ರಾಧಿಕಾರದ 2015ರ ಸಾಲಿನ ಪ್ರಶಸ್ತಿ ಪ್ರಕಟಿಸಲಾಗಿದ್ದು, 2015 ನೇ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ ಬೆಂಗಳೂರಿನ ‘ಅನ್ವೇಷಣೆ ಪ್ರಕಾಶನ’ ಆಯ್ಕೆಯಾಗಿದೆ. ಹಿರಿಯ ಬರಹಗಾರ ಆರ್ ಜಿ ಹಳ್ಳಿ ನಾಗರಾಜ್ ಅವರ ಸಂಪಾದಕತ್ವದ ಅನ್ವೇಷಣೆ ಈ ರೀತಿ ಪ್ರಶಸ್ತ ಪಡೆದ ಮೊದಲ ಹವ್ಯಾಸಿ ಪ್ರಕಾಶನ ಸಂಸ್ಥೆಯಾಗಿದೆ. ಪ್ರಶಸ್ತಿಯು ₹ 1 ಲಕ್ಷ ನಗದು ಒಳಗೊಂಡಿದೆ.

r g halli nagarajಈ ಪ್ರಶಸ್ತಿಯ ಬಗ್ಗೆ ಅವಧಿಗೆ ಪ್ರತಿಕ್ರಿಯೆ ನೀಡಿದ ಆರ್.ಜಿ. ಹಳ್ಳಿ ನಾಗರಾಜ ಅವರು ಇದು ಬದ್ಧತೆಯ ಸಾಹಿತ್ಯಕ್ಕೆ ಸಂದ ಗರಿ ಎಂದು ಬಣ್ಣಿಸಿದ್ದಾರೆ.

“ಕಳೆದ ಮೂರು ದಶಕಗಳಿಂದ ಬದ್ಧತೆಯ ಸಾಹಿತ್ಯವನ್ನು “ಅನ್ವೇಷಣೆ ಪ್ರಕಾಶನ” ಹಾಗೂ ಅನ್ವೇಷಣೆ ಸಾಹಿತ್ಯ ಪತ್ರಿಕೆ ಪ್ರಕಟಿಸುತ್ತಾ ಬಂದಿದೆ. ಸ್ಪರ್ಧಾತ್ಮಕವಾದ ಪ್ರಕಾಶನ ಸಂಸ್ಥೆಗಳ ನಡುವೆ ನಮ್ಮದು ಹೆದ್ದಾರಿ ಕವಲಿನ ಹಾದಿ. ಲಾಭಕ್ಕಿಂತಲೂ ಸಾಮಾಜಿಕ ಪರಿವರ್ತನೆಗೆ, ಜಾತ್ಯತೀತ ಮನಸ್ಸುಗಳಿಗೆ ವೈಚಾರಿಕ ಸಾಹಿತ್ಯ ಉಣಬಡಿಸುವ ಕೆಲಸ ನಮ್ಮ ಪ್ರಕಾಶನಕ್ಕೆ ಮುಖ್ಯ. ಬಂಡಾಯ, ದಲಿತ ಸಾಹಿತ್ಯ, ಕೋಮು ಸೌಹಾರ್ದ ಬರಹಗಳು, ಸಮಾಜವಾದಿ ಬರಹಗಳಿಗೆ ಪ್ರಕಾಶನ ಆದ್ಯತೆ ನೀಡಿದೆ. ನಮ್ಮ ಪುಟ್ಟ ಪ್ರಯತ್ನಕ್ಕೆ ಸರಕಾರ ದೊಡ್ಡ ಪ್ರಶಸ್ತಿ ನೀಡಿದ್ದು ಸಂತೋಷ ತಂದಿದೆ” ಎಂದಿದ್ದಾರೆ.

‘ಡಾ. ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’ಗೆ ಬಳ್ಳಾ ರಿಯ ಡಾ.ಬಿ.ಶೇಷಾದ್ರಿ ಮತ್ತು  ‘ಡಾ. ಜಿ.ಪಿ . ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ಗೆ ಶಶಿಕಲಾ ಬೆಳಗಲಿ ಆಯ್ಕೆಯಾಗಿದ್ದಾರೆ. ಕಲಬುರ್ಗಿ ಪ್ರಶಸ್ತಿ  ₹75 ಸಾವಿರ ಮತ್ತು ರಾಜರತ್ನಂ ಪ್ರಶಸ್ತಿ ₹ 50 ಸಾವಿರ ನಗದು ಒಳಗೊಂಡಿದೆ.

‘ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಮೈಸೂರಿನ ಡಾ.ಎಸ್‌.ಪಿ.ಯೋಗಣ್ಣ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ₹ 25 ಸಾವಿರ  ಒಳಗೊಂಡಿದೆ.

ಪುಸ್ತಕ ಸೊಗಸು ಬಹುಮಾನ ಪಲ್ಲವ ಪ್ರಕಾಶನಡಾ ಪ್ರಕಟಣೆ ಸೇರಿದಂತೆ ೬ ಪುಸ್ತಕಗಳಿಗೆ ಸಂದಿದೆ.

ಪ್ರಥಮ: ಎಂ.ಎಂ.ಪಬ್ಲಿಕೇಷನ್‌ , ಬೆಂಗಳೂರು ಪ್ರಕಟಿಸಿರುವ ಕೃತಿ ‘ಅನುರಕ್ತಿ’.  ₹25 ಸಾವಿರ ನಗದು.

ದ್ವಿತೀಯ: ಪಲ್ಲವ ಪ್ರಕಾಶನ, ಬಳ್ಳಾರಿ ಪ್ರಕಟಿಸಿರುವ ಕೃತಿ ‘ಪ್ರೀತಿಯೆಂಬುದು ಚಂದ್ರನ ದಯೆ’. ₹20 ಸಾವಿರ ನಗದು.

shashikala belagaliತೃತೀಯ: ಅನಿಕೇತನ, ಬೆಂಗಳೂರು ಪ್ರಕಟಿಸಿರುವ ಕೃತಿ ‘ಅಸ್ಮಿತಾ’ , ₹15 ಸಾವಿರ ನಗದು.

ಮಕ್ಕಳ ಸೊಗಸು ಬಹುಮಾನ: ಅನನ್ಯ ಪ್ರಕಾಶ,ಕೋಲಾರ ಪ್ರಕಟಿಸಿರುವ ‘ಮತ್ತೊಂದುಮಹಾಭಾರತ’,₹8ಸಾವಿರ.

ಮುಖಪುಟ ವಿನ್ಯಾಸ ಬಹುಮಾನ: ಪ್ರಥಮ: ‘ಬಿಡಿ ಮುತ್ತು’ ಕೃತಿ, ಕಲಾವಿದ ಯು.ಟಿ.ಸುರೇಶ್‌, ₹ 10 ಸಾವಿರ ನಗದು.

ದ್ವಿತೀಯ: ‘ಪೇಶಂಟ್‌ ಪಾರ್ಕಿಂಗ್‌’ ಕೃತಿ, ಕಲಾವಿದ ಸುಧಾಕರ್‌ ದರ್ಬೆ, ₹ 8 ಸಾವಿರ ನಗದು.

ಯುವ ಬರಹಗಾರರ ಕೃತಿಗೆ ಪ್ರೋತ್ಸಾಹ ಧನ 

ಪ್ರೀತಿ ಲಕ್ಷ್ಮೀಕಾಂತ– ಕೋಲಾರ,  ಅನಿತಾ ಎಂ.ಎಸ್‌– ಮಂಡ್ಯ, ಕ.ಶಿ.ಮೋಹನ್‌ಕುಮಾರ್‌–ಬೆಂಗಳೂರು, ಕುಮಾರ–ತುಮಕೂರು, ಗೋಳೂರು ಎಂ.ನಾರಾಯಣ– ಮೈಸೂರು, ಸೌಮ್ಯಾ ಕೆ.ಆರ್‌, ಅಮರೇಶ– ರಾಯಚೂರು, ಪ್ರವೀಣ ಎನ್‌– ಕೋಲಾರ, ಶ್ರೀಧರ ಪತ್ತಾರ– ವಿಜಯಪುರ, ಗುತ್ತಪ್ಪ ಬಸಪ್ಪ ಯಾದಗಿರಿ, ಬಿ.ಹರೀಶ್‌, ನಾಗಲಿಂಗ– ಹೊಸಕೋಟೆ, ಅನ್ನಪೂರ್ಣ– ಕೊಪ್ಪಳ, ಪ್ರಸನ್ನ – ರಾಮನಗರ, ಅನೀಲ ಕುಮಾರ  ಗುನ್ನಾಪೂರ– ವಿಜಯಪುರ, ಮಧು

ರಾಣಿ  ಎಚ್‌.ಎಸ್‌– ಮೈಸೂರು, ಕವಿತ ಡಿ.ಎಲ್‌ –ಕೊಳ್ಳೆಗಾಲ, ಈರಪ್ಪ ಹ. ತಾಳದವರ –ಗದಗ, ನಾಗರಾಜ ವಲ್ಕಂದಿನ್ನಿ– ಕೊಪ್ಪಳ, ಮಡ್ಡಿ ಶೃತಿ ರಾಜಶೇಖರ–ಸೊಲ್ಲಾಪುರ, ಶರಣಬಸವ ಬಿ– ಕೊಪ್ಪಳ, ವೆಂಕಟೇಶ್ ಗುಡ್ಡೆಪ್ಪನವರ– ಬಾಗಲಕೋಟೆ, ಅಶ್ವಿನಿ ಮಹಾಜನಶೆಟ್ಟಿ– ಬೆಂಗಳೂರು, ಮುಸ್ತಾಫ ಕೆ.ಎಚ್‌– ಮೂಡುಬಿದರೆ, ಎಚ್‌.ಮಲ್ಲಯ್ಯ– ಸಂಡೂರು.

2 Comments

  1. Gubbachchi Sathish
    August 19, 2016
  2. Rudranna Harthikote
    August 19, 2016

Add Comment

Leave a Reply