Quantcast

ಯಶಸ್ವೀ ಪ್ರದರ್ಶನ ಕಾಣುತ್ತಿರುವ ‘ ಡೀಲ್ ರಾಜ’

ಕೋಮಲ್ ಅಭಿನಯದ ಡೀಲ್ ರಾಜ ಚಿತ್ರವು ಇಪ್ಪತೈದನೇ ದಿನದತ್ತ ಮುನ್ನುಗುತ್ತಿದೆ. ಕಬಾಲಿ, ಸಂತೆಯಲ್ಲಿ ನಿಂತ ಕಬೀರ ಹೀಗೆ ಸ್ಟಾರ್ ಹೀರೊಗಳ ಸಿನಿಮಾಗಳ ಮಧ್ಯೇಯೂ ಡೀಲ್ ರಾಜ ಚಿತ್ರವು ಯಶ್ವಸೀ ಪ್ರದರ್ಶನ ಕಾಣುತ್ತಿದೆ. ರಾಜಗೋಪಿ ಸೂರ್ಯ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರವಿಚಂದ್ರರೆಡ್ಡಿ ಮತ್ತು ಕೃಷ್ಣಮೂರ್ತಿ ಅವರು ಮೇಘದೂತ ಮೂವೀಸ್ ಲಾಂಛನದಲ್ಲಿ ನಿರ್ಮಾಣ ಮಾಡಿದ್ದರೆ.

ಬಹು ಮುಖ್ಯವಾಗಿ ನಟ ಕೋಮಲ್ ಗೆ ಈ ಚಿತ್ರದ ಯಶಸ್ಸು ಮುಖ್ಯವಾಗಿತ್ತು, ಬಹಳ ದಿನಗಳ ಗ್ಯಾಪ್ ನಂತರ ಡೀಲ್ ರಾಜ ಚಿತ್ರದಲ್ಲಿ ಕೋಮಲ್ ನಟಿಸಿದ್ದರು. ಇಲ್ಲಿಯೂ ತಮ್ಮ ಅಭಿಮಾನಿಗಳಿಗೆ ನಿರಾಶೆ ಮಾಡದೆ ಒಂದೊಳ್ಳೆ ಚಿತ್ರವನ್ನು ಕೊಟ್ಟಿದ್ದಾರೆ.

ಅಷ್ಟಲ್ಲದೇ ನಟ ಕೋಮಲ್ ತಮ್ಮ ಮುಂದಿನ ಚಿತ್ರಗಳಲ್ಲಿ ಮತ್ತಷ್ಟು ಸಿಮ್ಲ್ ಆಗಿ ಕಾಣಿಸಿಕೊಳ್ಳುತ್ತಾರೆ ಎಂಬ ವದಂತಿ ಗಾಂಧಿ ನಗರದಲ್ಲಿ ಕೇಳಿ ಬರುತ್ತಿದೆ.

ಚಿತ್ರದಲ್ಲಿ ಹಾಡುಗಳು ಕೂಡಾ ಸೂಪರ್ ಹಿಟ್ ಆಗಿವೆ ಸಂಗೀತ ನಿರ್ದೇಶಕ ಅಭಿಮನ್ ರಾಯ್ ಕೂಡಾ ತಮ್ಮ ಗೆಲುವಿನ ನಗೆಯನ್ನು ಬೀರಿದ್ದಾರೆ. ಇನ್ನು ಚಿತ್ರದ ಗಳಿಕೆಯೂ ದಿನೇ ದಿನೇ ಹೆಚ್ಚುತ್ತಿದೆ. ನಿರ್ಮಾಪಕರು ತಮ್ಮ ಈ ಚಿತ್ರದ ಗೆಲುವಿನಿಂದ ಮುಂದಿನ ಚಿತ್ರವನ್ನು ದೊಡ್ಡ ಸ್ಟಾರ್ ನಟನ ಚಿತ್ರವನ್ನು ನಿರ್ಮಾ‍ಣ  ಮಾಡುವ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ.

Add Comment

Leave a Reply