Quantcast

ಲೂಸಿಯಾ ತಂಡದ ಹೊಸ ಚಿತ್ರ’ಸಿಪಾಯಿ’

ಲೂಸಿಯಾ ಚಿತ್ರ ತಂಡದಿಂದ ಮತ್ತೊಂದು ಚಿತ್ರವು ತೆರೆಕಾಣಲು ಸಿದ್ದವಾಗಿದೆ. ಲೂಸಿಯಾ ಚಿತ್ರಕ್ಕೆ ಸಹ ನಿರ್ದೇಶಕರಾಗಿದ್ದ ರಜತ್ ಮಯೀ ‘ಸಿಪಾಯಿ’ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಮೂಲಕ ನಾಯಕ ನಟನಾಗಿ ಲೂಸಿಯಾ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ‘ಸಿದ್ಧಾರ್ಥ್’ ಸಿಪಾಯಿ ಚಿತ್ರಕ್ಕೆ ನಾಯಕ ನಟರಾಗಿ ಅಭಿನಯಿಸಿದ್ದಾರೆ.

ಹದಿನೆಂಟು ವರ್ಷಗಳ ಹಿಂದೆ ನಟ ರವಿಚಂದ್ರನ್ ನಟಿಸಿ ನಿರ್ದೇಶಿಸಿದ ಸಿಪಾಯಿ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಇದು ವಿಭಿನ್ನ ರೀತಿಯ ಮೈನವಿರೇಳಿಸುವ ಸಸ್ಪೆನ್ಸ್ ಹಾಗೂ ನವಿರಾದ ಪ್ರೇಮವೂ ಕಥೆಯೊಂದಿಗೆ ಬೆಸೆದುಕೊಂಡಿದೆ.

hqdefaultಈಗಾಗಲೇ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತೀವೆ. ಇನ್ನುಳಿದಂತೆ ಸಿನಿಮಾದ ಭಾಗವಾಗಿ ಶೃತಿ ಹರಿಹರನ್  ಅಚ್ಯುತ್ ಕುಮಾರ್ ಮುಂತಾದ ತಾರಾ ಬಳಗವು, ತಂತ್ರಜ್ಞರೂ ಸೇರಿದಂತೆ ಲೂಸಿಯಾ ತಂಡದವರೇ ಆಗಿದ್ದಾರೆ. ಚಿತ್ರಕ್ಕೆ ನಾಯಕ ನಟ ಸಿದ್ಧಾರ್ಥ್ ಮತ್ತು ರಜತ್ ಮಯೀ ಬಂಡವಾಳವನ್ನು ಹೂಡಿದ್ದಾರೆ.

Add Comment

Leave a Reply

%d bloggers like this: