Quantcast

ದುಬೈ

jabbar parappu

ಜಬ್ಬಾರ್ ಪರಪ್ಪು,ದುಬೈ

ಮರುಭೂಮಿಯ ಸುಡುವ ತಾಪವನ್ನು
ಒಡಲಲ್ಲಿಯಿಟ್ಟು ಸಹಿಸಿ
ಬದುಕುವ ಗಿಡಗಳು ಮಾತ್ರ
ಇಲ್ಲಿ ಮರವಾಗಿ ಬೆಳೆಯಬಹುದು.!!

dubai-fountain-martina-dreslerಅಕಾಶದಲ್ಲಿ ಹಾರುವ ಪಕ್ಷಿಗಳಿಗಿಂತ
ಲೋಹದ ಪಕ್ಷಿಗಳು ಹಾರಾಟವೇ
ಜಾಸ್ತಿ ಕಾಣಸಿಗುತ್ತವೆ..!!!

೩.

ಸದಾ ಗಗನಕ್ಕೆ ಮುತ್ತಿಡುತ್ತ;
ಗೆಳೆಯರಾದ ಭಾಸ್ಕರ
ರಾತ್ರಿ ಪಾಳಿಯ ಚಂದಿರ
ಮಿನಗುವ ಚುಕ್ಕಿ ತಾರೆಗಳ
ಜೊತೆ ಸುಖ-ದುಃಖಗಳನ್ನು
ಹಂಚಿ ಜೊತೆಯಾಗಿಯೇ
ಬದುಕುತ್ತವೆ ಇಲ್ಲಿನ ಎಲ್ಲಾ
ಎತ್ತರದ ಕಟ್ಟಡಗಳು…!!!

ಇಲ್ಲಿ ನಮ್ಮ ದೇಶದ ಹಾಗೇ
ಇನ್ಕಮ್ ಟಾಕ್ಸ್ ಕಟ್ಟಬೇಕು
ಎಂಬ ತಲೆನೋವು ಉದ್ಯಮಿಗಳಿಗೆ ಇಲ್ಲವಲ್ಲ..!!
ಹಾಗಾದರೆ ಇಲ್ಲಿನ ಆದಾಯದ
ಮೂಲ ಯಾವುದು ಯೋಚಿಸುವಾಗಲೆ.??
ಅದು ಇದು ಅಂತ ಕ್ಷುಲಕ
ಕಾರಣಕ್ಕೆ ಬಲದಿ* ರೈಡ್
ಮಾಡಿ ದಂಡ ಹಾಕಿದಾಗಲೇ
ಸಿಕ್ಕಿತ್ತು ಮೇಲಿನ ಪ್ರಶ್ನೆಗೆ
ಉತ್ತರ…!!

*ಬಲದಿ=ನಗರ ಪಾಲಿಕೆ

 

Add Comment

Leave a Reply