Quantcast

ಈ ಫೋಟೋ ನೋಡಿದ್ರಲ್ಲಾ..

katte gururaj

katte gururaj2

ಕಟ್ಟೆ ಗುರುರಾಜ್ 

ಈ ಫೋಟೋ ನೋಡಿದ್ರಲ್ಲಾ…

ಯಾವುದೋ ಎಸ್ಟೇಟು ಇದ್ದಾಗಿದೆಯಲ್ಲಾ,
ಹೌದು, ಎಸ್ಟೇಟು ನಿಜ. ಇದು ಅಂತಿಂಥ ಎಸ್ಟೇಟಲ್ಲ. ಬಲು ಮಹತ್ವವಾದ ಎಸ್ಟೇಟು. ಈ ರೋಡಿನ ಬಳಿ ಇದೆ.

ಡಾ. ರಾಜ್ ವೀರಪ್ಪನ್‌ನಿಂದ ಬಿಡುಗಡೆಯಾದ ೩೪ ಗಂಟೆಗಳ ಕಾಲ ನಿಗೂಢವಾಗಿದ್ದ ಎಸ್ಟೇಟ್. ರಾಮರಾಜ ಎಸ್ಟೇಟ್.
ಇಡೀ ಜಗತ್ತಿಗೆ ರಾಜ್ ಬಿಡುಗಡೆ ಆಗಿರುವ ವಿಚಾರ ತಿಳಿದೇ ಇರಲಿಲ್ಲ. ತಿಳಿಸುವ ಸಿದ್ಧತೆಗಾಗಿ ಈ ಎಸ್ಟೇಟ್ ನಲ್ಲಿ ಇಟ್ಟಿದ್ದರಂತೆ.

rajkumar3ವೀರಪ್ಪನ್ ಬಿಡುಗಡೆ ನಂತರ ರಾತ್ರಿ ೮ಕ್ಕೆ ರಾಜ್ ಎಸ್ಟೇಟಿಗೆ ಬರುತ್ತಾರೆ. ಬಂದ ಮೇಲೂ ಇವರೆಲ್ಲಾ ಮತ್ತೆ ನನ್ನ ಎಲ್ಲೋ ಬಂಧಿಸಿ ಇಡಲು ಇಲ್ಲಿಗೆ ಕರೆತಂದಿದ್ದಾರೆ ಅಂತಲೇ ಅನುಮಾನ ಇತ್ತು.

ಫೋಟೋದಲ್ಲಿ ಇದ್ದಾರಲ್ಲ, ಅವರೇ ರಾಮರಾಜ್. ಈ ರೋಡ್ ನ ಜನನಾಯಕ. ರಾಜ್ ಜೊತೆ ಮಾತನಾಡಿ ವಾಸ್ತವ ತಿಳಿಸುತ್ತಾರೆ. ಭೂರಿ ಭೋಜನ. ರಾಜ್ ಹೊಟ್ಟೆ ತುಂಬ ಊಟ ಮಾಡುತ್ತಾರೆ. ಇಷ್ಟಾದರೂ ಯಾರಿಗೂ ಮಾಹಿತಿ ಇಲ್ಲ.

ಅಂದು ರಾತ್ರಿ ಮಲಗಿದ್ದು ಇದೇ ಬೆಡ್ ರೂಮಿನಲ್ಲಿ ( ಫೋಟೋ ಇದೆ)

ರಾಮರಾಜ್ ಸೇಫ್ಟಿಗೆ ಅಂತ ಬೆಡ್ ರೂಮಲ್ಲಿ ರೈಫಲ್ ಇಟ್ಟಿದ್ದನ್ನು ನೋಡಿದ ರಾಜ್, ಮತ್ತೆ ವೀರಪ್ಪನ್ ಅಪರಹಣ ಎಲ್ಲವೂ ನೆನಪಾದಂತೆ ಆಯಿತೋ ಏನೋ.. ಖುಲ್ಲಾಖುಲ್ಲಂ.. ಆ ರೂಮಲ್ಲಿ ಮಲಗೋಲ್ಲ ಅಂತ ಹಠ ಹಿಡಿದುಬಿಟ್ಟರು..
ಮುಂದೇನು?

ರಾಮರಾಜರು ರಾಜ್ ರು ಮತ್ತೆ ಮನ ಒಲಿಸಿ, ಅವರನ್ನು ಮಂಚದ ಮೇಲೆ ಮಲಗಿಸಿ, ಕೆಳಗೆ ಇವರು ಮಲಗಿ ಧೈರ್ಯ ತುಂಬಿದರು..
ಬೆಳಗ್ಗೆ ಎದ್ದು ನೋಡಿದರೆ ರಾಜ್ ಮತ್ತೆ ನಾಪತ್ತೆ… ರಾಮರಾಜರ ಜಂಘಾಬಲ ಹುಡುಗಿ ಹೋಯ್ತು…

ಮುಂದೇನಾಯ್ತು… ?

ಅದೇ ಥ್ರಿಲ್ಲಿಂಗ್ ವೀರಪ್ಪನ್…rajkumar2

Add Comment

Leave a Reply