Quantcast

ಗಣಿ ನಾಡಲ್ಲಿ ನಡೆದಂತಹ ರಿಯಲ್ ಸ್ಟೋರಿ ಬಳ್ಳಾರಿ ದರ್ಬಾರ್

ಈ ಹಿಂದೆ ತುಫಾನ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಸ್ಮೈಲ್ ಶ್ರೀನು ಈಗ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡಿ ಮುಗಿಸಿದ್ದಾರೆ, ಇದಕ್ಕೂ ಮೊದಲು ಒಂದೆರಡು ತೆಲಗು ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಇವರು ಇತ್ತೀಚೆಗೆ ಒಂದು ಕಿರುಚಿತ್ರವನ್ನು ಕೂಡ ನಿರ್ಮಿಸಿದ್ದರು. ಬಳ್ಳಾರಿ ದರ್ಬಾರ್ ಎಂಬ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಗಣಿ ನಾಡಾದ ಬಳ್ಳಾರಿಯಲ್ಲಿ ಹಿಂದೊಮ್ಮೆ ನಡೆದಂತಹ ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರಕಥೆ ಮಾಡಿದ್ದಾರೆ. ಈ ಚಿತ್ರದಲ್ಲಿ ಲವ್ ದರ್ಬಾರ್, ಮನಿ ದರ್ಬಾರ್, ರಿವೆಂಜ್ ದರ್ಬಾರ್ ನಂತಹ ಮೂರು ಪ್ರಮುಖ ಅಂಶಗಳನ್ನು ಪ್ರಧಾನವಾಗಿ ತೆಗೆದುಕೊಂಡು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣದ ಜೊತೆ ನಿರ್ದೇಶನ ಕೂಡ ಮಾಡಿದ್ದಾರೆ. ಬಳ್ಳಾರಿ ನಗರದ ಸುತ್ತಮುತ್ತ ಪ್ರದೇಶಗಳಲ್ಲಿ ಇದರ ಚಿತ್ರೀಕರಣ ನಡೆದಿದೆ. ಲವ್ ಕಮ್ ಆಕ್ಷನ್ ಕಥೆ ಹೊಂದಿರುವ ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಸದ್ಯ ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕಾರ್ಯ ಭರದಿಂದ ಸಾಗಿದೆ.

DSC_1702ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ, ನಾನಿ, ಕಾರ್ತಿಕ್ ಸುಬ್ರಮಣಿ ಛಾಯಾಗ್ರಹಣ, ಡಾ. ವಿ. ನಾಗೇಂದ್ರ ಪ್ರಸಾದ್, ಸ್ಮೈಲ್ ಶ್ರೀನು ಸಾಹಿತ್ಯ, ಡಿ. ಮಲ್ಲಿ ಸಂಕಲನ, ಚಿರಂಜೀವಿ ನೃತ್ಯ ನಿರ್ದೇಶನ, ಟ್ಯಾಟೋ ಸ್ಮೈಲ್ ಮಂಜು ಕಲಾ ನಿರ್ದೇಶನವಿದೆ. ಸಂಪತ್ ಕುಮಾರ್, ಪೋಲಾ ಶ್ರೀನಿವಾಸ್ ಬಾಬು, ಮಮತಾ ರಾವುತ್, ಐಶ್ವರ್ಯ, ಶುಭರಕ್ಷಾ, ಸುಭಾಷ್ ಚಂದ್ರ, ಆಜಿ ಬಾಬಾಖಾನ್, ಗಾಂಧಿರಾಮ್, ನಯನ, ಅರುಣ್ ಕುಮಾರ್, ಅರ್ಜುನ್, ಗುರುನಾಥ್, ಚಂದ್ರನ್ ಹಾಗೂ ಸ್ಮೈಲ್ ಸಿಲ್ವರ್ ಸ್ಕ್ರಿನ್ ಅಕಾಡೆಮಿಯ ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ.

Add Comment

Leave a Reply