Quantcast

ಗಾಳಿಪಟ ನಂತರ ಮತ್ತೆ ಒಂದಾದ ಯೋಗರಾಜ್ ಮತ್ತು ಗಣೇಶ್

ಮುಂಗಾರು ಮಳೆ, ಗಾಳಿಪಟ ಚಿತ್ರಗಳ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ಟರು ಕೂಡಿ ಮತ್ತೆ ಸಿನೆಮಾ ಮಾಡಲು ಉತ್ಸುಕರಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್ ತೆರೆಯ ಮೇಲೆ ಚೆನ್ನಾಗಿ ವರ್ಕೌಟ್ ಆಗಿದೆ. ಹಲವು ವರ್ಷಗಳ ನಂತರ ಈ ಜೋಡಿ ಒಂದಾಗಿ ಸಿನಿಮಾ ಮಾಡಲು ಸಮಯ ಕೂಡಿ ಬಂದಿದೆ, ಇದರಿಂದ ಗಣೇಶ್ ಅಭಿಮಾನಿಗಳ ಮನದಲ್ಲಿ ಸಂತಸ ಮೂಡಿದೆ. ಗಣೇಶ್ ಮತ್ತು ಯೋಗರಾಜ್ ಭಟ್ಟರ ಜೋಡಿ ಎರಡು ಯಶಸ್ವಿ ಚಿತ್ರಗಳನ್ನು ಸಿನಿರಸಿಕರಿಗೆ ನೀಡಿತ್ತು.

08-1470652434-yogaraj-bhat-and-ganesh-1ಹೆಸರಿಡದ ಹೊಸ ಚಿತ್ರವು ಅತ್ಯಂತ ಸರಳವೂ, ದಿನನಿತ್ಯದ ಬದುಕಲ್ಲಿ ಗೋಚರಿಸುವ ಹುಡುಗ-ಹುಡುಗಿಯರ ಭಾವನಾ ಪ್ರಪಂಚವೂ ಈ ಕಥಾನಕದಲ್ಲಿದೆ. ಇದೊಂದು ಒಬ್ಬ ಹುಡುಗನ ಜೀವನದ ಕಥೆ, ಆತನ ಜೀವನ, ವೃತ್ತಿ, ಪ್ರೀತಿ, ತಂದೆ-ತಾಯಿ, ಸಮಾಜ ಎಲ್ಲದರ ‘ಹೊಸ ಹೊಳಹು’ ಇದರಲ್ಲಿದೆ. ಸಂಗೀತ ವಿ. ಹರಿಕೃಷ್ಣ ಅವರದ್ದು. ಗೀತರಚನೆ ಜಯಂತ್ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ ಇಬ್ಬರದ್ದು. ಅಂತರಾಳಕ್ಕೆ ತಾಕುವಂಥ ಹೊಸ ರೀತಿಯ ಹಾಡುಗಳ ರಚನೆ, ಸಂಯೋಜನೆ ಜಾರಿಯಲ್ಲಿದೆ. ಸ್ಕ್ರಿಪ್ಟ್ ಬರವಣಿಗೆ ಭಾಗಶಃ ಮುಗಿದಿದೆ. ಚಿತ್ರದ ನಿರ್ಮಾಣವನ್ನು ಇಬ್ಬರೂ ಸೇರಿ ಮಾಡುತ್ತಿದ್ದೇವೆ. ಚಿತ್ರದ ಇತರೆ ತಾರಾಗಣ ಹಾಗೂ ತಂತ್ರಜ್ಞರ ವಿವರಗಳನ್ನು ಕೆಲವೇ ದಿನಗಳಲ್ಲಿ ನಿಮಗೆ ಹೇಳುತ್ತೇವೆ. ಚಿತ್ರೀಕರಣವು ಮೈಸೂರು ಹಾಗೂ ಕರ್ನಾಟಕದ ಇತರೆ ಹಲವಾರು ಜಿಲ್ಲೆಗಳಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 25 ರ ಅಕ್ಕಪಕ್ಕ ಚಿತ್ರೀಕರಣ ಶುರುವಾಗುವುದು.

Add Comment

Leave a Reply