Quantcast

“ಹ್ಯಾಪಿ ಬರ್ತ್ ಡೇ” ಗೆ ದರ್ಶನ್ ಮತ್ತು ಪುನೀತ್ ಟಾಕ್

ಇಂದು ರಾಜ್ಯಾದ್ಯಂತ ತೆರೆ ಕಾಣಲಿರುವ ಹ್ಯಾಪಿ ಬರ್ತ್ ಡೇ ಸಿನಿಮಾ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಮಂಡ್ಯದ ಘಮಲಿನ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ಮಹೇಶ್ ಸುಖಧರೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ಸಿನಿರಸಿಕರಲ್ಲಿ ಭಾರಿ ಕುತೂಹಲವನ್ನು ಸೃಷ್ಟಿಸಿದೆ. ಅಷ್ಟಕ್ಕೂ ಹ್ಯಾಪಿ ಬರ್ತ್ ಡೇ ಸಿನಿಮಾದ ಬಗ್ಗೆ ಹಲವಾರು ಉತ್ತಮ ಮಾತುಗಳನ್ನು ಆಡಿದ್ದಾರೆ. ಯುವನಟ ಸಚಿನ್ ರನ್ನು ಪ್ರೋತ್ಸಾಹಿಸುವ ಮೂಲಕ ಬೆನ್ನು ತಟ್ಟಿದ್ದಾರೆ. ಆದರೆ ಇಷ್ಟೆಲ್ಲಾ ಹೇಳೋಕೆ ಕಾರಣ ಈ ಚಿತ್ರದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭರವಸೆಯ ಮಾತುಗಳನ್ನಾಡಿದ್ದಾರೆ.

Puneeth_Darshanಈ ಚಿತ್ರದ ಟೀಸರ್ ರೀಲಿಸ್ ಆದಾಗಲೇ ಭಾರೀ ಸದ್ದು ಮಾಡಿತ್ತು. ಟೀಸರ್ ನೋಡಿದ ದರ್ಶನ್ ಇದೊಂದು ವಿಭಿನ್ನ ಕಥೆ ಹೊಂದಿದೆ ಎಂಬುಂದು ಟೀಸರ್ ನೋಡಿದರೆ ಗೊತ್ತಾಗುತ್ತದೆಂದು ಹೇಳಿದ್ದಾರೆ. ಗ್ರಾಮೀಣ ಭಾಗದ ಕಥೆಗಳನ್ನು ಹೊಂದಿರುವ ಇಂತಹ ಸಿನಿಮಾಗಳು ಆಗಾಗ ಬರುತ್ತಿರಬೇಕು, ಆಗಲೇ ನಮ್ಮ ಗ್ರಾಮೀಣ ಸೊಗಡನ್ನು ಪರಿಚಯಿಸಲು ಮತ್ತಷ್ಟು ಸಾಧ್ಯ. ಮಹೇಶ್ ಸುಖಧರೆಯವರ ಸಿನಿಮಾ ಅಂದ ಮೇಲೆ ಇಲ್ಲಿ ಖಂಡಿತಾ ವಿಶೇಷತೆಯಂತೂ ಇದ್ದೆ ಇರುತ್ತದೆ ಎಂಬ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Happy birthdayಪವರ್ ಸ್ಟಾರ್ ಪುನೀತ್ ರಾಜಕುಮಾರ ಹ್ಯಾಪಿ ಬರ್ತ್ ಡೇ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ. ತಂದೆಯವರ ಗ್ರಾಮೀಣ ಹಿನ್ನೆಲೆ ಹೊಂದಿರುವ ಚಿತ್ರಗಳು ಇಂದಿಗೂ ಎಲ್ಲ ಕಾಲಕ್ಕೂ ಅಜರಾಮರವಾಗಿವೆ, ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಸೊಗಡಿನ ಹಿನ್ನೆಲೆಯನ್ನು ಹೊಂದಿರುವ ಕಥೆಗಳು ಸಿನಿಮಾಗಳ ಕೊರತೆ ಎದ್ದು ಕಾಣುತಿದೆ. ಹ್ಯಾಪಿ ಬರ್ತ್ ಡೇ ಟೀಸರ್ ಮತ್ತು ಹಾಡುಗಳನ್ನು ನೋಡಿದರೆ ಖುಷಿಯಾಯ್ತು ಸಿನಿಮಾದಲ್ಲಿ ಹೊಸತನವಿದೆ. ಖಂಡಿತಾ ಚಿತ್ರವೂ ನೋಡುಗರಲ್ಲಿ ಕುತೂಹಲವನ್ನು ಮೂಡಿಸುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚೆಲುವರಾಯಸ್ವಾಮಿ ಅವರು ರಾಜಕೀಯದಲ್ಲಿ ದೊಡ್ಡ ಹೆಸರನ್ನು ಮಾಡಿದವರು. ಈಗ ತಮ್ಮ ಮಗನನ್ನು ಬೆಳ್ಳಿ ತೆರೆಗೆ ಪರಿಚಯಿಸುತ್ತಿದ್ದಾರೆ. ಮಂಡ್ಯದ ಸುತ್ತ ಮುತ್ತಲಿನ ಗ್ರಾಮೀಣ ಭಾಗದ ಕಥೆಯನ್ನು ಸಿದ್ದಪಡಿಸಿಕೊಂಡು ಮಾಡಿರುವ ಚಿತ್ರವಿದು. ಯಾವುದೇ ತಂತ್ರಜ್ಞಾನದ ಅಬ್ಬರವಿಲ್ಲ. ಇಡೀ ಚಿತ್ರವೂ ಕೊನೆವರೆಗೂ ನೋಡಿಸಿಕೊಂಡು ಹೋಗುವಂತೆ ಚಿತ್ರವನ್ನು ಮಾಡಲಾಗಿದೆಂದು ಹೇಳಿದ್ದಾರೆ.

Add Comment

Leave a Reply