Quantcast

ಗ್ರಾಮೀಣ ಘಮಲಿನ ಗಮ್ಯತೆ: ಹ್ಯಾಪಿ ಬರ್ತ್ ಡೆ

ಬಿಡುಗಡೆಗೂ ಮುನ್ನವೇ ಭಾರೀ ಕುತೂಹಲವನ್ನು ಹುಟ್ಟು ಹಾಕಿದ ಹ್ಯಾಪಿ ಬರ್ತ್ ಡೆ ಸಿನಿಮಾ ಅಪ್ಪಟ ಗ್ರಾಮೀಣ ಸೊಗಡಿನ ಕಥೆಯನ್ನು ಹೊಂದಿದೆ. ನಿರ್ದೇಶಕ ಮಹೇಶ್ ಸುಖಧರೆ ಈ ಹಿಂದೆ ಹಿಟ್ ಚಿತ್ರ ಕೊಟ್ಟವರು. ಆದರೆ ಈ ಚಿತ್ರದ ಮೂಲಕ ಮತ್ತೊಂದು ವಿಭಿನ್ನ ಕಥೆಯನ್ನು ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ. ನಿರೂಪಣೆಯಲ್ಲಿ ಸ್ವಲ್ಪ ಕೊಂಚ ಹಿನ್ನಡೆಯಾದರೂ ಚಿತ್ರವು ಪ್ರೇಕ್ಷಕರನ್ನು ಆಚೆ ಎದ್ದು ಹೋಗುವಂತೆ ಮಾಡುವುದಿಲ್ಲ.

HBDಮಂಡ್ಯ ಮತ್ತು ನಾಗಮಂಗಲ ಪ್ರದೇಶದಲ್ಲಿ ಚಿತ್ರವು ಆರಂಭವಾಗುತ್ತದೆ. ಕೆಲಸವಿಲ್ಲದೆ ಅಲೆಯುತ್ತಿರುವ ನಟ ಸಚಿನ್ ಗೆ ಹುಡುಗಿಯೊಬ್ಬಳ (ಸಂಸ್ಕೃತಿ ಶೆಣೈ) ಮೇಲೆ ಲವ್ ಆಗುತ್ತದೆ. ನಾಯಕಿ ತಂದೆ ದೊಣ್ಣೆ ವರಸೆ ಪಟು ಆಗಿರುತ್ತಾನೆ. ಉದೋಗ್ಯವಿಲ್ಲದೆ ಅಡ್ಡಾಡುವ ತನ್ನ ಪ್ರೀಯಕರನ್ನು ಸರಿ ದಾರಿಗೆ ತರಲು ನಾಯಕಿ ಪ್ರಯತ್ನ ಮಾಡಿ ಸೋತು ಹೋಗುತ್ತಾಳೆ. ನಾಯಕ ಕೊನೆಗೆ ಭಗ್ನ ಪ್ರೇಮಿಯಾ? ಎಂಬ ಕುತೂಹಲ ಚಿತ್ರ ನೋಡುಗರಲ್ಲಿ ಉಂಟು ಮಾಡುತ್ತದೆ.

ಕಥೆಯ ಆಯ್ಕೆಯ ವಿಚಾರದಲ್ಲಿ ನಿರ್ದೇಶಕ ಮಹೇಶ್ ಸುಖಧರೆ ಉತ್ತಮವಾದ ಗ್ರಾಮೀಣ ಹಿನ್ನೆಲೆಯ ಪರಿಸರ ಗಟ್ಟಿತನವನ್ನು ತೋರಿಸಿಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಸಿಟಿ ಸಿಗ್ನಲ್, ಟ್ರಾಪೀಕ್, ಹೈವೇ ಯಾವುದು ಇಲ್ಲ ಅಪ್ಪಟ ಹಳ್ಳಿಯ ಕಾಲುದಾರಿ, ಹಳ್ಳಿಯ ಪರಿಶುದ್ಧ ಗಾಳಿ, ಸಿಟಿಯ ಯಾವುದೇ ಜಂಜಾಟವಿಲ್ಲ.

Happy Birthdayಸಚಿನ್ ತನ್ನ ಮೊದಲ ಚಿತ್ರದಲ್ಲಿ ಭರವಸೆಯನ್ನು ಮೂಡಿಸುವ ಭರವಸೆ ನಾಯಕನಾಗಿದ್ದಾನೆ. ನಟಿ ಸಂಸ್ಕೃತಿ ಶೆಣೈ ಕೂಡಾ ನಟನೆಗೂ ಪುಲ್ ಮಾರ್ಕ್ಸ್. ವಿ.ಹರಿಕೃಷ್ಣ ಸಂಗೀತದಲ್ಲಿ ಅಷ್ಟೇನೂ ಮೋಡಿ ಮಾಡುವುದಿಲ್ಲ, ಛಾಯಗ್ರಹಣ ಚಿತ್ರದ ಮತ್ತೊಂದು ಹೈಲೆಟ್. ಇನ್ನೂ ಉಳಿದಂತೆ ಸಾಧುಕೋಕಿಲ, ಬುಲೆಟ್ ಪ್ರಕಾಶ್, ಅಥಿತಿ ಪ್ರಾತದಲ್ಲಿ ಶ್ರೀ ನಗರ ಕಿಟ್ಟಿ ಮತ್ತು ಅಂಬರೀಷ್ ಬಂದು ಹೋಗುತ್ತಾರೆ. ಇಡೀ ಚಿತ್ರದಲ್ಲಿ ಅನಗತ್ಯ ವಿಷಯಗಳು ಯಾವವು ಇಲ್ಲ, ಒಮ್ಮೆ ನೋಡಬಹುದಾದ ಸಿನಿಮಾ ಅಂದರೆ ತಪ್ಪಿಲ್ಲ.

Add Comment

Leave a Reply