Quantcast

ಒಬ್ಬರಿಗಾದರೂ ಅನಿಸಬಾರದೆ..

ಏನು ಹೇಳಬೇಕು, ಬರೆಯಬೇಕು ಗೊತ್ತಾಗುತ್ತಿಲ್ಲ; ಬರೆದರೆ ತಾನೇ ಏನು ಪ್ರಯೋಜನ ಎನಿಸುತ್ತಿದೆ.
ಇಷ್ಟು ಮಾತ್ರ ಹೇಳಬಲ್ಲೆ: ಇಂತಹ ಸಂಚಿಕೆಯನ್ನು ಮತ್ತೆಂದೂ ರೂಪಿಸದಂತಹ ಭಾರತ ನಾವು ಬದುಕಿರುವಾಗಲೇ ಸೃಷ್ಟಿಯಾಗಲಿ.

-ಪ್ರೊ ಸಿ ಎನ್ ರಾಮಚಂದ್ರನ್

ಮೆಡಿಕಲ್ ಎಥಿಕ್ಸ್ ನಂತಹ ದೊಡ್ಡ ಮಾತುಗಳ ಸರಪಳಿ ಯಾರನ್ನು ಬೇಕಾದರೂ ಬಂಧಿಸೀತು… ಕಳೆದ 15 ವರ್ಷಗಳಿಂದ ಆಸ್ಪತ್ರೆ ಸುತ್ತುವ ಪತ್ರಕರ್ತನಾಗಿ, ಆರೋಗ್ಯ ಆರೈಕೆ ಹೇಗೆ ನಡೆಯುತ್ತದೆಂಬುದನ್ನು ಅಷ್ಟಿಷ್ಟು ಅರ್ಥ ಮಾಡಿಕೊಂಡು ಕೂಡ ಎರಡು ವರ್ಷಗಳ ಹಿಂದೆ ಅನುಭವಿಸಿದ “ಐಸಿಯು” ಸನ್ನಿವೇಶದಲ್ಲಿ ನಿಸ್ಸಹಾಯಕನಾಗಿ ನಿಲ್ಲಬೇಕಾಗಿಬಂದಿತ್ತು. ಮಾತೆತ್ತಿದರೆ ನಾನು “ಜೀವ ವಿರೋಧಿ” ಅನ್ನಿಸಿಕೊಳ್ಳಬೇಕಿತ್ತು; ಆರೋಗ್ಯ ವ್ಯವಸ್ಥೆ “ಜೀವದಾನಿ” ಆಗಿ ನಿಂತುಬಿಟ್ಟಿತ್ತು!

ರಾಜಾರಾಂ ತಲ್ಲೂರು 

heನಮ್ಮಲ್ಲಿ ಸಂವೇದನೆಯೇ ಉಳಿದಿಲ್ಲ. ದೇವರಿಗೆ ಮುಗಿಯೋ ಕೈಗಳಿಗಿಂತ ಸಹಾಯದ ಅವಶ್ಯಕತೆ ಇರುವವರಿಗೆ ಸಹಾಯ ಮಾಡುವ ಕೈಗಳು ಶ್ರೇಷ್ಠ ಎನ್ನೋ ಮಾತನ್ನು ಪಾಲಿಸುವವರೆಷ್ಟು ಜನರು? ತುಂಬ ಮಾರ್ಮಿಕವಾಗಿ ಬರೆದಿದ್ದೀರಿ. ಆಗಾಗ ಇಂತಹ ಬರಹಗಳು ಬೇಕು, ಕೆಲವರಾದರೂ ಬದಲಾಗಬಹುದು.

ಮೇಲಿನಿಂದ ಕೆಳಗಿನವರೆಗೆ ಎಲ್ಲರೂ ತಿನ್ನುವವರೇ, ನಾವೇಕೆ ತಿನ್ನಬಾರದೆಂಬ ಯೋಚನೆ ಸರಕಾರೀ ಅಂಬ್ಯುಲನ್ಸನವರದು. ಅವರೂ ದುಡ್ಡು ಪೀಕಿ ಕೆಲಸಕ್ಕೆ ಸೇರಿರುತ್ತಾರೆ, ಅಲ್ವೇ? ಬಲು ಹಿಂದೆ ರಮಜಾನ್‍ ದರ್ಗಾ ವಿದ್ಯಾರ್ಥಿಯಾಗಿದ್ದಾಗ ಸೈನಸ್‍ ಆಪರೇಷನ್ನಿಗೆ ಕೆ.ಎಂ.ಸಿ. ಹುಬ್ಬಳ್ಳಿ ಸೇರಿದ್ದರು. ಆಗ ಅಲ್ಲೇ ಅಲೆಯುವಾಗ ಶವಾಗಾರದ ಸೆಂಟ್ರಿಯೊಬ್ಬ ಶವವನ್ನು ವಾರಸುದಾರರಿಗೆ ಕೊಟ್ಟು ‘ಖುಷಿ ಕೊಡಿ ಸರ್‍’ ಎಂದು ಕೇಳಿದ್ದನಂತೆ. ಶವ ಕೊಡಲೂ ‘ಖುಷಿ’ ಕೊಡಬೇಕಾದ ಯುಗವಿದು

ಡಾ ಪ್ರಭಾಕರ್ ನಿಂಬರಗಿ 

ನಿನ್ಮೆಯಿಂದ ಈ ಸಂಗತಿ ಓದಿ, ನೋಡೊ ಮನಸ್ಸು ಕಲಕಿಹೋಯಿತು..
ಆಸ್ಪತ್ರೆಗಳು ನರಕವಾಗುತ್ತಿವೆ, ನಿರ್ದಯತೆಯ , ಹಣ ಮಾಡುವುದೇ ಏಕೈಕ ಗುರಿಯಾಗಿರುವ ಅತಿಸ್ವಾರ್ಥ ತುಂಬಿದ ಕೇಂದ್ರಗಳಾಗಿದ್ದು ಮಂದಿಯನ್ನು ಶೋಷಿಸುತ್ತಿವೆ..
ಆತನ ಸ್ಥಿತಿಗತಿಯ ಬಗ್ಗೆ ಕೊಂಚವೂ ಮರುಕವಿಲ್ಲದ ಈ ಅಮಾನುಷ ವರ್ತನೆಗೆ ಧಿಕ್ಕಾರ..
ಒಬ್ಬರಾದರೂ ಕನಿಕರ ತೋರಿಸದೆ ಹೋದದ್ದು ದುರಂತ. ಜನರಲ್ಲಿ ಮುಂದಾದರೂ ಮನುಷ್ಯ ಸಂವೇದನೆ ಎಚ್ಚರವಾಗಲಿ.

ಎಸ್ ಪಿ ವಿಜಯಲಕ್ಷ್ಮಿ 

ಈ. ಆಟೊ ಡ್ರೈವರ್ ಕಷ್ಟ ಕ್ಕೆಸಹಾನುಭೂತಿ ಇದೆ..ಹಾಗೇ ಬೆಂಗಳೂರಿನ ಆಸ್ಪತ್ರೆ ಗಳಲ್ಲಿ ಸುಳ್ಳು ಚಿಕಿತ್ಸೆ ಯ ಹೆಸರಿನಲ್ಲಿ ಮುಗ್ಧ ರ ಶೋಷಣೆ ನಡೆಯಿತ್ತಿದೆ ..ಆದರೆ ಬೆಂಗಳೂರಿನ ಹೊರಗೆ ಜಿಲ್ಲಾ ಕೆಂದ್ರಗಳೂ ತಾಲ್ಲೂಕು ಕೇಂದ್ರ ಗಳಲ್ಲೂ ಜೀವನೋಪಾಯದ ಉದ್ಯೋಗಗಳಿವೆ…ಆದರೆ ಯಾರಿಗೂ ಬೇಡ .

???

ಜೀವ ಹೈರಾಣಾಗುವುದು
ಆಸ್ಪತ್ರೆಗೆ ಬಿಲ್ಲು ಕಟ್ಟುವಲ್ಲಿ
ಮರೆತೆ ಹೋಗುವುದೆ ದುಃಖ
ಸಾವಿನ ನಂತರದ ಯೋಚನೆಯಲ್ಲಿ
ಕೈ ಖಾಲಿ ಮನಸ್ಸು ಖಾಲಿ
ದೇಹದ ಚೈತನ್ಯವೆ ಉಡುಗಿ
ಬದುಕಿದ್ದವರು ಜೀವಂತ ಶವ
ಶವ ಹೊತ್ತು ನಡೆವಾಗ
ನೋಡುಗರ ಕಣ್ಣು ಸುತ್ತ
ಒಬ್ಬರಿಗಾದರೂ ಅನಿಸಬಾರದೆ
ನೀಡಬೇಕು ಸಹಾಯ ಹಸ್ತ
ಹೆಗಲಿಗೆ ಹೆಗಲು ಕೊಟ್ಟಿದ್ದರೆ
ಸಿಗುತ್ತಿತ್ತು ಆತ್ಮಕ್ಕೆ ಶಾಂತಿ
ಮನ ಕಲಕುವ ನಡೆ
ಇನ್ನೆಂದೂ ಯಾರ ಕಣ್ಣೂ
ನೋಡದಿರಲಿ!

-ಗೀತಾ ಹೆಗ್ಡೆ ಕಲ್ಮನೆ 

ನಮ್ಮ ಭ್ರಷ್ಟಾಚಾರದ ಬಗ್ಗೆ ಎಷ್ಟು ಬರೆದರೂ ಕಡಿಮೆ. ಒಂದು ಗಾದೆ ನೆನಪಿಡಿ, ಯಥಾ ರಾಜಾ ತಥಾ ಪ್ರಜಾ. ಗಾದೆ ಅನುಭಾವದ ಮಾತು. ಮೊದಲು ರಾಜ, ರಾಜ್ಯಾಡಳಿತ ಸರಿಯಾದರೆ ಎಲ್ಲ ಸರಿಯಾಗುತ್ತೆ. ಭಾರತ ದೇಶ ಇಂದೂ ಸಂಪತಭರಿತ. ಆದರೆ ಎಲ್ಲಿಯ ವರೆಗೆ ಸ್ವಿಸ್ ಬ್ಯಾಂಕ ಇರುತ್ತೋ ಅಲ್ಲಿಯವರೆಗೆ ಇಲ್ಲಿ ನಮ್ಮ ಉಪಯೋಗದ ದುಡ್ಡು ಅಲ್ಲಿ ಸೇರಿ ನಾವು ಹೆಣ ಹೊರುವುದು ತಪ್ಪಲ್ಲ. ಅಂದಿನ ರಾಜರಿಗೆ ಬದ್ಧತೆ ಇತ್ತು. ಇವತ್ತು? ಯೋಚನೆ ಮಾಡೊಣ.

-ಮಲ್ಲಪ್ಪ 

Add Comment

Leave a Reply