Quantcast

ಏನಾದರೂ ಅಮ್ಮನಿಗೆ ಮಗನೇ..

‘ಊರಿಗೆ ಒಡೆಯನಾದರೂ ಅಮ್ಮನಿಗೆ ಮಗನೇ’.. ಎನ್ನುವ ಮಾತು ಮತ್ತೆ ನಿಜವಾದದ್ದು ನಿನ್ನೆ..

ಅದು ಆತ್ಮೀಯರೆಲ್ಲರೂ ಸೇರಿದ್ದ ಹೃದಯಸ್ಪರ್ಶಿ ಸಮಾರಂಭ. ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ ಗಣ್ಯರೆಲ್ಲರೂ ಅಲ್ಲಿದ್ದರು

ಬಿ ಸುರೇಶ ಕನಸಿನ ‘ನಾಕುತಂತಿ ಪ್ರಕಾಶನ’ ದ ಹೊಸ ಕೃತಿಯ ಬಿಡುಗಡೆ ಸಮಾರಂಭ

ಇದೇ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಪಿ ಚಂದ್ರಿಕಾ ಅವರ ‘ಚಿಟ್ಟಿ’ ಕಾದಂಬರಿ ಲೋಕಾರ್ಪಣೆಗೊಳ್ಳಲಿತ್ತು

ಕಾರ್ಯಕ್ರಮಕ್ಕೆ ಮುಖ್ಯರಾಗಿ ಬಂದದ್ದು ನಮ್ಮದೇ ರಂಗಭೂಮಿಯಿಂದ ನಡೆದು ಹೋದ ಹುಡುಗ ಪ್ರಕಾಶ್ ರೈ ಅಲಿಯಾಸ್ ಪ್ರಕಾಶ್ ರಾಜ್

ದೇಶದ ಹತ್ತಾರು ಭಾಷೆಗಳನ್ನು ಆಕ್ರಮಿಸಿಕೊಂಡು ಒಳ್ಳೆಯ ಹೆಸರು ಮಾಡಿದ ನಟ

 

ಪುಸ್ತಕ ಬಿಡುಗಡೆ ಮಾಡಲು ಆತ ಸಭಾಂಗಣ ಪ್ರವೇಶಿಸಿದ

ಅಷ್ಟೇ,

ಅಲ್ಲಿ ಎಲ್ಲರಿಗೂ ತಾಯಿ ವಾತ್ಸಲ್ಯ ನೀಡಿದ ವಿಜಯಮ್ಮ ಕಂಡರು

ವಿಜಯಮ್ಮ ಎಂದರೆ ಹಾಗೇ..

ನಿಷ್ಕಲ್ಮಶ ಮನಸ್ಸಿನಿಂದ ಪ್ರತಿಯೊಬ್ಬರಿಗೂ ಚಿಮ್ಮು ಹಲಗೆ ನೀಡಿದವರು.

ಅಷ್ಟೇ ಅಲ್ಲ, ಕಿವಿಮಾತು ಹೇಳಿದವರು. ಅಷ್ಟೇ ಅಲ್ಲ, ಕೈ ತುತ್ತನ್ನೂ ನೀಡಿದವರು

ನಮ್ಮ ಹುಡುಗರು ಎಂದು ಹೆಮ್ಮೆಯಿಂದ ಒಂದು ರಕ್ಷಣಾ ಕೋಟೆಯಾಗಿ ನಿಂತು ಕಾಪಾಡಿದವರು

 

ಈ ಎಲ್ಲಾ ಪ್ರೀತಿಯನ್ನು ಕಂಡುಂಡ ಪ್ರಕಾಶ್ ರೈ ಒಳಗೆ ಬರುತ್ತಿದ್ದಂತೆ ಅಮ್ಮನನ್ನು ಕಂಡ

ತಕ್ಷಣವೇ ನಿನಗೆ ಮಣಿವೆ ಎನ್ನುವಂತೆ ಕಾಲ ಬಳಿ ಕುಳಿತೇ ಬಿಟ್ಟ

ಅಮ್ಮನ ಜೊತೆ ಎರಡು ಮಾತಾಡಿ, ಕೆನ್ನೆ ಹಿಂಡಿಸಿಕೊಂಡ ನಂತರವೇ ಎದ್ದಿದ್ದು

ಹಾಗೆ ಪ್ರಕಾಶ್ ರೈ ಮತ್ತೆ ಇನ್ನೊಬ್ಬರ ಆಶೀರ್ವಾದ ಪಡೆದುಕೊಂಡ- ಅದು ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರಿಂದ

vijayamm and prakash rai

HSV prakash rai1

One Response

  1. J.S.Ganjekar
    August 30, 2016

Add Comment

Leave a Reply