Quantcast

ಜನ ಜಾಗೃತಿಗಾಗಿ ಪ್ರವಾಸ ಕೈಗೊಳ್ಳಲಿರುವ ನಟ ಪವನ್ ಕಲ್ಯಾಣ

ನಟ ಪವನ್ ಕಲ್ಯಾಣ ಮತ್ತೇ ಸುದ್ಧಿಯಲ್ಲಿದ್ಧಾರೆ. ಆಂಧ್ರಪ್ರದೇಶದ ಎಲ್ಲಾ ಜಿಲ್ಲೆಗಳ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರವಾಸ ಮಾಡುವುದಾಗಿ ಘೋಷಿಸಿದ್ದಾರೆ. ಸೆಪ್ಪಂಬರ್ 9 ರಂದು ಕಾಕಿನಾಡ ನಗರದಲ್ಲಿ ತಮ್ಮ ಮುಂದಿನ ಬೃಹತ್ ಸಾರ್ವಜನಿಕ ಸಭೆಯನ್ನು ನಡೆಸುವುದಾಗಿ ಹೇಳಿದ್ದಾರೆ. ಈ ಮೂಲಕ ಸಂಪೂರ್ಣವಾಗಿ ರಾಜಕೀಯವಾಗಿ ಕಾರ್ಯ ಪ್ರವೃತರಾಗಲಿದ್ದಾರೆ.

gopalaಗೋಪಾಲ ಗೋಪಾಲ ಚಿತ್ರದಲ್ಲಿ ನಟಿಸುತ್ತಿರುವ ಪವನ್ ಕಲ್ಯಾಣ ಚಿತ್ರದ ಶೂಟಿಂಗ್ ಇನ್ನೆರಡು ದಿನಗಳ ಕಾಲ ಮುಂದುಡಿದ್ದಾರೆ. ಚಿತ್ರದ ನಿರ್ದೇಶಕ ಡಾಲಿ, ಶರತ್ ಮರಾರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ಧಾರೆ.

ಇದ್ದಕ್ಕಿದಂತೆ ಸಕ್ರೀಯವಾಗಿ ರಾಜಕಾರಣಕ್ಕೆ ಗಮನ ನೀಡುವ ಮೂಲಕ ಗೋಪಾಲ ಗೋಪಾಲ ಚಿತ್ರದ ಶೂಟಿಂಗ್ ಸೆಟ್ ಗೂ ಭೇಟಿ ನೀಡದಿರುವುದು ನಿರ್ದೇಶಕ ಮತ್ತು ನಿರ್ಮಾಪಕರಲ್ಲಿ ತ್ರೀವವಾದ ಬೇಸರವನ್ನು ಮೂಡಿಸಿದೆ. ಆದರೆ ನಿರ್ದೇಶಕರು ನಾಯಕ ಮತ್ತು ನಾಯಕಿ ದೃಶ್ಯಗಳನ್ನು ಚಿತ್ರೀಕರಿಸಬೇಕೆಂದು ತಯಾರಿ ಮಾಡಿಕೊಂಡಿದ್ದರು. ಆದರೆ ನಟ ಪವನ್ ಕಲ್ಯಾಣ ಮಾತ್ರ ಚಿತ್ರದ ಶೂಟಿಂಗ್ ನತ್ತ  ಗಮನ ಹರಿಸಲಿಲ್ಲ.

Add Comment

Leave a Reply