Quantcast

ಮಿ. ಎಲ್.ಎಲ್.ಬಿ ಯಲ್ಲಿ ಶಿಶಿರಾ-ಮೋನಿಕಾ

ಈ ಮೊದಲು ತಿಮ್ಮರಾಯ, ಗುಣವಂತ, ಬದ್ರಿ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ರಘುವರ್ಧನ್ ಬಹಳ ದಿನಗಳ ಗ್ಯಾಪ್ ನಂತರ ಇದೀಗ ಮತ್ತೊಂದು ಚಿತ್ರದ ಮೂಲಕ ಗಾಂಧಿನಗರಕ್ಕೆ ಎಂಟ್ರಿಯಾಗುತ್ತಿದ್ದಾರೆ. ಮಿ. ಎಲ್. ಎಲ್. ಬಿ ಎಂಬ ಹೆಸರಿನ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಒಬ್ಬ ವಿಶಿಷ್ಟವಾದ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯಾಗಿ ಈ ಚಿತ್ರದ ನಾಯಕ ಶಿಶಿರ ಕಾಣಿಸಿಕೊಳ್ಳಲಿದ್ದಾರೆ, ಒರಟು, ಧಿಮಾಕು, ಗಾಂಚಾಲಿಯಂತಹ ಎಲ್ಲಾ ವಿಶೇಷ ಗುಣಗಳನ್ನು ನಾಯಕ ಹೊಂದಿರುತ್ತಾನೆ. ಆದರೂ ಕೂಡ ಸ್ವಾಭಿಮಾನಿ ಹಾಗೂ ಹಾಸ್ಯಗಾರನಾಗಿರುತ್ತಾನೆ. ಈ ತರಹದ ವಿಶೇಷವಾದಂತಹ ಕಥಾನಕವನ್ನು ಇಟ್ಟುಕೊಂಡು ರಘುವರ್ದನ್ ಅವರು ಈ ಚಿತ್ರಕ್ಕೆ ಆಕ್ಷ್ಯನ್ ಕಟ್ ಹೇಳುತ್ತಿದ್ದಾರೆ.

Shishirಈಗಾಗಲೇ ಮಂಜು ಚರಣ್ ರವರ ಸಂಗೀತ ನಿರ್ದೇಶನದಲ್ಲಿ ಐದು ಹಾಡುಗಳಿಗೆ ಧ್ವನಿ ಮುದ್ರಣ ಕೂಡ ಮುಗಿದಿದೆ. ಗೌಸ್ಫೀರ್, ಮಂಜು ಚರಣ್ ಸಾಹಿತ್ಯ ರಚಿಸಿದ್ದಾರೆ ಬರುವ 14 ರಂದು ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಮೈಸೂರು, ಮದ್ದೂರು, ಮಡಿಕೇರಿ ಹಾಗೂ ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಆರ್.ವಿ ಕ್ರೀಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗಲಿದ್ದು ಚಿತ್ರಕ್ಕೆ ಸುರೇಶ್ ಬಾಬು ಛಾಯಾಗ್ರಹಣ, ಎಂ. ಗಿರೀಶ್ ಕುಮಾರ್ ಸಂಕಲನವಿದ್ದು, ಶಿಶಿರ ಹಾಗೂ ಮೋನಿಕಾ, ನಾಯಕ, ನಾಯಕಿಯಾಗಿ ಆಯ್ಕೆಯಾಗಿದ್ದು ಸುಜಯ್ ಹೆಗ್ಡೆ, ಶ್ರೀನಿವಾಸ್ ಗೌಡ, ಉಳಿದ ತಾಂತ್ರಿಕ ವರ್ಗದ ಹಾಗೂ ತಾರಾಗಣದ ಆಯ್ಕೆ ನಡೆಯುತ್ತಿದೆ.

Add Comment

Leave a Reply