Quantcast

ವಿನಯಾ ಒಕ್ಕುಂದಗೆ ಪ್ರತಿಷ್ಠಿತ ‘ನರಹಳ್ಳಿ ಪ್ರಶಸ್ತಿ’

ಪ್ರತಿಷ್ಠಿತ ‘ನರಹಳ್ಳಿ ಪ್ರಶಸ್ತಿ’ಯನ್ನು ಘೋಷಿಸಲಾಗಿದ್ದು ಖ್ಯಾತ ಕವಯತ್ರಿ, ಅಂಕಣಕಾರರೂ ಆಗಿರುವ ಡಾ ವಿನಯಾ ಒಕ್ಕುಂದ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

narahalliಸೆಪ್ಟೆಂಬರ್ ೧೧ ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಡಾ ನರಹಳ್ಳಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ ಆನಂದರಾಮ ಉಪಾಧ್ಯ ಅವರು ತಿಳಿಸಿದ್ದಾರೆ. ಪ್ರಶಸ್ತಿ ೧೦ ಸಾವಿರ ರೂ ನಗದು ಹಾಗೂ ಫಲಕವನ್ನು ಹೊಂದಿದೆ.

ಖ್ಯಾತ ವಿಮರ್ಶಕ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಡಾ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ತಮಗೆ ಸಂದ ಪ್ರಶಸ್ತಿ ಹಾಗೂ ಗೌರವಗಳ ಮೊತ್ತದಿಂದ ಹುಟ್ಟು ಹಾಕಿದ ಸಂಸ್ಥೆ ಇದು.

ಉತ್ತರ ಕನ್ನಡ ಜಿಲ್ಲೆಯ ಡಾ ವಿನಯಾ ವಕ್ಕುಂದ ಅವರು ‘ಬಾಯಾರಿಕೆ’ ‘ನೂರು ಗೋರಿಯ ದೀಪ’ ‘ಹಸಬಿ’ ಕವನ ಸಂಕಲನಗಳ ಮೂಲಕ ಹೆಸರು ಮಾಡಿದ್ದಾರೆ. ‘ಊರ ಒಳಗಣ ಬಯಲು’ ‘ಉರಿ’ ಇವರ ಕಥಾ ಸಂಕಲನಗಳು. ‘ಕನ್ನಡಪ್ರಭ’ದ ಅಂಕಣಕಾರರೂ ಕೂಡಾ.

ಪು ತಿನ ಕಾವ್ಯ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ, ಎಚ್ ವಿ ಸಾವಿತ್ರಮ್ಮ, ಛಂದ ಪುಸ್ತಕ ಲಂಕೇಶ್ ಕಥಾ ಬಹುಮಾನ ಸೇರಿದಂತೆ ಹಲವು ಪ್ರಶಸ್ತಿಗೆ ವಕ್ಕುಂದ ಪಾತ್ರರಾಗಿದ್ದಾರೆ.

ಡಾ ಎಚ್ ಎಸ್ ರಾಘವೇಂದ್ರ ರಾವ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದು ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

 

3 Comments

  1. ಕಲಿಗಣನಾಥ ಗುಡದೂರು
    August 30, 2016
  2. ಶ್ರೀಧರ ನಾಯಕ
    August 29, 2016
  3. Anonymous
    August 29, 2016

Add Comment

Leave a Reply