Quantcast

ಮತ್ತೆ ‘ಗುಮ್ಮ ಬಂದ ಗುಮ್ಮ’

ರಂಗ ಶಂಕರದ ಬಹು ಪ್ರಖ್ಯಾತ ನಾಟಕ ‘ಗುಮ್ಮ ಬಂದ ಗುಮ್ಮ’ ಮತ್ತೆ ಪ್ರದರ್ಶನಕೆ ಸಜ್ಜಾಗಿದೆ. 2006 ರಲ್ಲಿ ಮೊದಲ ಪ್ರಯೋಗ ಕಂಡ ಈ ನಾಟಕ ಸತತ ೧೦ ವರ್ಷ ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಅಂದಿನಿಂದ ಇಂದಿನ ವರೆಗೂ, ಬಹಳಷ್ಟು ಬಾರಿ ಈ ನಾಟಕ ಮರು ನಿರ್ಮಿಸಲ್ಪಟ್ಟಿದೆ.

ಮೂಲ ಜರ್ಮನ್ ನಾಟಕ ಮ್ಯಾಕ್ಸ್ ಅಂಡ್ ಮಿಲಿ ಯ ಆಧಾರಿತ ‘ಗುಮ್ಮ ಬಂದ ಗುಮ್ಮ’, ಮಕ್ಕಳ ಮನಸ್ಥಿತಿಯನ್ನು ಬಿಂಬಿಸುತ್ತದೆ, ಮಕ್ಕಳು ಹೇಗೆ ಭಾಷೆ, ಬಣ್ಣ, ಮೇಲು ಕೀಳಿನ ಹಂಗಿಲ್ಲದೇ, ಮತ್ತೊಬ್ಬರೊಂದಿಗೆ ಬೆರೆಯುತ್ತಾರೆಂಬುದೇ ಈ ನಾಟಕದ ತಿರುಳು.

ಮಕ್ಕಳನ್ನು ಮಾತ್ರವಲ್ಲದೇ, ಎಲ್ಲ ವಯಸ್ಸಿನ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ
ನಿರ್ದೇಶನ : ಸುರೇಂದ್ರನಾಥ್ ಎಸ್.
ಸ್ಥಳ : ರಂಗ ಶಂಕರ
ದಿನಾಂಕ ಮತ್ತು ಸಮಯ : ಆಗಸ್ಟ್ 30 , ಸಂಜೆ 7:30 ಕ್ಕೆ
ಟಿಕೆಟ್ ದರ : ರೂ. 100/-

gumma1

Add Comment

Leave a Reply

%d bloggers like this: