Quantcast

ಡೈನಾಮಿಕ ದೇವರಾಜ್ ಎರಡನೇ ಪುತ್ರ: ಬೆಳ್ಳಿ ತೆರೆಗೆ ಎಂಟ್ರೀ

ಸ್ಟಾರ್ ನಟ-ನಟಿಯರ ಮಕ್ಕಳು ಚಿತ್ರರಂಗಕ್ಕೆ ಬರುತ್ತಿರುವುದು ಹೊಸ ವಿಷಯವಲ್ಲ. ಆದರೆ ಕೆಲವರಿಗೆ ಮೊದಲ ಸಿನಿಮಾ ಬ್ರೇಕ್ ಕೊಟ್ಟರೆ ಇನ್ನೂ ಕೆಲವರಿಗೆ ಹೀಗೆ ಬಂದು ಹಾಗೇ ಹೋದ ಅನುಭವ ಪಡೆದವರೂ ಹಲವರು. ಆದರೆ ಈಗ ಡೈನಾಮಿಕ ದೇವರಾಜ್ ಅವರ ಎರಡನೇ ಮಗ ಪ್ರಣಮ್ ದೇವರಾಜ್ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

shivarajkumar1ಇವರು ಬೇರಾರು ಅಲ್ಲ ಪ್ರಜ್ವಲ್ ದೇವರಾಜ್ ತಮ್ಮ. ಪ್ರಣಮ್ ಬೆಳ್ಳಿ ತೆರೆಗೆ ಕಾಲಿಡಲು ಸಜ್ಜಾಗಿದ್ದಾರೆ. ಭಾನುವಾರ ಆಗಸ್ಟ್ 28 ರಂದು ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲವಾದ್ದರಿಂದ, ಸದ್ಯಕ್ಕೆ ಪ್ರೊಡಕ್ಷನ್ ನಂ.1 ಎಂದು ಹೆಸರಿಡಲಾಗಿದೆ. ತೆಲುಗು ಸಿನಿಮಾ ನಿರ್ದೇಶಕ ಶ್ರೀಮನ್ ವೆಮುಲ ಅವರು ಪ್ರಣಮ್ ಗೆ ಆಕ್ಷನ್-ಕಟ್ ಹೇಳಲಿದ್ದು, ನಿರ್ಮಾಪಕರಾದ ಸಂಪತ್ ಕುಮಾರ್ ಮತ್ತು ಜಿ.ಶ್ರೀಧರ್ ಅವರು ಹಯಗ್ರೀವ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಲಿದ್ದಾರೆ.

ಛಾಯಾಗ್ರಾಹಕ ರಾಮಿರೆಡ್ಡಿ ಅವರು ಕ್ಯಾಮೆರಾ ಕೈ ಚಳಕ ತೋರಲಿದ್ದು, ಸಾಗರ್ ಮಹತಿ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಸೆಂಚುರಿ ಸ್ಟಾರ್ ಶಿವಣ್ಣ ಈ ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಶುಭ ಹಾರೈಸಿದರು.

Add Comment

Leave a Reply