Quantcast

ಅವಳಲ್ಲೇ ನಾನಿದ್ದೇನೆ..

ಅಶ್ವಿನಿ ಎಂ ಶ್ರೀಪಾದ್ 

e526da9a24368b39f2f08a02c306a3a6ಮೂರು ದಿನಗಳ ಹಿಂದಷ್ಟೇ
ಹಾಕಿದ ಟಾರ್ ರಸ್ತೆ ಮೇಲೆ ,
ರಾತ್ರಿಯಲ್ಲಿ ಹೊಳೆವ ನಕ್ಷತ್ರದಂತೆ
ಹರಡಿ ಬಿದ್ದಿತ್ತು ಪಾರಿಜಾತ !

ಆಗೊಮ್ಮೆ ಈಗೊಮ್ಮೆ ಬೀಸುವ ಗಾಳಿಯಲ್ಲಿ
ಗಂಧ ಸೂಸಿ ಕೃಷ್ಣನ ಕರೆದಂತಿತ್ತು !!
ಸೊಂಟಕ್ಕೆ ಸೀರೆ ಸಿಗಿಸಿ ಬಂದ ,
ಪೌರಕಾರ್ಮಿಕಳೊಬ್ಬಳು,
ಮುಲಾಜಿಲ್ಲದೆ ಗೂಡಿಸಿ
ರಸ್ತೆ ಅಮಾವಾಸ್ಯೆ ಇರುಳಿನಷ್ಟೇ ಕಪ್ಪಾಗಿಸಿದಳು ,

ಕೆಳಕ್ಕೆ ಬಿದ್ದ ಹೂ ಚೀರಿದಂತಾಯಿತು
ಪ್ರೀತಿಯ ಹೂ ನಲುಗಿತ್ತೆಂದು ಕೃಷ್ಣ ಕೋಪಗೊಂಡನೆ ?
ಕೇಳಿಯೇ ಬಿಟ್ಟೆ ….

ಕೃಷ್ಣನೆಂದ ,
ಕಸ ಗುಡಿಸುವುದವಳ ಧರ್ಮ ,
ಗುಡಿಸುವ ನಿಷ್ಠೆಯಲ್ಲಿ, ಕಾಯಕದಲ್ಲಿ…
ಅಷ್ಟೇ ಯಾಕೆ?
ಅವಳಲ್ಲಿ ನಾನಿದ್ದೇನೆ ಎಂದ ಕೃಷ್ಣ !!

One Response

  1. ashwini anish
    September 2, 2016

Add Comment

Leave a Reply