Quantcast

ಐತಿಹಾಸಿಕ ಚಿತ್ರ ಬಬ್ಲುಷಾ

ಚಾರಿತ್ರಿಕ ಹಿನ್ನಲೆ ಇರುವ ವೆಂಕಟ್ ಭಾರದ್ವಾಜ್ ಅವರ  ಚಿತ್ರ ಇದೆ ಶುಕ್ರವಾರ ವೀಕ್ಷಣೆಗೆ ಸಜ್ಜಾಗಿದೆ. ನಿರ್ದೇಶಕ ವೆಂಕಟ್ ಭಾರದ್ವಾಜ್ ಅಮೃತ ಫಿಲ್ಮ್ ಸೆಂಟರ್ ಅಡಿಯಲ್ಲಿ ತಯಾರಿಸಿರುವ ಈ ಚಿತ್ರದ ನಿರ್ಮಾಪಕರು ಹಿರಿಯ ಕನ್ನಡ ಸಿನಿಮಾಗಳ ನಿರ್ದೇಶಕ ಹಾಗೂ ಸಾಹಿತಿ ಸಿ ವಿ ಶಿವಶಂಕರ್.

BABLUSHA-HARSHARJUN-MRUDULABASKER55 ವರ್ಷಗಳ ಹಿಂದಿನ ಇತಿಹಾಸವನ್ನು ತೆರೆಯ ಮೇಲೆ ತಂದಿರುವ ಬಬ್ಲುಷಾ ಸಿನಿಮಾ ವಿಜಯನಗರ ಸಾಮ್ರಾಜ್ಯವನ್ನು ನೆನಪಿಗೆ ತರುತ್ತದೆ. ಈ ಚಿತ್ರವನ್ನು ಮಳವಳ್ಳಿ, ಕನಕಪುರ, ಮಲ್ಲಿನಾಥಪುರ, ರಾಮನಗರ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಮದನ್ ಹಾಗೂ ಹರಿಣಿ ಅವರ ನೃತ್ಯ ಸಂಯೋಜನೆ ಈ ಚಿತ್ರದ ವಿಶೇಷತೆಗಳಲ್ಲಿ  ಒಂದು.

BABLUSHA-MANISHETTY-HARSHARJUNಪ್ರತಿಬೆಗಳನ್ನು ವೆಂಕಟ್ ಭಾರದ್ವಾಜ್ ಬಿಜಾಪುರ ಹಾಗೂ ಅನೇಕ ಸ್ಥಳಗಳಿಂದ ಆಯ್ಕೆ ಮಾಡಿಕೊಂಡಿದ್ದಾರೆ. ಹರ್ಷಾರ್ಜುನ, ಮಣಿ ಶೆಟ್ಟಿ, ಸಿಂಚನ, ಮೃದುಲ ಭಾಸ್ಕರ್ ಅಲ್ಲದೆ ಹಿರಿಯ ಕಲಾವಿದರಾದ ಶೋಭರಾಜ್, ಅವಿನಾಶ್, ಶ್ರೀಕಾಂತ್ ಹೆಬ್ಳೀಕರ್, ಬೇಬಿ ಶಮಾ, ಶಾಂತ ನಾಗೇಂದ್ರ ಸ್ವಾಮಿ ಸಹ ತಾರಾಗಣದಲ್ಲಿ ಇದ್ದಾರೆ.
BABLUSHA-KUSTI-HARSHARJUN-MANISHETTYಸನ್ನಿ ಮಾದವನ್ ಅವರ ಸಂಗೀತ, ಅಕ್ಷಯ್ ಪಿ ರಾವ್ ಅವರ ಸಂಕಲನ, ವಿಶ್ವಜಿತ್ ಬಿ ರಾವ್ ಅವರ ಛಾಯಾಗ್ರಹಣ, ರಾಜೆ ಗೌಡ ಅವರ ವಸ್ತ್ರಲಂಕಾರ, ಮದನ್ ಹರಿಣಿ ಅವರ ನೃತ್ಯ ಇರುವ ಈ ಚಿತ್ರಕ್ಕೆ ಸಂಭಾಷಣೆ ಸಿ ವಿ ಶಿವಶಂಕರ್, ವಿನಯ್ ಶಾಸ್ತ್ರೀ ಹಾಗೂ ವೆಂಕಟ್ ಭಾರದ್ವಾಜ್ ಬರೆದಿದ್ದಾರೆ. ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರುಗಳು ತೇಹಸ್ವಿ, ಪಿ ಡಿ ಅರಸ್, ವೇಣು, ಮುರಳಿ, ಜಯಪ್ರಕಾಶ್, ಜಗದೀಶ್ ಹಾಗೂ ಡಾ ರಾಜಕಮಲ್ ಶ್ರೀಹರ್ಷ.

Add Comment

Leave a Reply