Quantcast

ತೆರೆ ಕಾಣಲಿರುವ ‘ಸೆಲ್ಫಿ’

ಇದು ಸೆಲ್ಫಿ ಯುಗ. ಅದೇ ಶೀರ್ಷಿಕೆ ಹೊತ್ತ ಕನ್ನಡ ಸಿನೆಮಾ ಸೆಲ್ಫಿ. ಈ ವಾರ ತೆರೆ ಕಾಣುತ್ತಿದೆ. ಸೆಲ್ಫಿ  ಕ್ಲಿಕ್ ಅಲ್ಲಿ ಕಿಕ್…. ಎಂಬ ಅಡಿ ಬರಹ ಇರುವ ಈ ಚಿತ್ರ ಸಾಫ್ಟ್ ವೇರ್ ಉದ್ಯೋಗಿಗಳು ರಜ ದಿನಗಳಲ್ಲಿ ಚಿತ್ರೀಕರಣ ಮಾಡಿ, ಬಿಡುಗಡೆ ಮಾಡುತ್ತಿದ್ದಾರೆ ಇದೆ ಶುಕ್ರವಾರ.

Selfi1ನವೀನ್ ಕೈಪು ವಿದೇಶದಲ್ಲಿ 1 ವರ್ಷ ಇದ್ದುಕೊಂಡು ಸ್ವಂತ ಕಥೆ ಬರೆದು, ವಸ್ತ್ರ ವಿನ್ಯಾಸ ಸಹ ಮಾಡಿರುವರು. ಫಣಿ ಕೋಟಪ್ರೋಲು ಈ ಹಾರರ್, ಮರ್ಡರ್ ಮಿಸ್ಟರೀ ಸಿನಿಮಾಕ್ಕೆ ಸಂಕಲನ, ನಿರ್ದೇಶನ ಹಾಗೂ ಛಾಯಾಗ್ರಹಣ ಮಾಡಿದ್ದಾರೆ. ಅರ್ಜುನ್ ರಾಕ್ ಅವರ ಸಂಗೀತ ಐದು ಹಾಡುಗಳಿಗೆ ಇದೆ. ತ್ರಿಲೋಕ್, ದೀಪ ಗೌಡ, ಪೂಜಾ, ಕೃಪಾಲನಿ ಹಾಗೂ ಇತರರು ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಮೈಸೂರಿ ಟಾಕೀಸ್, ಜ್ಯಾಕ್ ಮಂಜುನಾಥ್ ಅವರು ವಿತರಣೆ ಹಕ್ಕನ್ನು ಹೊಂದಿದ್ದಾರೆ.

Add Comment

Leave a Reply