Quantcast

‘ಪ್ರೇಮ ಗೀಮ ಜಾನೆ ದೊ’

ಅಂದಿನ ಜನಪ್ರಿಯ ಕನ್ನಡ ಚಿತ್ರ ಬಣ್ಣದ ಗೆಜ್ಜೆ ಹಾಡಿನ ಸಾಲು ‘ಪ್ರೇಮ ಗೀಮಾ ಜಾನೆ ದೊ’ ಈಗ ಚಲನಚಿತ್ರ ಶೀರ್ಷಿಕೆ ಆಗಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಈ ವಾರ ತೆರೆಗೆ ಬರುತ್ತಿದೆ. ಹೊರೈಜಾನ್ ಫಿಲ್ಮ್ಸ್ಅಡಿಯಲ್ಲಿ ನಿರ್ಮಾಣವಾದ ಚಿತ್ರ.

PMJD1ಇದು ಕೆಂಜ ಚೇತನ್ ಕುಮಾರ್ ಅವರ ಮೊದಲ ಪ್ರಯತ್ನ. ಕಥೆ, ಚಿತ್ರಕಥೆ, ನಿರ್ದೇಶನ ಮಾಡಿರುವ ಇವರು 9 ವರ್ಷಗಳ ಕಾಲ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ನಿರ್ದೇಶಕರ ಪ್ರಕಾರ ಯುವಕರ ಜೀವನದಲ್ಲಿ ನಾಲ್ಕು ಹಂತಗಳು. ಅದರಲ್ಲಿ ಒಂದು ಹಂತವನ್ನು ಮಾತ್ರ ಈ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ಈ ಚಿತ್ರಕ್ಕಾಗಿ 27 ಮಂದಿ ಹಣ ಹೂಡಿದ್ದಾರೆ.

C005_C067_1031YH

ರಾಜ್ಯ ಪ್ರಶಸ್ತಿ ವಿಜೇತ ಪೂರ್ಣಚಂದ್ರ ತೇಜಸ್ವಿ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ, ರುದ್ರಮುನಿ ಅವರು ಛಾಯಾಗ್ರಹಣ ಮಾಡಿದ್ದಾರೆ. ವಿಶ್ವ ಅವರ ಸಂಕಲನ, ಕೌರವ ವೆಂಕಟೇಶ್ ಅವರ ಸಾಹಸ ಈ ಚಿತ್ರಕ್ಕಿದೆ. ಗೌತಮ್, ಶ್ರುತಿ ತಿಮ್ಮಯ್ಯ, ಪಲ್ಲವಿ ಗೌಡ, ಶೀತಲ್ ಶೆಟ್ಟಿ, ರಮೇಶ್ ಭಟ್, ಪ್ರಶಾಂತ್ ಸಿದ್ದಿ, ಸುಧಾಕರ್, ಕಿಷನ್ ಸಿಂಗ್, ಸಂಗೀತ, ಮನದೀಪ್ ರಾಯ್, ಅನಂತ ವೇಲು ಹಾಗೂ ಇನ್ನಿತರರು ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ.

Add Comment

Leave a Reply