Quantcast

ಇಂದಿನಿಂದ ‘ನೀರ್ ದೋಸೆ’ ಜಗ್ಗಿ ಹರಿದು ತಿನ್ನಬಹುದು

ಟೀಸರ್ ಮೂಲಕ ಪಡ್ಡೆಗಳಿಗೆ ಡಬಲ್ ಮೀನಿಂಗ್ ಡೈಲಾಗ್ ಗಳ ಭರ್ಜರಿ ಭೋಜನ ಮಾಡಿಸಿರುವ ಚಿತ್ರ ನೀರ್ ದೋಸೆ. ನಟಿ ಹರಿಪ್ರಿಯಾ ವೇಶ್ಯೆ ಪಾತ್ರದಲ್ಲಿ ಪುಲ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆ ಹೈಕ್ಳ  ಹೃದಯದಲ್ಲಿ ಕಿಚ್ಚು ಹಚ್ಚಿದ್ದಾಳೆ. ಹಾಟ್ ಆಗಿ ಕಾಣಿಸಿಕೊಳ್ಳುವುದಲ್ಲದೇ ಬಾಯಿಂದ ಹೊಗೆ ಕೂಡಾ ಬಿಟ್ಟಿದ್ದಾಳೆ.  ಹರಿಪ್ರಿಯಾ ಅವರು ಸೆವೆನ್ ಇಚ್ ಚಿತ್ರದ ನಟಿ ಮರ್ಲೀನ್ ಮುರ್ಲೋ ಅವರ ಹೇರ್ ಸ್ಟೈಲ್ ಮತ್ತು  ಮೈಮಾಟ ಅನುಕರಿಸಿ ಮಾಡಿದ್ದ ಫೋಟೋ ಶೂಟ್ ಚಿತ್ರದ ಬಗ್ಗೆ ಒಂದು ಹೈಪ್ ಕ್ರೀಯೇಟ್ ಮಾಡಿತ್ತು.

Ramya neerdose

ರಮ್ಯಾ ನೀರ್ ದೋಸೆಯಲ್ಲಿ ಕಾಣಿಸಿಕೊಂಡ ಭಂಗಿ

ಚಿತ್ರವು ಆರಂಭದಲ್ಲಿಯೇ ಹಲವಾರು ಸಮಸ್ಯೆಗಳನ್ನು ಎದುರಿಸಿ ಈಗ ಬಿಡುಗಡೆಗೊಂಡಿದೆ. ನಟಿ ರಮ್ಯಾ ಕಿರಿಕ್ ನಿಂದ ಚಿತ್ರಿಕರಣ ಅರ್ಧಕ್ಕೆ ನಿಂತು ಹೋಗಿತ್ತು. ನಂತರ ನಿರ್ದೇಶಕರು ರಮ್ಯಾ ಪಾತ್ರಕ್ಕೆ ನಟಿ ಹರಿಪ್ರಿಯಾ ಅವರನ್ನು ಆಯ್ಕೆ ಮಾಡಿದರು. 2012  ಜೂನ್ ನಲ್ಲಿ ನೀರ್ ದೋಸೆ ಚಿತ್ರದ ಚಿತ್ರಿಕರಣ ಪ್ರಾರಂಭವಾಗಿತ್ತು. ನಟಿ ರಮ್ಯಾ  ಮಂಡ್ಯ ಬೈ ಎಲೆಕ್ಷನ್ ನಲ್ಲಿ  ಸಂಸದೆ ಆದ ನಂತರ ಚಿತ್ರಿಕರಣಕ್ಕೆ ಬರಲಿಲ್ಲ. ಇದರಿಂದ ರಮ್ಯಾ ಮತ್ತು ಜಗ್ಗೇಶ್ ಮಧ್ಯೆ ಟ್ವೀಟರ್ ವಾರ್ ನಡೆಯಿತು. ಆ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಆದರೆ ನಿರ್ದೇಶಕರು  2015 ರಲ್ಲಿ ಹರಿಪ್ರಿಯಾ ಅವರನ್ನು ಕರೆತಂದು ಶೂಟಿಂಗ್ ಮಾಡಿ ಮುಗಿಸಿದ್ದಾರೆ.

Haripriyaನೀರ್ ದೋಸೆ ಚಿತ್ರದ ಟೀಸರ್ ನಲ್ಲಿನ ಡಬಲ್ ಮೀನಿಂಗ್ ಮಾತುಗಳನ್ನು ಕೇಳಿ ಸಿನಿರಸಿಕರು ಚಿತ್ರದ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಬಹುದು ಅಂದುಕೊಂಡಿದ್ದರು, ಆದರೆ ಚಿತ್ರದ ಯಾವ ದೃಶ್ಯಗಳಿಗೆ ಕತ್ತರಿ ಆಡಿಸದೇ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ.

Nirdoseನಿರ್ದೇಶಕ ವಿಜಯಪ್ರಸಾದ್ ಈ ಚಿತ್ರಕ್ಕೆ ಆಕ್ಷನ್ಯ್ ಕಟ್ ಹೇಳಿದ್ದಾರೆ. ಅರ್ಧಕ್ಕೆ ನಿಂತ ಚಿತ್ರವನ್ನು ಪೂರ್ತಿಯಾಗಿ ಮುಗಿಸುವುದಾಗಿ ಹೇಳಿದ ನಿರ್ದೇಶಕರು ಮಾತಿನಂತೇ ಚಿತ್ರವನ್ನು ಸಂಪೂರ್ಣವಾಗಿ ಮುಗಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಚಿತ್ರದ ಬಗ್ಗೆ ಭಾರಿ ನೀರಿಕ್ಷೆಯನ್ನು ಇಟ್ಟುಕೊಂಡಿದ್ದಾರೆ. ತಾರಾಗಣದಲ್ಲಿ ಚಿರಯೌವ್ವನೇ ಸುಮನ್ ರಂಗನಾಥ್, ದತ್ತಣ್ಣ  ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತವಿದೆ.  ಅಶು ಬೇದ್ರಾ ಅವರು ನಿರ್ಮಾಣ ಮಾಡಿದ್ದಾರೆ.

 

4 Comments

 1. Sangeeta Kalmane
  September 2, 2016
  • Avadhi
   September 2, 2016
 2. Sangeeta Kalmane
  September 2, 2016
  • Avadhi
   September 2, 2016

Add Comment

Leave a Reply