Quantcast

ಗೌರೀದುಃಖ

vidyarashmi pelatadka
ವಿದ್ಯಾರಶ್ಮಿ ಪೆಲತ್ತಡ್ಕ

sheನಗೆ ಮಲ್ಲಿಗೆಯ ಗಿಡದಲ್ಲಿ
ಹುದುಗಿದೆ ನೋವ ಮೊಗ್ಗು
ಮೆಲ್ಲಗರಳುತ್ತದೆ ಘಮ ಬೀರಿ
ಅವನ ಸುತ್ತ ಪರಿಮಳ ಹರಡಿ
ನಿಲ್ಲುವಾಗ
ಅವನೋ ತಣ್ಣೀರಡಿ ನಿಂತ ಬಂಡೆ,
ನಿಶ್ಚಲ ನಿಶಾಂತ.

ಹೇಳಿಬಿಡುವೆ ಒಮ್ಮೆ
ಆಲಿಸಿಬಿಡು ಅನ್ನುವ
ಅವಳಿಗೆ ನಿಸೂರಾಗುವ ತವಕ
ವಟವಟಿಸುತ್ತಲೇ ಇರುವಳು
ಅವನ ಮನವಿಲ್ಲಿಲ್ಲ
ಆಲಿಸಲು ಜನವಿಲ್ಲ
ಗೌರೀದುಃಖ ಶಿವನಿಗೂ ಬೇಡವಂತೆ
ಹೇಳಿ ಹೇಳಿ ಸಾಕಾಗಿ
ಕೊನೆಗೊಂದು ನಿಟ್ಟುಸಿರಿಟ್ಟು
ಎಲ್ಲ ಕಟ್ಟಿ ಅಟ್ಟಕ್ಕೆಸೆಯ
ಹೊರಡುವಾಗ
ಅದೋ ಬಂದ ಕೃಷ್ಣ…
ಸಮಯವಿದೆಯಂತೆ ಗೋಪೀಲೋಲನಿಗೆ
ಗೌರೀದುಃಖ ಆಲಿಸಲೂ!
ಶಿವನೇ, ಎಚ್ಚರೆಚ್ಚರ…

Add Comment

Leave a Reply