Quantcast

ನನ್ನ ನೆನಪಿದೆಯಾ, ನಿಮಗೆ? ನಾನು ಪ್ರೊಫೆಸರ್ ‘ಶೇಟ್’

“The professor”

ಎಂಬ ಈ ಇಂಗ್ಲಿಷ್ ಪದ್ಯವನ್ನು ಕನ್ನಡಕ್ಕೆ ಅನುವಾದಿಸಿ ಈ ಮೂಲಕ ಶಿಕ್ಷಕರ ದಿನಾಚರಣೆಯ ಈ ದಿನ ನಿಮ್ಮ ಶಿಕ್ಷಕರನ್ನು ನೆನಪಿಸಿಕೊಳ್ಳುವಂತೆ ಮಾಡುವ ಆಸೆ ನನ್ನದು.

‘ಮೇಷ್ಟ್ರ ಮುಪ್ಪು’ ಅಥವಾ ‘ ಮುಪ್ಪಿನ ಮೇಷ್ಟ್ರು’

shivakumar mavali

by Nissim Ezekiel

ಕನ್ನಡಕ್ಕೆ : ಶಿವಕುಮಾರ್ ಮಾವಲಿ

ನನ್ನ ನೆನಪಿದೆಯಾ ,ನಿಮಗೆ? ನಾನು ಪ್ರೊಫೆಸರ್ ‘ಶೇಟ್’
ಬಹು ವರ್ಷಗಳ ಹಿಂದೆ ನಿಮಗೆ ಭೂಗೋಳ ಬೋಧಿಸುತ್ತಿದ್ದೆ.
ನನಗೀಗ ನಿವ್ರತ್ತಿ ಭಾಗ್ಯ, ಚೆನ್ನಾಗಿದ್ದರೂ ನನ್ನ ಆರೋಗ್ಯ.
ನನ್ನ ಮಡದಿ ಮರಣಿಸಿ ಈಗ್ಗೆ ಕೆಲ ವರ್ಷಗಳಾಯ್ತು.
ದೇವರ ದಯೆಯಿಂದ ನನ್ನ ಮಕ್ಕಳೆಲ್ಲ
“ನೆಮ್ಮದಿಯ ನೆಲೆ” ನಿಂತಿದ್ದಾರೆ.
ಒಬ್ಬ ಮಾರುಕಟ್ಟೆ ವ್ಯವಸ್ಥಾಪಕ
ಮತ್ತೊಬ್ಬ ಬ್ಯಾಂಕ್ ವ್ಯವಸ್ಥಾಪಕ
ಹಾಂ! ಇಬ್ಬರ ಬಳಿಯೂ ಕಾರುಗಳಿವೆ.
ಉಳಿದವರು ಕೂಡ ತೀರ ಅಲ್ಲದಿದ್ದರೂ ತಕ್ಕಮಟ್ಟಿಗೆ ಇದ್ದಾರೆ.
‘ ಮನೆಗೊಬ್ಬರು ಮಾರಿ’ ಇರಲೇಬೇಕು ತಾನೆ.
ಸರಳ ಮತ್ತು ತರಳ – ಇಬ್ಬರಿಗೂ ಮದುವೆಯಾಗಿದೆ.
ಅವರ ಪತಿಮಹಾಶಯರೂ ಪರಮ ಸಭ್ಯರು.

ನನಗೆ ಬರೋಬ್ಬರಿ ಹನ್ನೊಂದು ಮೊಮ್ಮಕ್ಕಳಿದ್ದಾರೆ
ನಿಮ್ಮ ಲೆಕ್ಕವೆಷ್ಟು ಹೇಳಿ ? ಮೂರು ಮಾತ್ರ ?
ಅದೂ ಒಳ್ಳೆಯದೇ ಬಿಡಿ.
ಈಗೆಲ್ಲ ‘ ಕುಟುಂಬ ಯೋಜನೆ’ ಜಾರಿಯಲ್ಲಿರುವ ದಿನಗಳಲ್ಲವೆ?
ಈ ವಿಷಯಕ್ಕೆ ನನ್ನದೇನು ತಕರಾರು ಇಲ್ಲವಲ್ಲ,
‘ ಬದಲಾಗುವ ಕಾಲದೊಂದಿಗೆ ನಾವೂ ಬದಲಾಗಬೇಕು’
ಇಡೀ ಜಗತ್ತೇ ಬದಲಾಗುತ್ತಿದೆ. ಭಾರತವೂ ಇದರಲ್ಲಿ ಹಿಂದೆ ಬಿದ್ದಿಲ್ಲ.
ನಮ್ಮ ಪ್ರಗತಿಯ ಪ್ರಗತಿ, ಪ್ರಗತಿಪಥದಲ್ಲಿದೆ.
ಹಳೆಯ ಮೌಲ್ಯಗಳು ಹಿಂದೆ ಸರಿದು,ಹೊಸದಕ್ಕೆ ದಾರಿ ಮಾಡಿಕೊಡುತ್ತಿವೆ.
ಇವೆಲ್ಲ ‘ ಚಕ್ರಗತಿ’ ಯ ವೇಗದಲ್ಲೇ ಜರುಗುತ್ತಿವೆ.

ನಾನು ಅಪರೂಪಕ್ಕೆ , ಆಗಾಗ
ಮನೆಯಿಂದ ಹೊರಬರುತ್ತೇನೆ.
ಮುಪ್ಪು ಬಂದಾಗ ಅದು ಮಾಮೂಲು ಬಿಡಿ.
ಆದರೆ ನಿತ್ಯದ ಕೆಲ ಬಾಧೆ- ಬೇನೆಗಳ ಹೊರತುಪಡಿಸಿ
ನನ್ನ ಆರೋಗ್ಯ ಇನ್ನೂ ಚೆನ್ನಾಗಿಯೇ ಇದೆ.
ಯೌವನದಲ್ಲಿ ರೂಢಿಸಿಕೊಂಡಿದ್ದ ಕಸರತ್ತುಗಳ ಕಾರಣ
ಮಧುಮೇಹ, ರಕ್ತದೊತ್ತಡ,ಹೃದಯಬೇನೆಗಳೇನಿಲ್ಲ.

ಅಂದಹಾಗೆ ನಿಮ್ಮ ಆರೋಗ್ಯ ಹೇಗಿದೆ? ಚೆನ್ನಾಗಿದೆ ತಾನೆ?
ಈ ವರ್ಷ ನನಗೆ ಅರವತ್ತೊಂಬತ್ತಕ್ಕೆ ಬೀಳಲಿದೆ
ಹಾಗು ಶತಕದತ್ತ ಸಾಗುವ ಭರವಸೆಯಲ್ಲಿದ್ದೇನೆ.
ಮತ್ತೆ ನೀನು, ಆಗ ಸಣಕಲಾಗಿದ್ದೆ ಕಡ್ಡಿಯ ಥರ
ಈಗ ನೀನೊಬ್ಬ ತೂಕದ ವ್ಯಕ್ತಿ,ಪರಿಣಾಮಬೀರುವ ವ್ಯಕ್ತಿ.
ಹಾಗು ಅದೊಂದು ತಮಾಷೆಯ ಸಂಗತಿ.
ಅಕಸ್ಮಾತ್ ಪುನಃ ನೀವೇನಾದರೂ ಈ ಕಡೆ ಬಂದರೆ,
ದಯಮಾಡಿ ನನ್ನ ಈ ‘ ನಿಗರ್ವಿ ನಿವಾಸ’ಕ್ಕೊಮ್ಮೆ ಭೇಟಿ ಕೊಡಿ.
ಅದು ಇಲ್ಲೇ ನಿಮ್ಮ ಎದುರು ಮನೆಯ ಹಿಂಭಾಗದಲ್ಲೇ ಇದೆ.

teacher
The Professor

Remember me? I am Professor Sheth.
Once I taught you geography. Now
I am retired, though my health is good.
My wife died some years back.
By God’s grace, all my children
Are well settled in life.
One is Sales Manager,
One is Bank Manager,
Both have cars.
Other also doing well, though not so well.
Every family must have black sheep.
Sarala and Tarala are married,
Their husbands are very nice boys.
You won’t believe but I have eleven grandchildren.
How many issues you have? Three?
That is good. These are days of family planning.
I am not against. We have to change with times.
Whole world is changing. In India also
We are keeping up. Our progress is progressing.
Old values are going, new values are coming.
Everything is happening with leaps and bounds.
I am going out rarely, now and then
Only, this is price of old age
But my health is O.K. Usual aches and pains.
No diabetes, no blood pressure, no heart attack.
This is because of sound habits in youth.
How is your health keeping?
Nicely? I am happy for that.
This year I am sixty-nine
and hope to score a century.
You were so thin, like stick,
Now you are man of weight and consequence.
That is good joke.
If you are coming again this side by chance,
Visit please my humble residence also.
I am living just on opposite house’s backside.

Add Comment

Leave a Reply

%d bloggers like this: