Quantcast

ಆಧುನಿಕ ಕಾಲಘಟ್ಟದಲ್ಲೊಬ್ಬ ಸತ್ಯ ಹರಿಶ್ಚಂದ್ರ

ಗಣೇಶ ಚತುರ್ಥಿಯ ಹಬ್ಬದಂದು ಕನ್ನಡದ ಹೊಸ ಚಿತ್ರ ‘ಸತ್ಯ ಹರಿಶ್ಚಂದ್ರ’ ಮೂಹರ್ತ ನೆರವೇರಿಸಲಾಯಿತು. ಹರಿಶ್ಚಂದ್ರ ಎಂದರೆ ನೀವು ಹುಬ್ಬೆರಿಸಬೇಡಿ ಇದು ಹಳೆ ಹರಿಶ್ಚಂದ್ರ  ಅಲ್ಲ. ಈಗಿನ ಆಧುನಿಕ ಕಾಲಘಟ್ಟದ ಹರಿಶ್ಚಂದ್ರ. 1960 ರ ದಶಕದಲ್ಲಿ ತಯಾರಾದ ಸತ್ಯ ಹರಿಶ್ಚಂದ್ರ ಸಿನಿಮಾಗೂ ಈ ‘ಸತ್ಯ ಹರಿಶ್ಚಂದ್ರ’ನಿಗೂ ಯಾವುದೇ ಸಂಬಂಧವಿಲ್ಲ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ.

Satyaಕೆ ಮಂಜು, ಶರಣ್, ದಯಾಳ್ ಕಾಂಬಿನೇಷನ್ ಹೊಸ ಚಿತ್ರ ‘ಸತ್ಯ ಹರಿಶ್ಚಂದ್ರ’ ಕನ್ನಡ ಚಿತ್ರ ರಂಗದ ಮೂವರು ಪ್ರಮುಖರು ಒಟ್ಟಾಗಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹೆಸರಾಂತ ನಿರ್ಮಾಪಕ ಕೆ ಮಂಜು, ಹಾಸ್ಯ ಪಾತ್ರಗಳ ನಾಯಕ ನಟ ಶರಣ್ ಹಾಗೂ ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ಜೊತೆಯಾಗಿದ್ದಾರೆ ಮೂವರ ಕಾಂಬಿನೇಷನ್ ವರ್ಕೌಟ್ ಆಗುತ್ತಾ ಅಂತ ನೋಡಬೇಕು. ನಿರ್ಮಾಪಕ ಕೆ.ಮಂಜು ಅವರ 38 ನೇ ಸಿನಿಮಾ. ರೊಮ್ಯಾಂಟಿಕ್ ಕಾಮಿಡಿ ಕಥಾಹಂದರದ ‘ಸತ್ಯಹರಿಶ್ಚಂದ್ರ’ ಚಿತ್ರ ‘ಕೆ ಮಂಜು ಸಿನಿಮಾಸ್’ ಅಡಿಯಲ್ಲಿ ತಯಾರಾಗುತ್ತಿದ್ದೆ.

Satyahariಸತ್ಯಹರಿಶ್ಚಂದ್ರ’ ಚಿತ್ರಕ್ಕೆ ಮೋದಿ ರಸ್ತೆಯಲ್ಲಿ ಇರುವ ಗಣೇಶನ ದೇವಸ್ಥಾನದಲ್ಲಿ ಮೂಹೂರ್ತ ನೆರವೇರಿತು. ನಿರ್ದೇಶಕ ದಯಾಳ್ ಪದ್ಮನಾಭನ್ ತಮ್ಮ ಚಿತ್ರದ ಮೊದಲ ದೃಶ್ಯವನ್ನು ವಿಘ್ನನಿವಾರಕ ಶ್ರೀ ಗಣೇಶನ ಮೇಲೆ ಚಿತ್ರೀಕರಿಸಿಕೊಂಡಿದ್ದಾರೆ. ದಯಾಳ್ ಕನ್ನಡದಲ್ಲಿ ಅನೇಕ ಜನಪ್ರಿಯ ಸಿನಿಮಾಗಳನ್ನು ನಿರ್ದೇಶನ ಮಾಡಿದವರು. ಇದೇ ದಯಾಳ್ ನಿರ್ದೇಶನದ ‘ಆಕ್ಟರ್’ ಸಿನಿಮಾ ಇತ್ತೀಚೆಗೆ ಅನೇಕ ಪ್ರಶಸ್ತಿಗಳನ್ನು ಸಹ ಬಾಚಿಕೊಂಡಿತು. ಸತ್ಯ ಹರಿಶ್ಚಂದ್ರ ಸಿನಿಮಾಕ್ಕೆ ಮೊದಲ ಹಂತದ ಚಿತ್ರೀಕರಣ 24 ರಂದು ಶ್ರೀರಂಗಪಟ್ಟಣದಲ್ಲಿ ಪ್ರಾರಂಭವಾಗಲಿದೆ. ಆನಂತರ ಜರ್ಮನಿ, ಜೆಕ್ ರಿಪಬ್ಲಿಕ್, ಸ್ವಿಟ್ಜರ್ಲ್ಯಾಂಡ್, ಆಸ್ಟ್ರಿಯ ದೇಶಗಳಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದೆ.

Haroishandraಈ ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆ ಶ್ರೀ ಸ್ವಾಮೀಜಿ ಅವರು ಬರೆದಿದ್ದಾರೆ, ಸಂಭಾಷಣೆ – ರಘು ಸಮರ್ಥ. ಶರಣ್ ಹಾಗೂ ಚಿಕ್ಕಣ್ಣ ಹಾಸ್ಯದ ಹೊನಲು ಹರಿಸಲು ಮತ್ತೆ ಒಂದಾಗಿದ್ದಾರೆ. ವಿದ್ಯಾಲೇಖ ರಾಮನ್, ಸೀತಾ, ಶರತ್ ಲೋಹಿತಾಶ್ವ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಇರುವ ಈ ಚಿತ್ರಕ್ಕೆ ಮಲಯಾಳಂ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಫೈಜಲ್ ಅಲಿ ಅವರ ಛಾಯಾಗ್ರಹಣ ಇದೆ.

Add Comment

Leave a Reply