Quantcast

ಜಿಮ್ಮು ಯೋಗ ಮಾಡಿ ಹದದಲ್ಲಿದ್ರೆ ಚಂದ್ವಲೆ..

ಕೆರೇಕೈ ರಜನಿ ಗರುಡ 

ಏ ಕೂಸೆ ಹಿಂಗೆ ನಿಂತ್ರೆ | ಮುಂದೆ ಹ್ಯಾಂಗೆ ನೋಡದೆ ||

ಎಂಥ ಕಾಲ್ದಲಿದ್ಯ ನಾವು | ಚೂರು ಚಿಂತೆ ಇಲ್ಯನೆ ||

ಮಳೆ ಇಲ್ಲೆ ಈ ವರ್ಷ | ಕೆರೆ ಬಾವಿ ತುಂಬಿದ್ದಿಲ್ಲೆ ||

ಉದ್ದನ್ ಜಡೆ ಬಿಟ್ಕಂಬುಟ್ರೆ | ತಲೆ ಮೀಸದ ಹ್ಯಾಂಗಡೆ ||

click kavite shilabalikeನಾಲ್ಕ್ ದಿನಕ್ಕೆ ನೀರಿಲ್ಲಿ | ಕುಡಿಯಲ್ಲಷ್ಟು ಬೇಕಲೆ ||

ಮಾರುದ್ದನ್ ಜಡೆ ಈಗ | ಬಾಚಲ್ಲಂತು ಹೊತ್ತಿಲ್ಲೆ ||

ಅಂಥಾ ವಜ್ಜೆ ಜಡೆ ಈಗಾ| ನಾಟ್ಕದವ್ಕು ಬೇಕಾಜಿಲ್ಲೆ ||

ಹಂಡೆಯಂತ ಅಂಡುಕಂಡು | ಬೆಚ್ಚಿ ಆನು ಬಿದ್ನಲೆ ||

ಜಿಮ್ಮು-ಯೋಗ ಮಾಡಿ ಸ್ವಲ್ಪ | ಹದದಲ್ಲಿದ್ರೆ ಚಂದ್ವಲೆ ||

ಬ್ರಾಂಡೆಂಡ್ ವಸ್ತ್ರದ್ ಕಾಲಾ ಇದು | ಈ ಸೈಜಿಂದ್ ಸಿಕ್ತಿಲ್ಲೆ ||

ಸಿಕ್ಸ್ ಪ್ಯಾಕ್ ಇಲ್ದೆ ಇದ್ರೆ | ಯಾರು ನಿನ್ನ ನೋಡ್ತವಿಲ್ಲೆ ||

ನಮ್ಮೂರ ಘಟ್ಟ ಹತ್ತಿ ಇಳದ್ರೆ | ಬಂದ ಮೈ ಹೋಗ್ತಲೆ ||

ತ್ವಾಟಾ ಗದ್ದೆ ತಿರಗಿದ್ರಂತು | ಬಿಪಿ ಶುಗರ್ ಬರ್ತಿಲ್ಲೆ ||

ಅಪ್ಪೆಹುಳಿ ಸುರದ್ರಂತು | ಎಂತೆಂತಾ ಆಗ್ತಿಲ್ಲೆ ||

ಕಳಲೆ-ಬಸಳೆ ತಿಂದ್ರಂತು | ದೇಸಿ ಸೊಗಡು ಹೇಳ್ತವಲೆ||

ಇಂಥಾ ಡೌಲು ಕಂಡಾಗ್ಲಾದ್ರು | ಮಕಾ ಕಾಂಬಲ್ಲಾಗ್ತಿಲ್ಲೆ ||

ಮುಂದಿನ್ಸಾರಿ ತಪ್ಸದ್ ಬ್ಯಾಡಾ | ಶಿರಸಿ ಜಾತ್ರೆಗ್ ಹೋಪದೆ ||

2 Comments

  1. veena
    September 8, 2016
  2. lakshmikanth itnal
    September 7, 2016

Add Comment

Leave a Reply

%d bloggers like this: