Quantcast

ಬಿಗ್ ಬಾಸ್ ಮನೆಯ ಅತಿಥಿಗಳ್ಯಾರು

ಕಾಂಟ್ರವರ್ಸಿಗಳಿಂದ ಕೂಡಿದ ರಿಯಾಲಿಟಿ ಶೋ ಎಂದ್ರೆ ಎಲ್ಲರಿಗೂ ನೆನಪಾಗುವುದು ಬಿಗ್ ಬಾಸ್. ಕನ್ನಡ ಬಿಗ್ ಬಾಸ್ 4 ಸೀಸನ್ ಅಕ್ಟೋಬರ್ ನಲ್ಲಿ ಆರಂಭವಾಗಲಿದೆ ಎಂಬ ಸುದ್ದಿ ಕಳೆದ ವಾರದಿಂದ ಹರಿದಾಡುತ್ತಿದೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಯಾರು ಯಾರು ಇರುತ್ತಾರೆ ಎನ್ನುವುದು ಕೂತುಹಲಕರ ವಿಷಯ.

sudharaniಈ ಬಾರಿಯೂ ಕೂಡಾ ಬಿಗ್ ಬಾಸ್ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲೇ ಪ್ರಸಾರವಾಗಲಿದ್ದು, ಈ ಸರಿಯೂ ಕಿಚ್ಚ ಸುದೀಪ್ ಅವರೇ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.

raginiಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲಾ ಇರುತ್ತಾರೆ ಎನ್ನುವುದು ಇಂಟ್ರಸ್ಟಿಂಗ್ ವಿಷಯ. ನಟ ನವೀನ್ ಕೃಷ್ಣ, ತುಪ್ಪದ ಹುಡುಗಿ ರಾಗಿಣಿ, ಲೂಸ್ ಮಾದ ಯೋಗಿ, ಕಾಮಿಡಿ ಕಿಂಗ್ ಕೋಮಲ್, ತಿಥಿ ಚಿತ್ರದ ಗಡ್ಡಪ್ಪ, ಜಂಭದ ಹುಡಗಿ ಪ್ರಿಯಾ ಹಾಸನ್, ಪತ್ರಕರ್ತೆ ಶೀತಲ್ ಶೆಟ್ಟಿ. ಸ್ಯಾಂಡಲ್ ವುಡ್ ಸುಂಟರಗಾಳಿ ಎಂದೇ ಖ್ಯಾತರಾದ ರಕ್ಷಿತಾ ಪ್ರೇಮ್, ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರ ಹೆಸರು ಕೂಡಾ ಕೇಳಿ ಬರುತ್ತಿದೆ. ಇವರ ಜೊತೆಗೆ ಸುಧಾರಾಣಿ, ಅನು ಪ್ರಭಾಕರ್, ತಾರಾ, ಮುಂತಾದವರ ಹೆಸರುಗಳು ಕೇಳಿ ಬರುತ್ತಿದೆ.

 

Add Comment

Leave a Reply