Quantcast

ಮಹಾಲಯ ಅಮವಾಸ್ಯೆಯಂದು ‘ದೊಡ್ಮನೆ ಹುಡ್ಗ’

ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ‘ದೊಡ್ಮನೆ ಹುಡ್ಗ’ ಚಿತ್ರ ಬರುವ ಶುಕ್ರವಾರ 23 ಕ್ಕೆ ತೆರೆ ಕಾಣಬೇಕಿತ್ತು. ಆದರೆ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಒಂದು ವಾರ ಚಿತ್ರ ಬಿಡುಗಡೆಯನ್ನು ಮೂಂದೂಡಿದ್ದಾರೆ ಅಂದರೆ 23 ಕ್ಕೆ ಬದಲಾಗಿ 30 ಕ್ಕೆ ಬಿಡುಗಡೆಗೊಳ್ಳಲಿದೆ.

dodmane-hudgaಬಿಡುಗಡೆಗೂ ಮುನ್ನ ಹಾಡುಗಳಿಂದಲೇ ಸುದ್ದಿ ಮಾಡಿದ ಚಿತ್ರ ದೊಡ್ಮನೆ ಹುಡ್ಗ. ‘ತ್ರಾಸ ಆಕೈತಿ’ ಎನ್ನುವ ಹಾಡು ದೊಡ್ಡ ಹೈಪ್ ಕ್ರಿಯೇಟ್ ಮಾಡಿದೆ.  ಉತ್ತರ ಕರ್ನಾಟಕದ ಖಡಕ್ ಜವಾರಿ ಭಾಷೆಯಲ್ಲಿ ಚಿತ್ರ ತಯಾರಾಗಿದೆ.

dodmne_hudgaಪುನೀತ್ ಅವರ 25 ನೇ ಚಿತ್ರವಿದು. ನಿರ್ದೇಶಕ ಸೂರಿ ಜೊತೆ ಇದು 3ನೇ ಚಿತ್ರ ಹಾಗೂ ರಾಧಿಕಾ ಪಂಡಿತ್ ಅವರ ಜೊತೆ ಎರಡನೇ ಚಿತ್ರವಾಗಿದೆ. ಈ ಚಿತ್ರದಲ್ಲಿ ರಾಧಿಕಾ ಪಂಡಿತ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ.

ದೊಡ್ಮನೆ ಹುಡ್ಗ ಚಿತ್ರದಲ್ಲಿ ಬಹುತೇಕ ಹಿರಿಯ ಕಲಾವಿದರಿದ್ದಾರೆ ಭಾರತಿ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಷ್, ಸುಮಲತಾ, ರವಿಶಂಕರ್, ರಂಗಾಯಣ ರಘು ಸೇರಿದಂತೆ ಹಲವು ಪ್ರಮುಖರು ಮುಖ್ಯಭೂಮಿಕೆಯಲ್ಲಿದ್ದಾರೆ. ಸಿನಿಮಾಗೆ ಸತ್ಯಹೆಗಡೆ ಛಾಯಗ್ರಾಹಣ, ಹರಿಕೃಷ್ಣ ಅವರ ಸಂಗೀತವಿದೆ. ಗೋವಿಂದ ಚಿತ್ರ ನಿರ್ಮಾಣ ಮಾಡಿದ್ದಾರೆ.

Add Comment

Leave a Reply