Quantcast

ಏನಾಗುತ್ತೆ ಬಿಡಿ ಸಾರ್..

ಸುಧಾ ಚಿದಾನಂದ ಗೌಡ 

“ಎಲ್ಲಾ ಮಾಧ್ಯಮಗಳನ್ನೂ ಒಂದು ವಾರ ಮುಚ್ಚಿ ನೋಡಿ. ಆಗ ಗೊತ್ತಾಗುತ್ತದೆ.”

ಏನಾಗುತ್ತೆ….?!
ಮನೆ ತಣ್ಣಗಿರುತ್ತೆ.

mediaಮಕ್ಕಳು ಸುಮ್ಮನೆ ಕೂತ್ಕೊಂಡು, ಏಕಾಗ್ರತೆಯಿಂದ ಓದ್ಕೋತಾರೆ.
ಮನೆಯೊಡತಿ ತಂಗಳು ಬಿಸಿಮಾಡುವುದು ಬಿಟ್ಟು ಏನಾದರೂ ಹೊಸರುಚಿ ಟ್ರೈ ಮಾಡ್ತಾಳೆ.
ಮನೆಯೊಡೆಯ ಮಕ್ಕಳ ಹೋಂ ವರ್ಕ್ ಗಮನಿಸ್ತಾನೆ. ಹೆಂಡತಿ ಜೊತೆ ಮಾತಾಡ್ತಾನೆ.

ಕಸೂತಿ, ರಂಗೋಲಿ ಪುಸ್ತಕಗಳಿಗೆ ಮತ್ತೆ ಜೀವ ಬರುತ್ತೆ.
ಹೊಸ ರೇಷ್ಮೆಸೀರೆಗೆ ಸೊಗಸಾದ ಕುಚ್ಚು ಮನೇಲೇ ಸಿಂಗಾರವಾಗುತ್ತೆ.

ಅಂತ್ಯಾಕ್ಷರಿ ಮಾಧುರ್ಯ ಮನೆದುಂಬುತ್ತೆ.
ಕವಡೆ, ಚೆಸ್, ಕೇರಂ ಬೋರ್ಡುಗಳಿಗೆ ಹೊಸ ಕಳೆ ಪ್ರಾಪ್ತವಾಗುತ್ತೆ.

ನೆಂಟರಷ್ಟರು, ಸ್ನೇಹಿತರು ಯಾರಾದರೊಬ್ಬರ ಅಂಗಳದಲ್ಲಿ ನೆರೆದು ಆಪ್ತವಾಗಿ ಹರಟುತ್ತಾರೆ..
ಸಾಹಿತ್ಯಪಾಹಿತ್ಯ ಸಂಗೀತಪಂಗಿತ ಗಳಿಗೆಲ್ಲಾ ಮತ್ತೆ ಜಾಗ ಸಿಗುತ್ತೆ ಮನೇಲಿ

ವೀಕೆಂಡ್ ಗೆ ಸ್ಥಳೀಯ ಐತಿಹಾಸಿಕ ಇತ್ಯಾದಿ ಜಾಗಗಳಿಗೆ ಹೋಗುವ ಹುಮ್ಮಸ್ಸು ಮರುಕಳಿಸುತ್ತದೆ.

ಒಂದಿಷ್ಟು ಫ್ರೆಶ್ ಗಾಳಿ ಶ್ವಾಸಕೋಶ ಸೇರ್ಕೋಳುತ್ತೆ. ಆರೋಗ್ಯ “ಅಬ್ಬಾ, ಬದುಕಿದೆ” ಅಂದ್ಕೊಳುತ್ತೆ.

ಹಾಗಾಗಿ, ಎಲ್ಲರೂ ದಯಮಾಡಿ ಒಂದು ವಾರ ಟಿವಿ ಬಂದ್ ಮಾಡ್ಕೊಳಿ.
ಎಷ್ಟು ಚೆನಾಗಿರುತ್ತೆ ಅಂತ ಆಗ ಗೊತ್ತಾಗುತ್ತದೆ…ರಿಯಲಿ..!

ಬಿಟ್ಟೆನೆಂದರೆ ಬಿಡದ ಮಾಯೆ…. ವಾರವಾದ ಮೇಲೆ ಚಂದನ ಟಿವಿ ಹಾಕ್ಕೊಂಡ್ರಾಯ್ತು..
ಉಳಿದಂತೆ ಟಿವಿ ಆಫ್ ಮಾಡಿಕೊಂಡ್ರೆ…ಬಿಡಿ ಸರ್ ಒಳ್ಳೆದೇ ಆಗುತ್ತೆ..

ಅಂಥದ್ದೇನೂ ಮುಳುಗಿಹೋಗಲ್ಲ… ಅಲ್ವೇ..?

One Response

  1. ಸದಾಶಿವ್ ಸೊರಟೂರು
    September 15, 2016

Add Comment

Leave a Reply

%d bloggers like this: