Quantcast

ಅರೆರೇ ! ಹೇಳಲು ಮರೆತಿದ್ದೆ..

ಮೂರುವರೆ ಯುಗ…

ನಾಗೇಶ ಮೈಸೂರು

ಕಡೆಗೂ ಸಿಕ್ಕಿತು ರಹದಾರಿ
ತೆರೆದು ದಿಡ್ಡಿ ಬಾಗಿಲು
ಕಾಲದತ್ತ ನಡಿಗೆ
ಭೂತ-ಭವಿತ, ಪ್ರಸ್ತುತದಿಂದ.

click_aytu_kaviteಕಾಲ ಯಾನದ ಯಂತ್ರ
ಇಷ್ಟು ಸರಳ ಸುಲಭದ್ದೆಂದು
ಯಾವ ವಿಜ್ಞಾನಿಗೂ ಕೂಡಾ
ಇಲ್ಲಿತನಕ ಹೊಳೆದೇ ಇರಲಿಲ್ಲ !
ಪುಟ್ಟ ಬಾಲನೂ ಬೆನ್ನಲ್ಲಿ
ಹೊತ್ತು ನಡೆಯುವಾ ಜಗ
ಕಲ್ಪನೆಯ ಮೂಸೆಯಲಿ ಪಯಣ
ಹೆಜ್ಜೆಗೊಂದೊಂದೆ ತೆರೆದು ಹೆಬ್ಬಾಗಿಲು.

ಇಟ್ಟುಕೊ ಬೆನ್ನಿಗೆ ಆನಿಸಿ
ಕಪ್ಪು ಬಿಳುಪಾಗುತ ವಾಸ್ತವ
ಅದು ಭೂತಕೆ ನಡೆವ ವಿಧಾನ !
ತೆಗೆದಿಟ್ಟುಕೊ ಮುಂದೆ ಎದೆಗೆ
ಹೃದಯ ಬಡಿತದ ಕಡೆಗೆ
ಬಣ್ಣಬಣ್ಣ ರಂಗಿನ ಭವಿಷ್ಯದ ಜಾಗ !!
ಮತ್ತೇನಿಲ್ಲ ಕೀಲು, ಕಡ್ಡಿ, ಗುಂಡಿ
ಬೇಕೆಂದಾಗ ಮನಸೊಂದೆ ಅಡ್ಡಿ.

ಅರೆರೇ ! ಹೇಳಲು ಮರೆತಿದ್ದೆ

ಜೋತುಬಿದ್ದಾ ಕಾಲನೇಮಿ – ಮನಸು
ಜೊತೆಗೆ ಮೂರುವರೆ ಯುಗ ದಾಟಿದ್ದೂ
ಕಣ್ಣಿರದ ಬೆನ್ನಿಗೆ ಆತು ಕೂತೆ ;
ಹೊಂಡದಿಂದೆದ್ದು ಬಂದರು ಬೆನ್ನಲ್ಲೆ
ಕೂತು ತೆರೆದು ವಿಶಾಲ ಜಗ ವಿಸ್ತಾರ
ಕುದುರೆ ಮೈದಾನ ಕನಸು ಪ್ರಾಯ
ತಾನಾಗಿ ಅಶ್ವಮೇಧ ಯಾಗಾಶ್ವ.

ಕಂಡಿತೇನು ಹೆಜ್ಜೆ ಗುರುತು, ಸದ್ದು ?
ಅದೇ ಮಿಕ್ಕರ್ಧದ ನೇರ ಹಾದಿ.

2 Comments

  1. Sangeeta Kalmane
    September 16, 2016
    • Nagesha Mysore
      September 16, 2016

Add Comment

Leave a Reply