Quantcast

ನಿಸರ್ಗ ನಿಯಮವೇ ಬಿಡು !

ಗೀರ್ವಾಣಿ ಭಟ್ 

ಇದೆಲ್ಲ ನಿಸರ್ಗ ನಿಯಮವೇ ಬಿಡು
ನೀನು ಉಕ್ಕಿ ಬಂದಿದ್ದು
ನಾನು ಕೆನ್ನೀರಾಗಿ ಹರಿದಿದ್ದು,

sheನೀನು ಗೋಡೆ ಕಟ್ಟಿದ್ದು
ನಾನು ಕೆಡವಲು ನೋಡಿದ್ದು.

ನೀನು ಗೆರೆ ಎಳೆದಿದ್ದು
ನಾನು ದಾಟದೇ ನಿಂತಿದ್ದು.

ನೀನು ದಾಖಲೆ ಕೇಳಿದ್ದು
ನಾನು ಪುರಾವೆ ನೀಡಿದ್ದು
ಎಲ್ಲ ನಿಸರ್ಗ ನಿಯಮವೇ ಬಿಡು.

ನೀನು ಕೋಣೆ ಬಾಗಿಲು ಮುಚ್ಚಿದ್ದು
ನಾನು ನಿಂತಲ್ಲೇ ಬಯಲಾಗಿದ್ದು.

ನಾನು ವಡ್ಡು ಕಟ್ಟಿದ್ದು
ನೀನು ಕೊಚ್ಚಿಕೊಂಡು ಹೋಗಿದ್ದು.

ನಾನು ಮುಷ್ಠಿ ಬಿಗಿ ಹಿಡಿದಿದ್ದು
ನೀನು ನುಣುಚಿಕೊಂಡು ಹೋಗಿದ್ದು
ಇದೆಲ್ಲ ನಿಸರ್ಗ ನಿಯಮವೇ !.

ನಾನು ಬೇಡಿ ಸೆರಗೊಡ್ಡಿದ್ದು
ನೀನು ಎದೆ ಸೆಟೆದು ನಡೆದಿದ್ದು,

ನಾನು ಸೆರಗು ಹಾಸಿದ್ದು
ನೀನು ಮರೆತಂತೆ ಮಲಗಿದ್ದು
ನಾನು ಒದ್ದೆಯಾಗಿದ್ದು
ನೀನು ರಸ ಹೀನವಾಗಿದ್ದು
ಎಲ್ಲವೂ ನಿಸರ್ಗ ನಿಯಮವೇ

ಕೊನೆಗೆ ಪ್ರೀತಿ ಬಸಿರಾಗಿ
ಕೂಸು ನಿನ್ನ ಬಿಟ್ಟು ಇನ್ಯಾರನ್ನೋ ಹೋಲಿದರೂ
ನಿಸರ್ಗ ನಿಯಮವೇ ಬಿಡು !

3 Comments

  1. nirmala I shettar
    September 16, 2016
  2. Sangeeta Kalmane
    September 16, 2016

Add Comment

Leave a Reply