Quantcast

ಎತ್ತಿಗೆ ಜ್ವರ ಎಮ್ಮೆಗೆ ಬರೆ !

ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ಗೆ ಡೆಂಘಿ ಜ್ವರ ಬಂದಿದೆ. ಆದ್ರೆ ಬಿಎಂಸಿ ಅವರು ನಟ ಶಾಹಿದ್ ಕಪೂರ್ ಗೆ ನೋಟಿಸ್ ನೀಡಿದ್ದಾರೆ. ಏಕೆಂದರೆ ವಿದ್ಯಾ ಬಾಲನ್ ನೆರೆ ಮನೆಯವರೇ ಶಾಹಿದ್ ಕಪೂರ್. ಎತ್ತಿಗೆ ಜ್ವರ ಬಂದ್ರೇ ಎಮ್ಮೆಗೆ ಬರೆ ಎಂಬಂತಾಗಿದೆ.

ಇವರಿಬ್ಬರ ಮನೆ ಇರುವುದು ಮುಂಬೈ ಜೂಹು ತಾರಾ ಅಪಾರ್ಟ್ ಮೆಂಟ್ ದಲ್ಲಿ. ಅಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ತಡೆಯಲು ಶಾಹಿದ್ ವಿಫಲರಾಗಿದ್ದಾರೆ ಎನ್ನುವ ಕಾರಣಕ್ಕೆ ಶಾಹಿದ್ ಗೆ ನೋಟಿಸ್ ನಿಡಲಾಗಿದೆ.

ಶುಕ್ರವಾರ ಬಿಎಂಸಿ ಅಧಿಕಾರಿಗಳು ಜುಹು ಅಪಾರ್ಟ್ ಮೆಂಟ್ ಪರಿಶೀಲನೆ ನಡೆಸಿದ್ದಾರೆ ಆವಾಗ ಶಾಹಿದ್ ಕಪೂರ್ ಮನೆಯ ಸ್ವಿಮ್ಮಿಂಗ್ ಪೂಲ್ ಬಳಸದೆ ಹಾಗೇ ಬಿಟ್ಟಿರೋದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಶಾಹಿದ್ ಸೊಳ್ಳೆಗಳ ಉತ್ಪತ್ತಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಅನ್ನೋ ಕಾರಣಕ್ಕೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಮುಂಬೈನಲ್ಲಿ ದಿನೇ ದಿನೇ ಡೆಂಘಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. 11 ದಿನಗಳಲ್ಲಿ 1500 ಮಂದಿ ಆಸ್ಪತ್ರೆಗೆ ದಾಖಲಾಗಿರೋದು ಎಲ್ಲರಲ್ಲಿ ಆತಂಕ ಮೂಡಿಸಿದೆ.

Add Comment

Leave a Reply