Quantcast

ಅಯ್ಯೋ ಅಯ್ಯೋ ಅಯ್ಯೋ..

ಶ್ರೀವಿದ್ಯಾ 

ಸುಧಿಯ ಆಫೀಸ್ ಸಹದ್ಯೋಗಿಯೊಬ್ಬರ ಮದುವೆ ರಿಸೆಪ್ಶನ್….

ಮದುವೆ ಗಂಡು ಚೆನ್ನೈ ಯವರು, ಹುಡುಗಿ ಇಂಡೊನೀಷಿಯನ್.

ಮದುವೆ ಆಗ್ಲೇ, ಇಂಡಿಯನ್ ಶೈಲಿಯಲ್ಲಿ ನಡೆದಿದೆ. ಇದೀಗ ರಿಸೆಪ್ಶನ್ ಕ್ರಿಸ್ಚಿಯನ್ ಧರ್ಮದ ಪ್ರಕಾರ..

ನಮಗೂ ಇತ್ತು ಆಮಂತ್ರಣ ..

bow5 ಸ್ಟಾರ್ ಹೋಟೆಲ್ ನಲ್ಲಿ ಕಾರ್ಯಕ್ರಮ… ಸಿಂಗಪುರ್ ಬಂದ ಮೇಲೆ ಇಂಡಿಯನ್ ಕಾರ್ಯಕ್ರಮ ಬಿಟ್ರೆ.. ಇದೇ ಮೊದಲು ನಮಗೆ ಇಂತಹ ಫಂಕ್ಶನ್.

ರಿಸೆಪ್ಶನ್ ಅಟೆಂಡ್ ಆಗೋದು ಗ್ಯಾರಂಟಿ ಆಯಿತು.. 2 ದಿನಗಳ ನಂತ್ರ .. “ಫಂಕ್ಶನ್ ಹೋಗೋದಾದ್ರೆ, ಟೇಬಲ್ ಬುಕ್ ಮಾಡ್ಬೇಕು, ಜೊತೆಗೆ ಎಷ್ಟು ಜನ ಬರೋದನ್ನ ಖಚಿತಪಡಿಸ್ಬೇಕು”..ಅನ್ನೋ ವಿಷಯ ತಿಳೀತು.. ಸರಿ ಅದೂ ಮಾಡಿದ್ದಾಯಿತು..

ಈಗ ಉಡುಗೊರೆ ಸರದಿ.. ಏನು ಕೊಡೋದು ಅನ್ನೋ ಪ್ಲಾನ್ ನಲ್ಲಿರೋವಾಗ.. ಮತ್ತೆ.. “ಓನ್ಲೀ ಕ್ಯಾಶ್ …ನೋ ಗಿಫ್ಟ್” ಅಂತೇ ಅನ್ನೋದು ಗೊತ್ತಾಯಿತು.. ಗಿಫ್ಟ್ ಸರ್ಚ್ ಮಾಡೋ ಕೆಲ್ಸ ಉಳೀತು ತಿಳ್ಕೊಂಡ್ರೆ.. ಕಾರ್ಯಕ್ರಮ ನಡಿಯೋ ಜಾಗದ ಮೇಲೆ ಡಿಪೆಂಡ್ ಅಂತೇ…

ಕಟ್ಟಡದ ಬೇಸ್‌ಮೆಂಟ್ ನಲ್ಲಿ ಶಾಮಿಯಾನ ಹಾಕಿ, ಚಿಕ್ಕ ಪುಟ್ಟ ಹಾಲ್ ಗಳು, ಕಂಟ್ರೀ ಕ್ಲಬ್, ಸ್ಟಾರ್ ಹೋಟೆಲ್ ಇತ್ಯಾದಿ ಇತ್ಯಾದಿ. .. ಹೇಳಿ ಕೇಳಿ.. ನಾವು ಹೋಗ್ತಿರೋ ಫಂಕ್ಶನ್ 5 ಸ್ಟಾರ್ ಹೋಟೆಲ್ .. ನಿಜವಾಗ್ಲೂ.. ಪಕ್ಕಾ ಇಂಡಿಯನ್ ಆಗಿ ಲೆಕ್ಕಾಚಾರ ಮಾಡಿದ್ದು ಇಲ್ಲಿ..

ಯಾಕೆಂದ್ರೆ.. ನಾವು 5 ಸ್ಟಾರ್ ಹೋಟೆಲ್ ಸ್ಟೇಟಸ್ ಗೆ ಸರಿಯಾಗಿ.. ಉಡುಗೊರೆಯಾಗಿ ಕೊಡಬೇಕಿದ್ದ ಹಣ.. ಕಡಿಮೆ ಅಂದ್ರೆ 250 ಡಾಲರ್ ನಿಂದ 300 ಡಾಲರ್.. ಹೋಲಿಸಿದ್ರೆ, ಬರೋಬ್ಬರಿ 25,000 ದಿಂದ 30,000..

ಯಾಕೆ ಅಷ್ಟೊಂದು ಕೇಳಿದ್ರೆ.. ಅದು ಅವರ ಸಂಸ್ಕೃತಿ ಅಂತೇ..

ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ..
( ಮುಂದಿನ ಸಾಲುಗಳು ನಿಮ್ಗೆ ಬಿಟ್ಟಿದ್ದು….)

Add Comment

Leave a Reply

%d bloggers like this: