Quantcast

ಗೋಪಾಲ ವಾಜಪೇಯಿ ಕಾಕಾ ಇನ್ನಿಲ್ಲ: ಸುದ್ದಿ ಸುಳ್ಳ ಆಗಲ್ಯೋ ಎಪ್ಪಾ!

ಸುದ್ದಿ ಸುಳ್ಳ ಆಗಲ್ಯೋ ಎಪ್ಪಾ!, …..ಸುದ್ದಿ ಸುಳ್ಳ ಆಗಲಿ. ..

ಅಣ್ಣ ಗೋಪಾಲ ವಾಜಪೇಯಿ ಅವರ ಧಾರವಾಡದವರ ಕುರಿತ ಮೊದಲನೆ ಕಂತನ್ನು ಓದಿ ಈಗಷ್ಟೆ ಕಮೆಂಟ್ ಹಾಕಲು ಬಯಸಿದ್ದವಗೆ ಬರಸಿಡಿಲಿನಂತೆ ಈ ಸುದ್ದಿ ಓದಬೇಕಾಗಿ ಬಂದದ್ದು ನಾಡಿನ ದುರದೃಷ್ಟ.

ಅವರೊಬ್ಬ ಸಂತನಂತಹ ವ್ಯಕ್ತಿತ್ವದ, ಎಲ್ಲರೊಂದಿಗೂ ಬೆರೆಯುವ ಹಸನ್ಮುಖಿ ವ್ಯಕ್ತಿ. ಹಿರಿಯ ಲೇಖಕ, ಕವಿ. ನಾಟಕಕಾರ, ಪತ್ರಕರ್ತ, ….ಒಬ್ಬ ಅತ್ಯುತ್ತಮ ಶ್ರೇಷ್ಠವೆನ್ನಬಹುದಾದ ಸಹೃದಯ ನಾಗರೀಕ.

ಅವರು ಕನ್ನಡ ಸಾರಸ್ವತ ಲೋಕದಿಂದ ಕಂಬದ ಮ್ಯಾಲಿನ ಗೊಂಬೆಯಂತೆ ಅಲ್ಲಿಂದಲೇ ಕಣ್ಮರೆಯಾಗಿದ್ದು, ದು:ಖ ಸಹಿಸದಾಗಿದೆ.

ಹಳೆಯ ಧಾರವಾಡದ ಜಿಲ್ಲೆಯ ಲಕ್ಷ್ಮೇಶ್ವರದವರಾದ ಶ್ರೀಯುತರ ಆತ್ಮಕ್ಕೆ ಈ ಮೂಲಕ ಆದರಪೂರ್ವಕ ಶೃದ್ಧಾಂಜಲಿಗಳು. ಅವರ ಆತ್ಮಕ್ಕೆ ಚಿರಶಾಂತಿ ನೆಲೆಸಲಿ. ಗೋಪಾಲ ಜಿ ರವರ ಕುಟುಂಬ ವರ್ಗಕ್ಕೆ ಈ ದು:ಖವನ್ನು ಸಹಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸುವೆ.

ಲಕ್ಷ್ಮೀಕಾಂತ ಇಟ್ನಾಳ 

Add Comment

Leave a Reply