Quantcast

ಗೋಪಾಲ ವಾಜಪೇಯಿ ಕಾಕಾ ಇನ್ನಿಲ್ಲ: ನೋವುಂಟಾಗಿದೆ

ಆಗ ನಾನು “ಕಸ್ತೂರಿ” ವಾಹಿನಿಯಲ್ಲಿ ಕಾರ್ಯಕ್ರಮ ನಿರ್ವಾಹಕನಾಗಿ, ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ.

“ಕಾವ್ಯಧಾರೆ” ಎಂಬ ಕಾರ್ಯಕ್ರಮದ consept ನಿರ್ದೇಶನ ನನ್ನದಾಗಿತ್ತು. ಗೋಪಾಲ ವಾಜಪೇಯ (ಯಾಗ್ನವಲ್ಕ) ಅವರನ್ನು ಹೈದರಾಬಾದಿನಿಂದ ೪.೯.೨೦೦೮ರಂದು ಕರೆಯಿಸಿದ್ದೆವು.

ಅವರಿಗೆ ಗಾಂಧಿನಗರದ ಮೋತಿ ಮಹಲ್ ಲಾಡ್ಜ್ ವಾಸ್ತವ್ಯ. ಕಂಠೀರವ ಸ್ಟುಡಿಯೋದ ಹೋರಾಂಗಣದ ಹುಲ್ಲು ಹಾಸಿನ ಮೇಲೆ ನಡೆದಾಡುತ್ತ ಸಂದರ್ಶನ ಮಾಡಿದ್ದೆವು. Anchor ಅಮೃತಾ ನಾಯ್ಡು ಅವರ ಸಿನಿಮಾ ಸಂಬಂಧದ ಸಂಭಾಷಣೆ, ಗೀತರಚನೆ ಬಗ್ಗೆ ಕೇಳಿದ್ದಳು.

ಅದು ಎರಡು ಭಾಗದ ಅತ್ಯುತ್ತಮ ಸಂದರ್ಶನ. ಮುಂದೆ ಅವರು ಬೆಂಗಳೂರಿಗೆ ಬಂದು ನಮ್ಮ ಮನೆ ಹತ್ತಿರವೇ (AG’S layout) plot ಖರೀದಿಸಿದ್ದರು… ಅಪಾರ ಕಷ್ಟಜೀವಿಯಾಗಿ, “ಸಂಯುಕ್ತ ಕರ್ನಾಟಕ”ದಲ್ಲಿ ದುಡಿದು ಶಾಮರಾಯರಿಗೆ ಹೆದರಿ “ಯಾಗ್ನವಲ್ಕ್ಯ” ಆದ ಕತೆಯು ಸ್ವಾರಸ್ಯ.

ಅವರ ನಿಧನದಿಂದ ನನಗೆ ನೋವುಂಟಾಗಿದೆ.

ಆರ್ ಜಿ ಹಳ್ಳಿ ನಾಗರಾಜ್ 

Add Comment

Leave a Reply