Quantcast

ನೆರಳಿಗಿಂತ ಜೊತೆಗಾರನಿಲ್ಲ

nalina d1ನಳಿನ ಡಿ

ರಸ್ತೆ ಖಾಲಿಯೇ ಇರಬಹುದು ತಮ್ಮಾ,
ಮನಸು ಎಲ್ಲಿ ಖಾಲಿ ನಿಲ್ಲತ್ತೈತಿ ಹೇಳ,

ಗಡಿಯಾರದಾಂಗ ಮೆಲ್ಲನೆ, ಬೇಗನೆ
ಕಳೆದು ಹೋಗತೈತಾ,
ಜತೆಗೆ ನಮ್ಮ ನಮ್ಮದನ್ನು ಒಮ್ಮೊಮ್ಮೆ ಕೂಡಿಸಿ ಕೊಡತ್ತೈತಾ ತಮ್ಮಾ.

eye_clock-370x315ಜಾಗೃತಿ ಏಕೆ, ಜಗದ ಎಚ್ಚರ ತಲಿ ಒಳಗಾ ಹೇಳತೈತಿ
ಬೆನ್ನಿನ ಮೇಲೆ ಹೊತ್ತ ಹೊರೆಯೇ ತಿಳಿಸತೈತಾ ತಮ್ಮಾ.

ಇದೇ ಸಮಯ, ಇದೇ ಸಾಲ, ಇಂದೇ ಬಾಬ್ತೆಂದು
ಜೀವ ಹೊತ್ತ ಬಾದೆಗಳೇ ನೆನಪಿಸುತಾವಾ ಕಾಲವಾ.

ಕೂಡಬೇಡ ಸುಮ್ಮನೆ, ಸೇರಬೇಡ ಕೆಟ್ಟ ಕೂಟ,
ಮುಳುಗಬೇಡ ಚಿಂತಿ ಒಳಗ,
ಅಂತಲೇ
ಗಟ್ಟಿ ಹಿಡಿಯಬೇಕಾ ತಮ್ಮ
ಕಾಲದ ಹೆಜ್ಜೆಗಳ ನಾನು
ಸಮರ್ಥವಾಗಿ ಹಿಡಿಬೇಕಾ ತಮ್ಮಾ.

ಭಾರಿ ಚಲುವು, ದೂರದ ನೋಟ,
ಹಂಗೇ ಇರದು ನಡೆದರ ಹೆಜ್ಜೆಗುಂಟ,
ಬಂದೇ ಬರುತ್ತೆ ಹೊಸ ಕಾಲ ತಮ್ಮಾ
ನಮ್ಮದ ನಾವಾ ನಡದೇ ತೀರಬೇಕಾ ತಮ್ಮಾ
ಇಲ್ಲಿಲ್ಲ ತಮ್ಮಾ, ನಮ್ಮನ್ನ ನಡೆಸತೈತೆ ಕಾಲ,
ನುಂಗದ ಹಂಗೆ ಜೀವವ ಹಂಗೆ ಬಿಟ್ಟು
ನಡೀ ಮುಂದ ಅನ್ನತೈತೆ. ಕಾಲ ಮುಂದಕ ಸೂಚಿಸತೈತೆ.

ನಮ್ಮ ಕಾಲಿನ ಧೂಳು ಯಾರಿಗೂ ಕಾಣದೋ ತಮ್ಮ,
ನಮ್ಮ ದಾರಿಯ ಪಾಪದ ಕೊಳೆ ಕಾಲನ ಎದುರು ಕನ್ನಡಿ ನೋಡಾ,

ಒಳಗೂ ಹೊರಗು ಎಚ್ಚರ ಇರಬೇಕಾ ತಮ್ಮ,
ಸ್ವಚ್ಛಂಧವಾಗಿ ಹಾರಿ ಹಕ್ಕಿ ಹಂಗ ಬದುಕಿ ನೋಡಬೇಕೋ ತಮ್ಮ.

ಒಂಟೊಂಟಿ ಅನಬ್ಯಾಡೋ ತಮ್ಮಾ,
ನೆರಳಿಗಿಂತ ಜೊತೆಗಾರನಿಲ್ಲ,
ಅಂಟಂಟಿ ಬರತಾನ ತಮ್ಮ,
ಕಾಲದ ಮ್ಯಾಲೂ ಬಹುಶಃ ನನ್ನ ಪಕ್ಕ ಅವನ ನೆರಳಿಗೊಂದು ನೆರಳೂ
ಇರಬಹುದೇನೋ ತಮ್ಮಾ?

Add Comment

Leave a Reply